ತ್ರಿಪುರದೊಂದಿಗೆ ನಾಗಾಲೋಟ


Team Udayavani, Mar 4, 2018, 9:20 AM IST

tripura.jpg

ಈಶಾನ್ಯ ರಾಜ್ಯಗಳಾದ ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ರಾಜ್ಯಗಳ ವಿಧಾನಸಭೆ ಚುನಾವಣಾ ಫ‌ಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಮೈತಿಕೂಟ ಎರಡು ರಾಜ್ಯಗಳ‌ಲ್ಲಿ ಜಯಗಳಿಸಿದೆ. ಇನ್ನು ಮೇಘಾಲಯದಲ್ಲಿ ಅತಂತ್ರ ವಿಧಾನ ಸಭೆ ಸೃಷ್ಟಿಯಾಗಿದ್ದು, ಇಲ್ಲೂ ನಾವೇ ಸರಕಾರ ರಚಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಅಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಿಸಿದ ಪಕ್ಷವೆಂದೆನಿಸಿದ್ದರೂ ಸರಕಾರ ರಚನೆ ಅದರ ಪಾಲಿಗೆ ಇನ್ನೂ ಮರೀಚಿಕೆಯಾಗಿದೆ. ಹಾಗಾಗಿ, ಮೂರಕ್ಕೆ ಮೂರು ರಾಜ್ಯಗಳಲ್ಲೂ ಬಿಜೆಪಿ ಸರಕಾರ ಬರುವುದು ಖಾತ್ರಿಯಾದಂತಾಗಿದೆ.

ಕೆಂಪು ಕೋಟೆ ಛಿದ್ರ
ಅಗರ್ತಲಾ: ಎಡಪಕ್ಷಗಳ ಭದ್ರ ಕೋಟೆ ಎಂದೇ ಪ್ರಸಿದ್ಧಿಯಾಗಿದ್ದ ತ್ರಿಪುರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯ ಕೇಸರಿ ಧ್ವಜ ರಾರಾಜಿಸಿದೆ. ಮೋದಿ ಅಲೆಗೆ ಸರಳ ವ್ಯಕ್ತಿ ಎಂದೇ ಖ್ಯಾತಿವೆತ್ತಿರುವ ಮಾಣಿಕ್‌ ಸರ್ಕಾರ್‌ ಸೋತು ಸುಣ್ಣವಾಗಿದ್ದಾರೆ.

ಮಾಣಿಕ್‌ ಸರ್ಕಾರ್‌ ಅವರ 25 ವರ್ಷಗಳ ಸುದೀರ್ಘ‌ ಆಡಳಿತವನ್ನು ಕೊನೆಗಾಣಿಸಿರುವ ಬಿಜೆಪಿ, ಈಶಾನ್ಯ ಭಾರತದಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಂಡಿದೆ. ನಿರೀಕ್ಷೆಗೂ ಮೀರಿ ಸಾಧನೆ ಮಾಡಿರುವ ಅದು, ಸ್ವತಂತ್ರವಾಗಿಯೇ 35ರಲ್ಲಿ ಗೆದ್ದಿದೆ. ಇನ್ನು ಅಂಗಪಕ್ಷ ಇಂಡಿಜೀನಿಯಸ್‌ ಪೀಪಲ್ಸ್‌ ಫ್ರಂಟ್‌ ಕೂಡ 8ರಲ್ಲಿ ಗೆದ್ದಿದ್ದು, ಸಿಪಿಎಂ ಅನ್ನು 16ಕ್ಕೆ ಇಳಿಸಿದೆ. 60 ಸದಸ್ಯ ಬಲದ ಈ ವಿಧಾನ ಸಭೆಗೆ 59 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಒಂದು ಸ್ಥಾನಕ್ಕೆ ಅಭ್ಯರ್ಥಿಯ ಸಾವಿನ ಹಿನ್ನೆಲೆಯಲ್ಲಿ ಚುನಾವಣೆ ನಡೆದಿಲ್ಲ.

ಮತಗಟ್ಟೆ ಸಮೀಕ್ಷೆಗಳ ಭವಿಷ್ಯ ಇಲ್ಲೂ ನಿಜವಾಗಿದೆ. ಅಲ್ಲದೆ ಇದೀಗ ಇಡೀ ದೇಶದಲ್ಲಿ ಎಡಪಕ್ಷಗಳ ಆಡಳಿತ ಕೇವಲ ಒಂದಕ್ಕೆ ಇಳಿಕೆಯಾಗಿದೆ. ಅಂದರೆ,ಕೇರಳದಲ್ಲಿ ಮಾತ್ರ ಎಡರಂಗ ಚಾಲ್ತಿಯಲ್ಲಿದೆ. ಇನ್ನು 2013ರ ವಿಧಾನ ಸಭೆ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ವಿಜಯಿಯಾಗಿದ್ದ ಕಾಂಗ್ರೆಸ್‌ ಈ ಬಾರಿ ಶೂನ್ಯ ಸಾಧನೆ ಮಾಡಿದೆ. ಆದರೆ,ಆಗ ಸೊನ್ನೆ ಗಳಿಸಿದ್ದ ಬಿಜೆಪಿ ಈ ಬಾರಿ 35 ಸ್ಥಾನ ಗೆದ್ದು, ಗದ್ದುಗೆಗೇರಿದೆ.

ಈ ಮಧ್ಯೆ ಬಿಜೆಪಿ ಕಡೆಯಿಂದ ಬಿಪ್ಲಬ್‌ ಕುಮಾರ್‌ ದೇಬ್‌ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ರಾಜ್ಯ ಉಸ್ತುವಾರಿ ರಾಮ್‌ ಮಾಧವ್‌ ಅವರು ಇದನ್ನು ಐತಿಹಾಸಿಕ ಜಯವೆಂದು ಬಣ್ಣಿಸಿದ್ದಾರೆ.

ಮೇಘಾಲಯ ಅತಂತ್ರ
ಶಿಲ್ಲಾಂಗ್‌: ತ್ರಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಶೂನ್ಯ ಸಾಧನೆ ಮಾಡಿರುವ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌, ಮೇಘಾಲಯದಲ್ಲಿ ಮರ್ಯಾದೆ ಉಳಿಸಿಕೊಂಡಿದೆ.

ಸದ್ಯದ ಮಟ್ಟಿಗೆ 60 ಸದಸ್ಯರ ವಿಧಾನ ಸಭೆಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳಿಸಿದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದರ ಬೆನ್ನ ಹಿಂದೆಯೇ ಎನ್‌ಪಿಪಿ 19ರಲ್ಲಿ ಗೆದ್ದಿದ್ದು, ಸರಕಾರ ರಚನೆಯ ಎಲ್ಲಾ ಸಾಧ್ಯತೆಗಳನ್ನು ಮುಂದಿರಿಸಿಕೊಂಡಿದೆ. ಅಂದರೆ, ಬಿಜೆಪಿ ಇಲ್ಲಿ 2ರಲ್ಲಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. ಇನ್ನು ಉಳಿದ ಸಣ್ಣ ಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು, ಎನ್‌ಪಿಪಿಯೇ ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸುವ ಸಾಧ್ಯತೆಗಳಿವೆ. ಅಲ್ಲದೆ ಈಗಾಗಲೇ ಮಣಿಪುರದಲ್ಲಿ ಎನ್‌ಪಿಪಿ – ಬಿಜೆಪಿ ಮೈತ್ರಿ ಕೂಟವಿದೆ. ಇದೇ ಮೈತ್ರಿ ಕೂಟ ಇಲ್ಲೂ ಪಾಲನೆ ಮಾಡಿದರೆ ಸರಕಾರ ರಚನೆ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಎನ್‌ಪಿಪಿ ಲೋಕಸಭೆಯ ಮಾಜಿ ಸ್ಪೀಕರ್‌ ಪಿ.ಎ.ಸಂಗ್ಮಾ ಅವರು ಸ್ಥಾಪಿಸಿದ ಪಕ್ಷ. ಅವರ ಮರಣಾ ನಂತರ ಪುತ್ರ ಕೋನ್ರಾಡ್‌ ಸಂಗ್ಮಾ ಅವರು ಪಕ್ಷ ಮುನ್ನಡೆಸುತ್ತಿದ್ದು, ಬಿಜೆಪಿ ಜತೆ ಕೈಜೋಡಿಸುವ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈಗಾಗಲೇ ಬಿಜೆಪಿ ಕಡೆಯಿಂದ ಹಿಮಾಂತ್‌ ಬಿಸ್ವಾ ಅವರು ಶಿಲ್ಲಾಂಗ್‌ಗೆ ಬಂದಿಳಿದಿದ್ದಾರೆ. ಕಾಂಗ್ರೆಸ್‌ ಕೂಡ ಈ ರಾಜ್ಯ ಕೈ ತಪ್ಪಬಾರದು ಎಂಬ ಕಾರಣಕ್ಕೆ ಹಿರಿಯ ನಾಯಕರಾದ ಕಮಲ್‌ನಾಥ್‌ ಮತ್ತು ಅಹ್ಮದ್‌ ಪಟೇಲ್‌ರನ್ನು ಕಳುಹಿಸಿದೆ. ಈಗಾಗಲೇ ಗೋವಾ ಮತ್ತು ಮಣಿಪುರದಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಬಿಜೆಪಿ ಸಣ್ಣ ಪುಟ್ಟ ಪಕ್ಷಗಳನ್ನು ಒಟ್ಟಿಗೆ ಸೇರಿಸಿಕೊಂಡು ಸರಕಾರ ರಚಿಸಿತ್ತು. ಇದು ಇಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ಪ್ರಾದೇಶಿಕ ಪಾರಮ್ಯ
ಕೊಹಿಮಾ : ಪ್ರಾದೇಶಿಕ ಪಕ್ಷಗಳ ಪಾರಮ್ಯವಿರುವ ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಪಾಲು ಅಷ್ಟಕ್ಕಷ್ಟೇ. ಇಲ್ಲಿ ನಾಗಾಪೀಪಲ್ಸ್‌ ಫ್ರಂಟ್‌ ಮತ್ತು ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೊಗ್ರೆಸ್ಸಿವ್‌ ಪಾರ್ಟಿಗಳ ನಡುವೆ ಭರ್ಜರಿ ಹೋರಾಟವಿದ್ದು, ಎನ್‌ಪಿಎಫ್ ಭಾರೀ ಗೆಲುವು ಸಾಧಿಸಿದೆ.

ವಿಶೇಷವೆಂದರೆ ಚುನಾವಣೆಗೂ ಮುನ್ನ ಬಿಜೆಪಿ, ಎನ್‌ಪಿಎಫ್ ಜತೆಗಿನ ಸ್ನೇಹ ಕಡಿದುಕೊಂಡು, ಹೊಸ ಪಕ್ಷ ಎನ್‌ಡಿಪಿಪಿ ಜತೆ ಕೈಜೋಡಿಸಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ 11ರಲ್ಲಿ ಗೆದ್ದಿದ್ದು, ಎನ್‌ಡಿಪಿಪಿ 16ರಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಎನ್‌ಡಿಪಿಪಿ ಮೈತ್ರಿ ಕೂಟ 29ರಲ್ಲಿ ಜಯ ಸಾಧಿಸಿದ್ದರೆ, ಎನ್‌ಪಿಎಫ್ ಕೂಡ ಇಷ್ಟೇ ಸ್ಥಾನದಲ್ಲಿ ವಿಜಯಶಾಲಿಯಾಗಿದೆ. ಉಳಿದ ಎರಡು ಸ್ಥಾನಗಳಲ್ಲಿ ಇತರರು ಗೆದ್ದಿದ್ದು, ಇವರು ಯಾರ ಜತೆ ಕೈಜೋಡಿಸುತ್ತಾರೆಯೋ ಅವರದ್ದೇ ಸರಕಾರ ಖಂಡಿತ.

ಆದರೆ ಬಿಜೆಪಿಯ ಹಳೇ ದೋಸ್ತಿ ಎನ್‌ಪಿಎಫ್ ಸರಕಾರ ರಚನೆಯಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದೆ. ಒಂದೊಮ್ಮೆ ಇದಕ್ಕೆ ಒಪ್ಪಿಗೆ ನೀಡಿದಲ್ಲಿ ಬಿಜೆಪಿ ಸರಕಾರದಲ್ಲಿ ಭಾಗಿಯಾದಂತಾಗುತ್ತದೆ. ಕೇಂದ್ರ ಸಚಿವ ಕಿರಣ್‌ ರಿಜಿಜು ಈ ಬಗ್ಗೆ ಮುನ್ಸೂಚನೆಯನ್ನೂ ನೀಡಿದ್ದಾರೆ. ಅಲ್ಲದೇ ಎನ್‌ಪಿಎಫ್ ಇನ್ನೂ ಎನ್‌ಡಿಎ ಭಾಗವಾಗಿದ್ದು, ಬಿಜೆಪಿಗೆ ನಮ್ಮ ಬಾಗಿಲು ತೆರೆದೇ ಇರುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಎಡಪಕ್ಷ ಕಂಗಾಲು
ತ್ರಿಪುರದಲ್ಲಿ ಎಡಪಕ್ಷ ಹೀನಾಯವಾಗಿ ಸೋತಿದ್ದರಿಂದಾಗಿ ಕೇರಳ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿನ ಎಡಪಕ್ಷಗಳು ಆಘಾತಗೊಂಡಿವೆ. ಸದ್ಯ ಕೇರಳದಲ್ಲಿ ಎಡಪಕ್ಷ ಅಧಿಕಾರದಲ್ಲಿದ್ದು, ಇದು ಅಲ್ಲಿ ಮುಂಬರುವ ವಿಧಾನಸಭೆಯ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ತ್ರಿಪುರದಲ್ಲಿ ನಮ್ಮ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯ್ತು.

40 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಹೊಂದಿದ್ದೆವು ಎಂದು ಸಿಪಿಎಂನ ಕೆಲವು ಮುಖಂಡರು ಹೇಳಿದ್ದಾರೆ. ಬಿಜೆಪಿಯು ಎಡಪಕ್ಷಗಳ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡಿದ್ದಲ್ಲದೆ, ಸ್ಥಳೀಯ ನಾಯಕರನ್ನು ಸೆಳೆದಿದೆ. ಇನ್ನೊಂದೆಡೆ ಸದ್ಯ ಎಡಪಕ್ಷ ಆಡಳಿತವಿರುವ ಕೇರಳದಲ್ಲೀ 2020ರಲ್ಲಿ ಅಧಿಕಾರಕ್ಕೇರುವ ವಿಶ್ವಾಸ ಹೊಂದಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್‌ ಹೇಳಿದ್ದಾರೆ.

ರಾಹುಲ್‌ಗಾಂಧಿ ನಾಪತ್ತೆ
ಇತ್ತ ಫ‌ಲಿತಾಂಶ ಪ್ರಕಟವಾಗುತ್ತಿದ್ದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಮಾತ್ರ ಇಟಲಿಯಲ್ಲಿದ್ದರು. ಅವರ ಅನುಪಸ್ಥಿತಿ ಎದ್ದು ಕಾಣುತ್ತಿ ತ್ತು. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ ಮಾಡಿದ್ದರೂ, ಅವರು ಪ್ರತಿಕ್ರಿಯೆಯನ್ನೇ ಕೊಡಲಿಲ್ಲ, ಮಹತ್ವದ ಸಂದರ್ಭಗಳಲ್ಲಿ ರಾಹುಲ್‌ ಗೈರಾಗುವುದು ಇದು ಮೊದಲೇನಲ್ಲ. ಈ ಹಿಂದೆ ಅಂದರೆ, 2014ರಲ್ಲಿ ಕಾಂಗ್ರೆಸ್‌ ಸಂಸ್ಥಾಪನಾ ದಿನದಂದು, ಅನಂತರ ಅದೇ ವರ್ಷದ ಮೇನಲ್ಲಿ 10 ವರ್ಷ ಆಡಳಿತ ನಡೆಸಿದ ಮನಮೋಹನ್‌ ಸಿಂಗ್‌ ಅವರಿಗೆಂದು ವಿದಾಯಕೂಟ ಏರ್ಪಡಿಸಿದ್ದಾಗ ರಾಹುಲ್‌ ಭಾಗವಹಿಸಿರಲಿಲ್ಲ. 2015ರಲ್ಲಿ ಬಜೆಟ್‌ ಅಧಿವೇಶನದ ವೇಳೆ 56 ದಿನ ವಿದೇಶ ಪ್ರವಾಸದಲ್ಲಿದ್ದರು. 2015ರ ಬಿಹಾರ ಚುನಾವಣೆಯ ವೇಳೆಯೂ ರಾಹುಲ್‌ ಕಣ್ಮರೆಯಾಗಿದ್ದರು, ಕಳೆದ ವರ್ಷ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿ ಆಯ್ಕೆ ವೇಳೆಯೂ ಅವರು ಗೈರಾಗಿದ್ದರು. ಇದೇ ವೇಳೆ, ಶನಿವಾರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೂ ರಾಹುಲ್‌ ಅವರನ್ನು ವ್ಯಂಗ್ಯವಾಡಿದ್ದು, “ರಾಹುಲ್‌ ಇಟಲಿಯಲ್ಲಿದ್ದಾರೆ‌. ಅಲ್ಲೂ ಚುನಾವಣೆ ಇದೆಯಂತೆ. ನನಗಂತೂ ಗೊತ್ತಿಲ್ಲಪ್ಪ’ ಎಂದು ಕಾಲೆಳೆದಿದ್ದಾರೆ.

ಠೇವಣಿಗಿತ್ತು ಕುತ್ತು!
ತ್ರಿಪು ರದ ಈ ಬಾರಿಯ ವಿಧಾನಸಭೆ ಚುನಾವಣೆ ಫ‌ಲಿತಾಂಶ ನೋಡಿದ ಬಳಿಕ, ಈ ಸ್ವಾರಸ್ಯಕರ ವಿಚಾರವನ್ನು ನೀವು ಅರಿಯಲೇಬೇಕು. ಅದೇನೆಂದರೆ, 2013ರ ತ್ರಿಪು ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಕಣಕ್ಕೆ ಇಳಿದಿದ್ದ 59 ಮಂದಿಯ ಪೈಕಿ, 49 ಮಂದಿ ಠೇವಣಿಯನ್ನೇ ಕಳೆದುಕೊಂಡಿದ್ದರು. ಅಷ್ಟರಮಟ್ಟಿಗೆ ಅಲ್ಲಿ ಎಡಪಕ್ಷಗಳ ಪ್ರಭಾವವಿತ್ತು. ಕೆಂಪು ಕೋಟೆಯನ್ನು ಭೇದಿಸುವುದು ಸುಲಭದ ವಿಚಾರ ಆಗಿರಲೇ ಇಲ್ಲ. ಯಾರು ಕೂಡ ಕನಸು ಮನಸಿನಲ್ಲಿಯೂ ಅಂದುಕೊಂಡದ್ದನ್ನು ಈಗ ಬಿಜೆಪಿ ಸಾಧಿಸಿ ತೋರಿಸಿದೆ. ಅಂದು ಠೇವಣಿ ಕಳೆದುಕೊಂಡು ತಲೆತಗ್ಗಿಸಿದ್ದ ಬಿಜೆಪಿ ಅಭ್ಯರ್ಥಿಗಳು ಈಗ ತಲೆಎತ್ತಿ ನಡೆಯುವಂತಾಗಿದೆ. ಐದು ವರ್ಷಗಳ ಬಳಿಕ ಬಿಜೆಪಿ ಇದೇ ತ್ರಿಪು ರದಲ್ಲಿ 60 ಸ್ಥಾನಗಳ ಪೈಕಿ 31ರಲ್ಲಿ ಜಯಭೇರಿ ಬಾರಿಸಿ, ಎಲ್ಲರಲ್ಲೂ ಅಚ್ಚರಿ ಹಾಗೂ ದಿಗ್ಭ್ರಮೆ ಮೂಡಿಸಿದೆ.

ಹಣಬಲದ ಜಯ
ತ್ರಿಪು ರದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲು ಆ ಪಕ್ಷದ ಹಣ ಬಲವೇ ಕಾರಣ ಎಂದು ಆಡಳಿತಾರೂಢ ಸಿಪಿಎಂ ಆರೋಪಿಸಿದೆ. ಚುನಾವಣೆಯಲ್ಲಿ ಬಿಜೆಪಿ ಬೇಕಾಬಿಟ್ಟಿ ಹಣ ಚೆಲ್ಲುವ ಮೂಲಕ ಹಾಗೂ “ಇತರ ಬಲ ಪ್ರದರ್ಶನ’ದ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದೆ. ಇದೇ ವೇಳೆ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಮಾತನಾಡಿ, 25 ವರ್ಷಗಳ ಕಾಲ ನಮಗೆ ಆಡಳಿತ ನಡೆಸಲು ಅವಕಾಶ ನೀಡಿದ್ದಕ್ಕೆ ತ್ರಿಪು ರ ಜನತೆಗೆ ಋಣಿಯಾಗಿರುತ್ತೇವೆ. ನಾವು ಬಿಜೆಪಿಯನ್ನು ಹಾಗೂ ಅದರ ವಿಭಜನಾ ರಾಜಕೀಯವನ್ನು ವಿರೋಧಿಸುವ ಕೆಲಸವನ್ನು ದೇಶಾದ್ಯಂತ ಮುಂದುವರಿಸುತ್ತೇವೆ ಎಂದಿದ್ದಾರೆ.

ಕೈ ಶೂನ್ಯಕ್ಕೆ ಕಾರಣ
ಕಳೆದ ಬಾರಿ ತ್ರಿಪುರದಲ್ಲಿ 10 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಇದಕ್ಕೆ ಕಾರಣ ಹಲವು. ಬಿಜೆಪಿಗೆ ಪ್ರತಿಯಾಗಿ ಯಾವುದೇ ಪ್ರಬಲ ಪ್ರಚಾರ ನಡೆಸುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಲಿಲ್ಲ. ಸ್ವಲ್ಪಮಟ್ಟಿಗೆ ಸಿಪಿಎಂ ಪರ ಮೃದುಧೋರಣೆಯನ್ನೂ ಕಾಂಗ್ರೆಸ್‌ ಅನುಸರಿಸಿತ್ತು. ತ್ರಿಪುರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೇವಲ ಒಂದೇ ಬಾರಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಜತೆಗೆ ಅಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ಮಾಜಿ ಸಚಿವ ಸಿ.ಪಿ.ಜೋಶಿ ಹೆಚ್ಚಿನ ಆಸಕ್ತಿ ವಹಿಸಿ ದುಡಿಯಲಿಲ್ಲ ಎಂಬ ಆರೋಪ ಪಕ್ಷದ ಕಾರ್ಯಕರ್ತರಿಂದಲೇ ಕೇಳಿಬಂದಿತ್ತು. ತ್ರಿಪು ರ ಕಾಂಗ್ರೆಸ್‌ಗೆ  ಸೂಕ್ತ ಸಂಪನ್ಮೂಲ ಇಲ್ಲದೇ ಇದ್ದದ್ದು ಹಾಗೂ ರಾಜ್ಯ ಘಟಕದ ನಾಯಕರ ನಡುವೆಯೇ ಹೊಂದಾಣಿಕೆ ಇಲ್ಲದೇ ಇದ್ದದ್ದೂ ಕಾಂಗ್ರೆಸ್‌ನ ಶೂನ್ಯ ಸಾಧನೆಗೆ ಕಾರಣವಾಯಿತು.

ಬಿಜೆಪಿ ಜಯಕ್ಕೆ ಕಾರಣ
– 3 ವರ್ಷಗಳಿಂದ ಮನೆ ಮನೆ ಪ್ರಚಾರ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ನೋಂದಣಿ.
– ಬುಡಕಟ್ಟು ಜನಾಂಗದವರೇ ಹೆಚ್ಚಿರುವ ಐಪಿಎಫ್ಟಿ ಜತೆೆ ಹೊಂದಾಣಿಕೆ.
– ಜನರ ನೈಜ ಸಮಸ್ಯೆಗಳನ್ನು ಆಯ್ಕೆ ಮಾಡಿ, ಅದರಂತೆ ಪ್ರಚಾರ ವಿಧಾನ ಬದಲು.
– ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಬಿಜೆಪಿ ವತಿಯಿಂದ ವ್ಯಾಪಕ ಪ್ರಚಾರ.

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್‌ ಇನ್‌ ಫ್ಲುಯೆನ್ಸರ್‌ ನಿಧನ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.