ದಾವೂದ್ ನಂಟು ಪ್ರಕರಣ: ನವಾಬ್ ಮಲಿಕ್ ಗೆ ಜಾಮೀನು ನಕಾರ
Team Udayavani, Nov 30, 2022, 4:12 PM IST
ಮುಂಬಯಿ: ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ, ಎನ್ ಸಿಪಿ ನಾಯಕ ನವಾಬ್ ಮಲಿಕ್‌ಗೆ ಮುಂಬಯಿಯ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ನಿರಾಕರಿಸಿದೆ.
ವಿಶೇಷ ನ್ಯಾಯಾಧೀಶ ಆರ್. ಎನ್. ರೋಕಡೆ ಅವರು ಮಲಿಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ವಿವರವಾದ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.
ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ನವೆಂಬರ್ 14 ರಂದು ಮಲಿಕ್ ಅವರ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು. ಜಾರಿ ನಿರ್ದೇಶನಾಲಯವು ಈ ವರ್ಷ ಫೆಬ್ರವರಿಯಲ್ಲಿ ನವಾಬ್ ಮಲಿಕ್ ಅವರನ್ನು ಬಂಧಿಸಿತ್ತು.ನ್ಯಾಯಾಂಗ ಬಂಧನದಲ್ಲಿರುವ ಮಲಿಕ್ ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಾಮೀನು ಕೋರಿದ್ದ ಮಲಿಕ್ ಅಕ್ರಮ ಹಣ ವರ್ಗಾವಣೆಗಾಗಿ ತನ್ನನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ಮನವಿ ಮಾಡಿದ್ದರು. ಆದಾಗ್ಯೂ, ತನಿಖಾ ಸಂಸ್ಥೆಯು ಜಾಮೀನನ್ನು ವಿರೋಧಿಸಿತ್ತು, ದಾವೂದ್ ಇಬ್ರಾಹಿಂ ಮತ್ತು ಅವನ ಸಹಾಯಕರ ವಿರುದ್ಧ ಎನ್‌ಐಎ ದಾಖಲಿಸಿದ ಪ್ರಕರಣವನ್ನು ಸಾಕಷ್ಟು ಆಧಾರವಾಗಿ ಪರಿಗಣಿಸಬಹುದು ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮರಿಂದರ್ ಸಿಂಗ್ ಪತ್ನಿ ಸಂಸದೆ ಪ್ರಣೀತ್ ಕೌರ್ ರನ್ನು ಪಕ್ಷದಿಂದ ಅಮಾನತುಗೊಳಿಸಿದ ಕಾಂಗ್ರೆಸ್
ಆಪ್ ಕೌನ್ಸಿಲರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿಗೆ ಸಾಧ್ಯವಿಲ್ಲ ಎಂದ ಕೇಜ್ರಿವಾಲ್
ಕೇರಳದ ಪೆಟ್ ಶಾಪ್ ನಲ್ಲಿ ನಾಯಿಮರಿ ಕಳ್ಳತನ; ಉಡುಪಿ ಮೂಲದ ಇಬ್ಬರು ವಿದ್ಯಾರ್ಥಿಗಳ ಬಂಧನ
ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್
ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್