ನಿರ್ಭಯಾ ಪ್ರಕರಣ: ಕ್ಷಮಾಪಣಾ ಅರ್ಜಿ ತಿರಸ್ಕರಿಸುವಂತೆ ರಾಷ್ಟ್ರಪತಿಗೆ ಪತ್ರ

Team Udayavani, Dec 2, 2019, 10:57 PM IST

ಹೊಸದಿಲ್ಲಿ: 2012ರ ನಿರ್ಭಯಾ ಪ್ರಕರಣದ ಅಪರಾಧಿಗಳ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗವು ಅಧ್ಯಕ್ಷ ರಾಮ್‌ನಾಥ್‌ ಕೋವಿಂದ್‌ ಅವರನ್ನು ಪತ್ರದ ಮೂಲಕ ಒತ್ತಾಯಿಸಿದೆ. ಇದು ಯುವತಿಯರು ಮತ್ತು ಮಹಿಳೆಯರ ವಿರುದ್ಧ ಇಂತಹ ಅಪರಾಧಗಳನ್ನು ಘಟಿಸದಂತೆ ಇತರರನ್ನು ತಡೆಯುತ್ತದೆ ಎಂದು ಹೇಳಿದೆ.

ಯುವತಿಯರು ಮತ್ತು ಮಹಿಳೆಯರ ವಿರುದ್ಧ ಇತ್ತೀಚೆಗೆ ಇಂತಹ ಅಮಾನವೀಯ ದುರಂತಗಳ ಘಟನೆಗಳು ಹೆಚ್ಚುತ್ತಿದೆ. ಇದನ್ನು ರಾಷ್ಟ್ರಪತಿಗಳು ಮನಗಂಡು ಅವರ ಕ್ಷಮಾಪಣಾ ಪತ್ರವನ್ನು ತಿರಸ್ಕರಿಸಬೇಕು. ಅಂತಹ ಘೋರ ಕೃತ್ಯವೆಸಗಿದ ಅಪರಾಧಿಗಳು ಯಾವುದೇ ಕ್ಷಮಾಪಣೆಗೆ ಅರ್ಹರಲ್ಲ. ಅವರಿಗೆ ಮರಣದಂಡನೆಯೊಂದೆ ದಾರಿಯಾಗಿದ್ದು, ಶಿಕ್ಷೆ ವಿಧಿಸಬೇಕು ಎಂದು ಎನ್ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಇಂತಹ ಘೋರ ಮತ್ತು ಕ್ರೂರ ಅತ್ಯಾಚಾರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಅನುವಾಗುವಂತೆ ಒಂದು ನಿರ್ದಿಷ್ಟ ಕಾರ್ಯವಿಧಾನ ಮತ್ತು ಸಮಯ ನಿಗದಿಪಡಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕು ಎಂದು ರಾಷ್ಟ್ರಪತಿಯವರನ್ನು ಅವರು ಕೋರಿಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ