NEET ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ: ಧರ್ಮೇಂದ್ರ ಪ್ರಧಾನ್‌

ವಿವಾದದ ಹಿನ್ನೆಲೆಯಲ್ಲಿ 1,563 ವಿದ್ಯಾರ್ಥಿಗಳಿಗೆ ಕೃಪಾಂಕ ರದ್ದು.. ಕೃಪಾಂಕಿತರಿಗೆ ಮರುಪರೀಕ್ಷೆ

Team Udayavani, Jun 14, 2024, 1:17 AM IST

neet

ಹೊಸದಿಲ್ಲಿ: ನೀಟ್‌- ಯುಜಿ ಪರೀಕ್ಷಾ ಫ‌ಲಿತಾಂಶದ ಬಳಿಕ ಎದ್ದಿದ್ದ ವಿವಾದವನ್ನು ತಣ್ಣಗಾಗಿಸಲು ಕೇಂದ್ರ ಸರಕಾರ ಮತ್ತು ಎನ್‌ಟಿಎ (ನ್ಯಾಶ ನಲ್‌ ಟೆಸ್ಟಿಂಗ್‌ ಏಜೆನ್ಸಿ)ಗಳು ಬಲವಾದ ಹೆಜ್ಜೆಯನ್ನಿರಿಸಿವೆ. ಪ್ರಶ್ನೆಪತ್ರಿಕೆ ಹಂಚಿಕೆಯಲ್ಲಿ ವಿಳಂಬ, ಹರಿದ ಒಎಂಆರ್‌ ಶೀಟ್‌ಗಳ ಹಂಚಿಕೆಯಿಂದ ಸಮಯದ ಕೊರತೆ ಎದುರಿಸಿದ್ದ 1,563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕ ವನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲ ದೆ ಈ ವಿದ್ಯಾರ್ಥಿಗಳಿಗೆ ಜೂ. 23ರಂದು ಮರುಪರೀಕ್ಷೆ ಮಾಡಲಾಗುವುದು. ಒಂದೋ ವಿದ್ಯಾರ್ಥಿಗಳು ಮರುಪರೀಕ್ಷೆ ಎದುರಿಸಬಹುದು, ಇಲ್ಲವೇ ಕೃಪಾಂಕರಹಿತ ಅಂಕವನ್ನು ಮಾತ್ರ ಉಳಿಸಿಕೊಳ್ಳಬಹುದು ಎಂದು ಸರಕಾರ ಹೇಳಿದೆ.

ಇದೇ ವೇಳೆ ಸರ್ವೋಚ್ಚ ನ್ಯಾಯಾಲಯವು ನೀಟ್‌-ಯುಜಿ ವಿದ್ಯಾರ್ಥಿಗಳಿಗೆ ಜು. 6ರಂದು ನಡೆಯಲಿರುವ ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದೆ. ಆದರೆ ಈ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳು, ಇತರ ಸಂಸ್ಥೆಗಳು ಪ್ರವೇಶ ನೀಡುವ ಬಗ್ಗೆ ತನ್ನ ಅಂತಿಮ ತೀರ್ಪನ್ನು ನೋಡಿ ನಿರ್ಧರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಮೇ 5ರಂದು ನಡೆದಿದ್ದ ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಫ‌ಲಿತಾಂಶವನ್ನು ಸಮಗ್ರವಾಗಿ ರದ್ದು ಮಾಡಬೇಕು, ಜು. 6ರ ಕೌನ್ಸಿಲಿಂಗ್‌ಗೂ ತಡೆ ನೀಡಬೇಕು ಎಂದು ವಿದ್ಯಾರ್ಥಿಗಳ ಪರ ಅರ್ಜಿದಾರರು ವಾದಿಸಿದ್ದರು.

ಜೂ.23ರಂದು ಮರುಪರೀಕ್ಷೆ
ಕೃಪಾಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಜೂ. 23ರಂದು ಮರುಪರೀಕ್ಷೆ ನಡೆಸಲಾಗುವುದು. ಆ ಫ‌ಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಲಾಗುವುದು. ಜೂ. 30ರಂದು ಫ‌ಲಿತಾಂಶ ಪ್ರಕಟವಾಗಲಿದೆ ಎಂದು ಎನ್‌ಟಿಎ ಹೇಳಿದೆ.

ಕೃಪಾಂಕ ನೀಡಿದ್ದು ಏಕೆ?

ನೀಟ್‌ ಪರೀಕ್ಷೆ ವೇಳೆ ತಪ್ಪು ಪ್ರಶ್ನೆಪತ್ರಿಕೆ ನೀಡ ಲಾಗಿದೆ. ಕೆಲವರಿಗೆ ಹರಿದ ಒಎಂಆರ್‌ ಶೀಟ್‌ ನೀಡಲಾಗಿದೆ, ಕೆಲವರಿಗೆ ಶೀಟ್‌ ನೀಡುವು ದನ್ನೇ ತಡ ಮಾಡಲಾಗಿದೆ. ಇದನ್ನು ಸರಿಪಡಿಸು ವಾಗ ತಮಗೆ ಸಮಯ ನಷ್ಟವಾಗಿದೆ ಎಂದು ಹರಿಯಾಣ, ಮೇಘಾಲಯ, ಛತ್ತೀಸ್‌ಗಢ, ಸೂರತ್‌, ಚಂಡೀಗಢದ 6 ಕೇಂದ್ರಗಳ ವಿದ್ಯಾರ್ಥಿ ಗಳು ದೂರಿದ್ದರು. ಇವರಿಗೆಲ್ಲ ಎನ್‌ಟಿಎ ಕೃಪಾಂಕ ನೀಡಿತ್ತು.

ಕೃಪಾಂಕ ರದ್ದತಿಯಿಂದ ನೀಟ್‌ ಅಗ್ರಸ್ಥಾನಿಗಳ ಸಂಖ್ಯೆ 67ರಿಂದ 61ಕ್ಕೆ ಇಳಿದಿದೆ. ಕೃಪಾಂಕದ ಕಾರಣದಿಂದ ಹರಿಯಾಣದ ಒಂದೇ ತರಬೇತಿ ಕೇಂದ್ರದ ಒಟ್ಟು 6 ಮಂದಿ 720ಕ್ಕೆ 720 ಅಂಕ ಪಡೆದಿದ್ದರು. ಇವರು ಕೃಪಾಂಕಗಳ ಜತೆಗೆ ಅಗ್ರಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ.

ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದು ಕಂಡುಬಂದಿಲ್ಲ. ಯಾವುದೇ ವಿದ್ಯಾರ್ಥಿ ಗಳಿಗೂ ತೊಂದರೆಯಾಗುವುದಿಲ್ಲ. ಎನ್‌ಟಿಎ ಜವಾಬ್ದಾರಿಯುತ ಸಂಸ್ಥೆ. ಅದು ವಾರ್ಷಿಕವಾಗಿ 50 ಲಕ್ಷ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತದೆ. ಉನ್ನತ ಮಟ್ಟದ ಪರೀಕ್ಷೆಗಳನ್ನೂ ನಡೆಸುತ್ತದೆ. ನೀಟ್‌ ಅಂಕ ನೀಡಲು ಸರ್ವೋಚ್ಚ ನ್ಯಾಯಾ ಲಯದ ನಿರ್ದೇಶನವನ್ನೇ ಅನುಸರಿಸಲಾಗಿದೆ. ಅದರಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಸರಿ ಮಾಡಲಾಗುವುದು
-ಧರ್ಮೇಂದ್ರ ಪ್ರಧಾನ್‌, ಕೇಂದ್ರ ಶಿಕ್ಷಣ ಸಚಿವ

ನೀಟ್‌ ಪರೀಕ್ಷೆಯಲ್ಲಿ ಬರೀ ಕೃಪಾಂಕ ನೀಡಿರು ವುದು ಮಾತ್ರ ಸಮಸ್ಯೆಯಲ್ಲ. ಅಲ್ಲಿ ಅಪ್ರಾಮಾಣಿಕತೆಯಿದೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ಭ್ರಷ್ಟಾಚಾರ ನಡೆದಿದೆ. ಮೋದಿ ಸರಕಾರದ ನಡೆಯಿಂದ 24 ಲಕ್ಷ ವಿದ್ಯಾರ್ಥಿ ಗಳ ಭವಿಷ್ಯ ಅತಂತ್ರವಾಗಿದೆ. ಇದರ ವಿರುದ್ಧ ಸಿಬಿಐ ತನಿಖೆ ನಡೆಯ ಬೇಕು, ಇಲ್ಲವೇ ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು.
-ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್‌ ಅಧ್ಯಕ್ಷ

ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಗೌರವ್‌ ಗೊಗೋಯಿ, ಈ ವಿಚಾರವನ್ನು ಸಂಸತ್‌ ಅಧಿವೇಶನದಲ್ಲಿ ಎತ್ತಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಹಲವೆಡೆ ಪ್ರತಿಭಟನೆ

ನೀಟ್‌ ಅಕ್ರಮ ಆರೋಪ ಹಿನ್ನೆಲೆಯಲ್ಲಿ ಗುರುವಾರ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿದೆ. “24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬಯಸುತ್ತಿದ್ದಾರೆ, ಹಗರಣವನ್ನಲ್ಲ’ ಎಂದು ಘೋಷಣೆಗಳನ್ನು ಕೂಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

ಕೃಪಾಂಕ ರದ್ದು ಮಾಡುವ ಮೂಲಕ ಕೇಂದ್ರ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಇನ್ನಾದರೂ ಎಂಬಿಬಿಎಸ್‌ ಆಯ್ಕೆ ವಿಧಾನ ನಿರ್ಧರಿಸುವ ಅಧಿಕಾರ ಮತ್ತೆ ರಾಜ್ಯಗಳಿಗೆ ನೀಡಲಿ.

 ಎಂ.ಕೆ.ಸ್ಟಾಲಿನ್‌, ತಮಿಳುನಾಡು ಸಿಎಂ

 

ಟಾಪ್ ನ್ಯೂಸ್

3-madikeri

Madikeri: ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ

hd-kumarswaamy

Hubli; ಜನಜೀವನ ಅಸ್ತವ್ಯಸ್ತಗೊಂಡರೂ ಸರ್ಕಾರಕ್ಕೆ ಕಾಳಜಿಯಿಲ್ಲ: ಕುಮಾರಸ್ವಾಮಿ

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

UPSC: ಅವಧಿ ಮುಗಿಯುವ ಮೊದಲೇ ಯುಪಿಎಸ್​ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್ ಸೋನಿ ರಾಜೀನಾಮೆ

UPSC: ಅವಧಿ ಮುಗಿಯುವ ಮೊದಲೇ ಯುಪಿಎಸ್​ಸಿ ಅಧ್ಯಕ್ಷ ಸ್ಥಾನಕ್ಕೆ ಮನೋಜ್ ಸೋನಿ ರಾಜೀನಾಮೆ

1-eqwewqe

Microsoft ತಾಂತ್ರಿಕ ಸಮಸ್ಯೆ: ಸಾಫ್ಟ್ ವೇರ್‌ ಅಪ್‌ಡೇಟ್‌ ಮಾಡಲು ಕೇಂದ್ರ ಸಲಹೆ

1-reccc

Chenab; ಆ.15ಕ್ಕೆ ಅತೀ ಎತ್ತರದ ರೈಲು ಸೇತುವೆ ಲೋಕಾರ್ಪಣೆ: ವಿಶೇಷತೆಗಳೇನು?

1-reasas

ISRO ಅಧ್ಯಕ್ಷರಿಗೆ ನಿವೃತ್ತಿ ಅಂಚಿನಲ್ಲಿ ಪಿಎಚ್‌.ಡಿ.; ಈಡೇರಿದ ಕನಸು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

Desi Swara: ಮೊಗವೀರ್ಸ್‌ ಬಹ್ರೈನ್‌- ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ

3-madikeri

Madikeri: ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾದ ಪತಿ

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Desi Swara: ಹೊನ್ನುಡಿ-ಒಳಿತಿನ ಭವಿಷ್ಯ ಇಲ್ಲದ ಕಾಲಹರಣವೇ ಮರಣ…

Video: ಮಕ್ಕಳು ತರಗತಿಯಲ್ಲಿ ಇದ್ದ ವೇಳೆಯೇ ಕುಸಿದು ಬಿದ್ದ ಗೋಡೆ… ವಿದ್ಯಾರ್ಥಿಗೆ ಗಾಯ

Wall Collapses: ಮಕ್ಕಳು ತರಗತಿಯಲ್ಲಿರುವಾಗಲೇ ಕುಸಿದು ಬಿದ್ದ ಗೋಡೆ.. ಭಯಾನಕ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.