ನಕ್ಸಲರಿಗೆ ಜಗ್ಗದ ಮತದಾರ

Team Udayavani, Nov 13, 2018, 9:20 AM IST

naxal.png

ಹೊಸದಿಲ್ಲಿ/ರಾಯ್ಪುರ: ಛತ್ತೀಸ್‌ಗಢ ವಿಧಾನಸಭೆಗಾಗಿ 18 ಸ್ಥಾನಗಳಿಗೆ  ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ಶೇ. 70ರಷ್ಟು ಮತದಾನವಾಗಿದೆ. ಕೇಂದ್ರ ಚುನಾವಣಾ ಆಯೋಗ ಈ ಮಾಹಿತಿ ನೀಡಿದೆ. ನಕ್ಸಲರ ತೀವ್ರ ಬಾಧೆಯಿರುವ ಈ ಭಾಗದಲ್ಲಿ, ಚುನಾವಣೆಗಳನ್ನು ಬಹಿಷ್ಕರಿಸುವಂತೆ ನಕ್ಸಲರು ಕರೆ ನೀಡಿದ್ದರೂ, ಚುನಾವಣೆ ಗಿನ್ನು ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದಾಗಲೇ ಬಾಂಬ್‌ ಸ್ಫೋಟಗಳನ್ನು ನಡೆಸಿದ್ದ ನಕ್ಸಲರು ಇಬ್ಬರು ಯೋಧರು, ನಾಲ್ವರು ನಾಗರಿಕರನ್ನು ಬಲಿಪಡೆದಿದ್ದರೂ, ಆ ಎಲ್ಲಾ ಎಚ್ಚರಿಕೆ, ಭೀತಿಗಳನ್ನು ಬದಿಗೊತ್ತಿರುವ ಇಲ್ಲಿನ ಜನತೆ ತಮ್ಮ ಹಕ್ಕುಗಳನ್ನು ಚಲಾಯಿಸಿರುವುದು ಪ್ರಜಾಪ್ರಭುತ್ವದ ಹೆಗ್ಗಳಿಕೆಯೇ ಸರಿ.

ಛತ್ತೀಸ್‌ಗಢದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ಒಟ್ಟು 18 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಪ್ರಮುಖ ಕ್ಷೇತ್ರ ಗಳಾದ ಕೊಂಡಗಾಂವ್‌ನಲ್ಲಿ ಶೇ. 61.47ರಷ್ಟು ಮತದಾನ ವಾಗಿದ್ದರೆ, ಕೇಶಕಾಲ್‌ನಲ್ಲಿ ಶೇ. 63.51ರಷ್ಟು, ಕಾಂಕರ್‌ನಲ್ಲಿ ಶೇ. 62, ಬಾತ್ಸಾರ್‌ನಲ್ಲಿ ಶೇ. 58, ದಾಂತೇವಾಡದಲ್ಲಿ ಶೇ. 49, ಕೈರಾಗಢದಲ್ಲಿ ಶೇ. 70.14, ಡೊಗಾರ್‌ಗಾಂವ್‌ನಲ್ಲಿ ಶೇ. 71 ಹಾಗೂ ಖುಜ್ಜಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 72ರಷ್ಟು ಮತದಾನವಾಗಿದೆ. 

ಮಾವೋವಾದಿಗಳ ಹಿಡಿತದಲ್ಲಿರುವ ಸುಕಾ¾ ಜಿಲ್ಲೆಯ ಪಾಲಂ ಅಡುY ಎಂಬಲ್ಲಿ 15 ವರ್ಷಗಳ ಅನಂತರ ಮತ ಚಲಾ ವಣೆ ಮಾಡಿದ್ದಾರೆ. ಇದಲ್ಲದೆ, ನಾರಾ ಯಣಪುರ ಪ್ರಾಂತ್ಯದ ಮತಗಟ್ಟೆ ಯೊಂದ ರಲ್ಲಿ ಮೈನುರಾಮ್‌ ಮತ್ತು ರಾಜಬಟ್ಟಿ ಎಂಬ ಮಾಜಿ ನಕ್ಸಲ್‌ ದಂಪತಿ ಮತ ಚಲಾಯಿಸಿ ದ್ದಾರೆ. 2013ರ ಚುನಾವಣೆ ವೇಳೆ ಶೂನ್ಯ ಮತದಾನ ವಾಗಿದ್ದ ಭೆಜ್ಜಿಯ 2, ಗೊಚನ್‌ಪಲ್ಲಿಯಲ್ಲಿ, ಕೊಲೈಗುಡ, ಗೋರ್ಖಾ ಮತಗಟ್ಟೆ ಗಳಲ್ಲಿ ಈ ಬಾರಿ ಉತ್ತಮ ಮತದಾನ ಆಗಿ ರುವುದು ವಿಶೇಷ.

ಗುಂಡಿನ ಚಕಮಕಿ: ಇದೇ ವೇಳೆ ಛತ್ತೀಸ್‌ಗಢ‌ದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್‌ ನಿಗ್ರಹಕ್ಕಾಗಿರುವ ಕೋಬ್ರಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ದಲ್ಲಿ ಐವರು ಕಮಾಂಡೋಗಳಿಗೆ ಗಾಯ ಗಳಾಗಿವೆ. ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈ ಘಟನೆ ನಡೆದಿದೆ.

ಜಾಮೀನು ಪಡೆದವರಿಂದ ಪ್ರಮಾಣಪತ್ರ
ಬಿಲಾಸ್ಪುರ್‌:
“ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ತಾಯಿ-ಮಗ, ನೋಟು ಅಮಾನ್ಯ ವಿಚಾರದಲ್ಲಿ ಮೋದಿಗೆ ಪ್ರಮಾಣ ಪತ್ರ ನೀಡುತ್ತಿದ್ದಾರೆ’ ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಾಲಿ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರತ್ತದೆ ಟೀಕಿಸಿದ್ದಾರೆ. ನ.20ರಂದು ನಡೆಯಲಿರುವ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಲಾಸ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು. “ನೋಟು ಅಮಾನ್ಯಗೊಂಡಿದ್ದರಿಂದ ತಮಗೆ ಒದಗಬಹುದಾದ ಅಪಾಯವನ್ನು ಮನಗಂಡು ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದನ್ನು ಅವರು ಮರೆತಿದ್ದಾರೆ. ಈ ನಿರ್ಧಾರದಿಂದಾಗಿ ಹಲವಾರು ನಕಲಿ ಕಂಪೆನಿಗಳ ವ್ಯವಹಾರ ಬಯಲಿಗೆ ಬಂದಿದೆ’  ಎಂದಿದ್ದಾರೆ. ಭ್ರಷ್ಟಾಚಾರ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ “ಹಿಂದೊಮ್ಮೆ ರಾಜೀವ್‌ ಗಾಂಧಿಯವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಿಗದಿಪಡಿಸಿದ ಪ್ರತಿ 15 ಪೈಸೆ ಮಾತ್ರ ಫ‌ಲಾನುಭವಿಗಳಿಗೆ ಸಿಗುತ್ತದೆ. ಉಳಿದ 85 ಪೈಸೆ ವರ್ಗಾವಣೆಯಾಗುತ್ತಿದೆ ಎಂದಿದ್ದರು. ಅದನ್ನು ಯಾವ ಕೈ ನುಂಗಿತ್ತು ಎಂದು ಪ್ರಶ್ನಿಸಿದ್ದಾರೆ.

ಸಂಸ್ಕೃತ ವಿವಿ ಸ್ಥಾಪನೆ, ಶಾಲೆಗಳಲ್ಲಿ ಯೋಗ
ತೆಲಂಗಾಣ ಚುನಾವಣೆಗಾಗಿ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಯೋಗ ಕಲಿಕೆ, ಸಂಸ್ಕೃತ ವಿವಿ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳ ಕಲ್ಯಾಣ ಮಂಡಳಿ ಸ್ಥಾಪಿಸುವ ವಾಗ್ಧಾನ ಮಾಡಲಾಗಿದೆ. ಶಬರಿಮಲೆ ಸೇರಿದಂತೆ ಧಾರ್ಮಿಕ ಸ್ಥಳಗಳಿಗೆ ಉಚಿತ ಪ್ರವಾಸ, ಮದ್ಯ ಮಾರಾಟಕ್ಕೆ ಅವಕಾಶ, ವರ್ಷಕ್ಕೆ ಒಂದು ಲಕ್ಷ ಗೋವುಗಳ ವಿತರಣೆಗೂ ಪಕ್ಷ ಬದ್ಧವಾಗಿದೆ ಎಂದು ತಿಳಿಸಿದೆ.

ತೆಲಂಗಾಣಕ್ಕೆ ಅಧಿಸೂಚನೆ
ಮುಂದಿನ ತಿಂಗಳ 7ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸೋಮವಾರ ಪ್ರಕಟಣೆ ಹೊರಡಿಸಿದೆ. ನ.12ರಿಂದ 19ರ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಉಂಟು. ನ.20ಕ್ಕೆ ನಾಮಪತ್ರ ಪರಿಶೀಲನೆ. 

ರಾಜಸ್ಥಾನ: ಬಿಜೆಪಿ ಪಟ್ಟಿ ಬಿಡುಗಡೆ
ಡಿ.7ರಂದೇ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 16 ಮಂದಿ ಆಕಾಂಕ್ಷಿಗಳು ಉಮೇದ್ವಾರಿಕೆ ಸಲ್ಲಿಸಿದ್ದಾರೆ. ರಾಜಸ್ಥಾನ ಚುನಾವಣೆಗಾಗಿ 131 ಮಂದಿ ಹುರಿಯಾಳುಗಳ ಪಟ್ಟಿಯೂ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ, ಸ್ಪೀಕರ್‌ ಕೈಲಾಶ್‌ ಮೇಘಾÌಲ್‌, ಸಚಿವರಾದ ಗುಲಾಬ್‌ ಚಂದ್‌ ಕಟಾರಿಯಾ, ವಸುದೇವ್‌ ದೇವಾನಿ ಸ್ಪರ್ಧಿಸಲು ಅವಕಾಶ ಪಡೆದ ಪ್ರಮುಖರಲ್ಲಿ ಸೇರಿದ್ದಾರೆ. ಹಾಲಿ ಶಾಸಕರ ಪೈಕಿ 26 ಮಂದಿಗೆ ಟಿಕೆಟ್‌ ನೀಡಲಾಗಿಲ್ಲ. ಉಳಿದ 85 ಮಂದಿಗೆ ಅವಕಾಶ ನೀಡಲಾಗಿದೆ.

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.