Udayavni Special

‘ಮುಸ್ಲಿಮರನ್ನು ಪಪ್ಪಿಗೆ ಹೋಲಿಸುವಾತ ಪಿಎಂ ಆದಾನೆಂದು ಭಾವಿಸಿರಲಿಲ್ಲ’


Team Udayavani, Aug 11, 2018, 5:14 PM IST

mani-shanker-aiyer-700.jpg

ಹೊಸದಿಲ್ಲಿ : “ಮುಸ್ಲಿಮರನ್ನು ನಾಯಿ ಮರಿ (puppies) ಗಳಿಗೆ ಹೋಲಿಸುವ ವ್ಯಕ್ತಿಯೊಬ್ಬ ದೇಶದ ಪ್ರಧಾನಿ ಆದಾನು ಎಂದು ನಾನು 2014ಕ್ಕೆ ಮೊದಲು ಯೋಚಿಸಿಯೇ ಇರಲಿಲ್ಲ” ಎಂದು ಅಮಾನತಾಗಿರುವ ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಅಯ್ಯರ್‌ ಹೇಳಿದ್ದಾರೆ. 

ಅಯ್ಯರ್‌ ಅವರ ಈ ವಿವಾದಾತ್ಮಕ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಪ್ರತಿಭಟಿಸುವುದು ಖಚಿತವಿದೆ.

ಅಯ್ಯರ್‌ ಅವರು ರಾಷ್ಟ್ರ ರಾಜಧಾನಿ ದಿಲ್ಲಿಯ ಇಂಡಿಯಾ ಇಂಟರ್‌ನ್ಯಾಶನಲ್‌ ಸೆಂಟರ್‌ನಲ್ಲಿ ಏರ್ಪಟ್ಟಿದ್ದ  “ಅಸಹಿಷ್ಣುತೆಯ ರಾಷ್ಟ್ರೀಯ ಅಭಿಯಾನ ಸಾಕಷ್ಟಾಯಿತು” ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

2002ರಲ್ಲಿ ನಡೆದಿದ್ದ ಗುಜರಾತ್‌ ದೊಂಬಿಯಿಂದ ನಿಮ್ಮ ಮನಸ್ಸಿಗೆ ಘಾಸಿಯಾಯಿತೇ ಎಂದು ನರೇಂದ್ರ ಮೋದಿ ಅವರನ್ನು ಕೇಳಲಾದಾಗ ಅವರು ‘ನಾಯಿ ಮರಿಯೊಂದು ಕಾರಿನಡಿ ಬಿದ್ದು ಸತ್ತರೂ ನಾನು ಅದರ ವೇದನೆಯನ್ನು ಅನುಭವಿಸುತ್ತೇನೆ ಎಂದಿದ್ದರು’ ಎಂಬುದಾಗಿ ಮಣಿ ಶಂಕರ್‌ ಅಯ್ಯರ್‌ ಹೇಳಿದರು. 

ಮೋದಿ ವಿರುದ್ಧದ ವಾಕ್‌ ದಾಳಿಯನ್ನು ಮುಂದುವರಿಸಿ ಮಾತನಾಡಿದ ಅಯ್ಯರ್‌, “ಗುಜರಾತ್‌ ದೊಂಬಿ ನಡೆದು 24 ದಿನಗಳ ವರೆಗೂ ಮೋದಿ ಮುಸ್ಲಿಂ ನಿರಾಶ್ರಿತರ ಶಿಬಿರಗಳ ಬಳಿ ಸುಳಿಯಲಿಲ್ಲ. ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬಂದಿದ್ದಾಗಲೇ ಮೋದಿ, ಅಹ್ಮದಾಬಾದಿನ ಶಾ ಆಲಂ ಮಸೀದಿಗೆ ಭೇಟಿ ಕೊಟ್ಟಿದ್ದರು. ಪ್ರಧಾನಿ ಜತೆಗೆ ಹೋಗುವುದು ಅವರಿಗೆ ಶಿಷ್ಟಾಚಾರದ ಅನಿವಾರ್ಯತೆಯಾಗಿತ್ತು. ಇಂತಹ ಒಬ್ಬ ಮನುಷ್ಯ ಮುಂದೆ ದೇಶದ ಪ್ರಧಾನಿ ಆದಾನು ಎಂದು ನಾನು ಎಂದೂ ಭಾವಿಸಿರಲಿಲ್ಲ” ಎಂದು ಹೇಳಿದರು. 

ಕೋಮು ಸಾಮರಸ್ಯಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ನೀಡಿದ್ದ ಕಾಣಿಕೆಯನ್ನು ಅಯ್ಯರ್‌ ಈ ಸಂದರ್ಭದಲ್ಲಿ ಕೊಂಡಾಡಿದರು.

”ರಾಷ್ಟ್ರೀಯತೆಯ ನಿಜವಾದ ಪರಿವ್ಯಾಖ್ಯೆಯನ್ನು ನಮಗೆ ಬೋಧಿಸಿದವರೇ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ; ಬಹುಸಂಖ್ಯಾಕ ಕೋಮುವಾದ, ಅಲ್ಪಸಂಖ್ಯಾಕ ಕೋಮುವಾದಕ್ಕಿಂತ ಘೋರ ಎಂಬುದನ್ನು ನಾನು ಅವರಿಂದ ಅರಿತುಕೊಂಡೆ. ನಾವು ಒಂದು ದೇಶವಾಗಿರಬೇಕಾದರೆ ಜಾತ್ಯತೀತರಾಗಿರುವುದು ಅಗತ್ಯ ಎಂಬುದನ್ನು ನೆಹರೂ ನಮಗೆ ಬೋಧಿಸಿದರು” ಎಂದು ಅಯ್ಯರ್‌ ಹೇಳಿದರು. 

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇನ್ನು ಕೋವಿಡ್ ರೋಗಿ ಅನಾಥ ಅಲ್ಲ !

ಇನ್ನು ಕೋವಿಡ್ ರೋಗಿ ಅನಾಥ ಅಲ್ಲ !

ವಿವಾದಿತ ಮಸೀದಿ ಕಟ್ಟಡ ನೆಲಸಮ ಪೂರ್ವಯೋಜಿತವಲ್ಲ

ವಿವಾದಿತ ಮಸೀದಿ ಕಟ್ಟಡ ನೆಲಸಮ ಪೂರ್ವಯೋಜಿತವಲ್ಲ

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

ರಂಗೇರಿದ ಅಖಾಡ: ಉಪ ಚುನಾವಣೆಗೆ ಬಿರುಸಿನ ಚಟುವಟಿಕೆ

ರಂಗೇರಿದ ಅಖಾಡ: ಉಪ ಚುನಾವಣೆಗೆ ಬಿರುಸಿನ ಚಟುವಟಿಕೆ

ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‌ಪಿನ್‌ ಶಿವಕುಮಾರಯ್ಯ ಮತ್ತೆ ಸಕ್ರಿಯ?

ಪ್ರಶ್ನೆ ಪತ್ರಿಕೆ ಸೋರಿಕೆ ಕಿಂಗ್‌ಪಿನ್‌ ಶಿವಕುಮಾರಯ್ಯ ಮತ್ತೆ ಸಕ್ರಿಯ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

ರಾಷ್ಟ್ರ ಬಿಟ್ಟರೆ ಕಣ್ಮುಂದೆ ಬೇರೇನೂ ಇಲ್ಲ!

ರಾಷ್ಟ್ರ ಬಿಟ್ಟರೆ ಕಣ್ಮುಂದೆ ಬೇರೇನೂ ಇಲ್ಲ!

ಜೈ ಶ್ರೀರಾಮ್‌ ಅನುರಣನ; ನಿರ್ದೋಷಿಗಳಿಂದ, ಜಾಲತಾಣಗಳವರೆಗೆ ಭಾಜಪ ಕಾರ್ಯಕರ್ತರ ರಾಮ ಧ್ಯಾನ

ಜೈ ಶ್ರೀರಾಮ್‌ ಅನುರಣನ; ನಿರ್ದೋಷಿಗಳಿಂದ, ಜಾಲತಾಣಗಳವರೆಗೆ ಭಾಜಪ ಕಾರ್ಯಕರ್ತರ ರಾಮ ಧ್ಯಾನ

ಬೃಹತ್‌ ಬದಲಾವಣೆಗೆ ಮುನ್ನುಡಿ ಬರೆದಿತ್ತು ರಥಯಾತ್ರೆ

ಬೃಹತ್‌ ಬದಲಾವಣೆಗೆ ಮುನ್ನುಡಿ ಬರೆದಿತ್ತು ರಥಯಾತ್ರೆ

MUST WATCH

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆಹೊಸ ಸೇರ್ಪಡೆ

ಇನ್ನು ಕೋವಿಡ್ ರೋಗಿ ಅನಾಥ ಅಲ್ಲ !

ಇನ್ನು ಕೋವಿಡ್ ರೋಗಿ ಅನಾಥ ಅಲ್ಲ !

ವಿವಾದಿತ ಮಸೀದಿ ಕಟ್ಟಡ ನೆಲಸಮ ಪೂರ್ವಯೋಜಿತವಲ್ಲ

ವಿವಾದಿತ ಮಸೀದಿ ಕಟ್ಟಡ ನೆಲಸಮ ಪೂರ್ವಯೋಜಿತವಲ್ಲ

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ಬಾಬರಿ ಪ್ರಕರಣದಲ್ಲಿ ಕೇಂದ್ರ ಸರಕಾರಗಳ ಪಾತ್ರ

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ದ.ಕ., ಉಡುಪಿ: 56 ಹೊಸ ಘಟಕ ಆರಂಭಕ್ಕೆ ಅಸ್ತು

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

ರಾಮಮಂದಿರ, ಬಿಜೆಪಿ ಒಂದೇ ನಾಣ್ಯದ 2 ಮುಖಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.