ನೀಟ್ ಗರಿಷ್ಠ ವಯೋಮಿತಿ ನಿಯಮ ಸದ್ಯಕ್ಕಿಲ್ಲ
Team Udayavani, Nov 30, 2018, 6:00 AM IST
ನವದೆಹಲಿ: ವೈದ್ಯಕೀಯ ಸ್ನಾತಕ ಕೋರ್ಸ್ಗಳಿಗಾಗಿ (ಎಂಬಿಬಿಎಸ್, ದಂತ ವೈದ್ಯ)ರಾಷ್ಟ್ರ ಮಟ್ಟದಲ್ಲಿ ನಡೆಸುವ ಪ್ರವೇಶ ಪರೀಕ್ಷೆಯಾದ ನೀಟ್ನ 2019ರ ಪರೀಕ್ಷಾ ಅಭ್ಯರ್ಥಿಗಳಿಗೆ ವಿಧಿಸಲಾಗಿದ್ದ 25 ವರ್ಷದ ಗರಿಷ್ಠ ವಯೋಮಿತಿಯನ್ನು ಸುಪ್ರೀಂ ಕೋರ್ಟ್
ರದ್ದುಗೊಳಿಸಿದೆ.
ನೀಟ್ ಪರೀಕ್ಷೆಗೆ ಗರಿಷ್ಠ ವಯೋಮಿತಿ ನಿಗದಿಗೊಳಿಸುವ ವಿಚಾರ ಇನ್ನೂ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ
ಅದರ ಅಂತಿಮ ತೀರ್ಪು ಹೊರಬೀಳುವವರೆಗೆ ತನ್ನ ಈ ಮಧ್ಯಂತರ ಆದೇಶ ಪಾಲನೆಯಾಗಬೇಕು ಎಂದು ನ್ಯಾಯಾಲಯ ಹೇಳಿದೆ. ಜತೆಗೆ ನೀಟ್ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು ನ.30ರಿಂದ ಒಂದು ವಾರದ ಕಾಲಕ್ಕೆ ವಿಸ್ತರಿಸಿದೆ. ಈ ಮೂಲಕ 25 ವರ್ಷ ಮೇಲ್ಪಟ್ಟವರಿಗೂಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.