ಮಾಡುತ್ತೇವೆ,ಮಾಡಿಯೇ ತೀರುತ್ತೇವೆ, ಭ್ರಷ್ಟಾಚಾರ ತೊಲಗಿಸಲು ಹೊಸ ಘೋಷಣೆ


Team Udayavani, Aug 10, 2017, 6:10 AM IST

lead.jpg

ಹೊಸದಿಲ್ಲಿ: ಬಡತನ, ಅನಕ್ಷರತೆ, ಭ್ರಷ್ಟಾಚಾರ ದೇಶಕ್ಕೆ ಅತಿ ದೊಡ್ಡ ಸವಾಲುಗಳಾಗಿದ್ದು, ಅವುಗಳನ್ನು ತೊಡೆದು ಹಾಕಲು ಕ್ವಿಟ್‌ ಇಂಡಿಯಾ ಮಾದರಿ ಉಪ ಕ್ರಮವೊಂದರ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದಕ್ಕಾಗಿ “ಕರೇಂಗೆ, ಔರ್‌ ಕರ್‌ ಕೆ ರಹೇಂಗೆ’ (ನಾವು ಮಾಡುತ್ತೇವೆ, ಮಾಡಿಯೇ ತೀರುತ್ತೇವೆ) ಎಂಬ ಹೊಸ ಉಪಕ್ರಮವೊಂದನ್ನು ಘೋಷಿಸಿದ್ದಾರೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಿದ್ದು, ಇದನ್ನು ಸಾಧಿಸಬೇಕಿದೆ ಎಂದು ಹೇಳಿದ್ದಾರೆ.

ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ಸಂದರ್ಭ ಬುಧವಾರ ಲೋಕಸಸಭೆಯನ್ನುದ್ದೇಶಿಸಿ ಮಾತನಾಡಿ, “ಭ್ರಷ್ಟಾಚಾರ ದೇಶದ ಅಭಿವೃದ್ಧಿ ಯಾತ್ರೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ವೇಳೆ ಮಹಾತ್ಮಾ ಗಾಂಧೀಜಿ ಮಾಡು ಇಲ್ಲವೇ ಮಡಿ ಎಂದು ಘೋಷಿಸಿದರು. ಆದರೆ ಈಗ ನಾವು ಮಾಡುತ್ತೇವೆ, ಮಾಡಿಯೇ ತೀರು ತ್ತೇವೆ ಎಂಬ ಘೋಷವಾಕ್ಯದ ಅಗತ್ಯವಿದೆ. ಮುಂದಿನ 5 ವರ್ಷಗಳಲ್ಲಿ ನಾವು ಸಿದ್ಧಿಗಾಗಿ ಸಂಕಲ್ಪ ಮಾಡಬೇಕಿದೆ. ಇದು ನಮ್ಮನ್ನು ಸಾಧನೆಯತ್ತ ಕೊಂಡೊಯ್ಯಲಿದೆ. 2022ರ ವೇಳೆಗೆ ನಾವು ಧನಾತ್ಮಕ ಬದಲಾವಣೆ ತರಬೇಕಿದ್ದು, ಇತರ ಹಲವು ದೇಶಗಳಿಗೆ ಮಾದರಿಯಾಗಬೇಕಿದೆ’ ಎಂದರು.

“ಭಾರತದಲ್ಲಿ ವಸಾಹತು ವಿರುದ್ಧ ಹೋರಾಟ ಭಾರತಕ್ಕೆ ಮಾತ್ರ ಸೀಮಿತ ವಾಗಿಲ್ಲ. ಇದು ಇತರ ದೇಶಗಳಿಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಂದು ಆಂದೋಲನವನ್ನು ಹುಟ್ಟು ಹಾಕಿತು. ಕ್ವಿಟ್‌ ಇಂಡಿಯಾ ಭಾರತಕ್ಕೆ ಹೊಸ ನಾಯಕತ್ವದ ಪರಿಚಯ ಮಾಡಿಸಿತು. 1857ರಿಂದ 1942 ಸ್ವಾತಂತ್ರ್ಯಕ್ಕೂ ಮುನ್ನದ ಸಿದ್ಧತೆಯ ಕಾಲ. 1942ರಿಂದ 1947 ಸ್ವಾತಂತ್ರ್ಯದ ಹೋರಾಟದ ಪರಮೋಚ್ಚ ಕಾಲ. ಈಗ ನಾವು ಕೂಡ 2017ರಿಂದ 2022ರ ವರೆಗಿನ ಸ್ಥಿತಿಯನ್ನು ಹಾಗೆಯೇ ಪರಿಗಣಿಸಿ ದೇಶ ವನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಬೇಕಿದೆ. ಈ ಮೂಲಕ ದೇಶದ ಸ್ವಾತಂತ್ರ್ಯ ಹೋರಾ ಟಗಾರರ ಕನಸನ್ನು ನನಸು ಮಾಡಲು ಎಲ್ಲ ಸಂಸದರು ಪಕ್ಷಾತೀತವಾಗಿ ಕೈಜೋಡಿಸ ಬೇಕಿದೆ’ ಎಂದು ಪ್ರಧಾನಿ ಹೇಳಿದರು.

ಜನತೆಗೂ ಕರೆ
2022ಕ್ಕೆ ಹೊಸ ಭಾರತವನ್ನು ನಿರ್ಮಿ ಸುವತ್ತ ಜನರೂ ಈ ಆಂದೋಲನದಲ್ಲಿ ಭಾಗಿಯಾಗಲು ಕರೆ ನೀಡಿದ್ದಾರೆ. ಜನರು ಕೋಮುವಾದ, ಜಾತಿವಾದ, ಭ್ರಷ್ಟಾಚಾರ ತೊಡೆದು ಹಾಕಬೇಕಿದೆ ಎಂದು ಅವರು ಹೇಳಿದ್ದಾರೆ. 

ಭಾರತ ಒಗ್ಗಟ್ಟಾಗಬೇಕಿದೆ‌
“ಭಾರತವನ್ನು ಒಗ್ಗಟ್ಟಿನತ್ತ ಕೊಂಡೊಯ್ಯ ಬೇಕು. ಇದಕ್ಕಾಗಿ ಹೊಸ ಕಾರ್ಯಕ್ರಮವೊಂದರ ಅಗತ್ಯವಿದೆ’ ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹೇಳಿದ್ದಾರೆ. “ಅಂದು ಸ್ವಾತಂತ್ರ್ಯ ಹೋರಾಟಗಾರರು, ಭಾರತ ಬಿಟ್ಟು ತೊಲಗಿ ಎಂದರು. ಈಗ ನಾವು ಭಾರತ ಒಂದಾಗಿ ಎನ್ನುವ ಆಂದೋಲನ ರೂಪಿಸಬೇಕಿದೆ. ಇದು ಕಾಶ್ಮೀರದಿಂದ ಕನ್ಯಾಕುಮಾರಿ ಪರ್ಯಂತ ವಿವಿಧ ಪ್ರದೇಶಗಳಲ್ಲಿ  ವ್ಯಾಪಿಸಬೇಕಿದೆ’ ಎಂದಿದ್ದಾರೆ.

ಕರಾಳ ಶಕ್ತಿಗಳಿಂದ ಪ್ರಜಾಪ್ರಭುತ್ವಕ್ಕೆ ಹಾನಿ: ಸೋನಿಯಾ ಗಾಂಧಿ
“ಇಂದು ಕತ್ತಲ ಶಕ್ತಿಗಳು ಪ್ರಜಾಪ್ರಭುತ್ವದ ಬೇರುಗಳನ್ನು ನಾಶ ಮಾಡುತ್ತಿವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿ, ಆರೆಸ್ಸೆಸ್‌, ಬಿಜೆಪಿ ಮೇಲೆ ಪರೋಕ್ಷ ವಾಗಿ ಹರಿಹಾಯ್ದರು. ಕ್ವಿಟ್‌ ಇಂಡಿಯಾವನ್ನು ಕೆಲವು ಸಂಘಟನೆಗಳು ವಿರೋಧಿಸಿದ್ದವು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಯಾವುದೇ ಪಾತ್ರ ಹೊಂದಿರಲಿಲ್ಲ  ಎಂದು ಟೀಕಿಸಿದರು. 

“ಈಗ ಸಂವಿಧಾನದ ಏಕತೆ ಮತ್ತು ಜಾತ್ಯ ತೀತತೆಯ ಮೌಲ್ಯಗಳ ಮೇಲೆ ದ್ವೇಷಿಸುವ ಮತ್ತು ಒಡೆಯುವ  ಭಾವನೆಗಳ ಕಾರ್ಮೋಡಗಳು ಕವಿ ಯುತ್ತಿವೆ. ಪ್ರಜಾಪ್ರಭುತ್ವ, ಪ್ರಗತಿಪರ ಮೌಲ್ಯಗಳು ಅಳವಿನಂಚಿಗೆ ಸಾಗುತ್ತಿವೆ. ಅಷ್ಟೇ ಅಲ್ಲ, ಚರ್ಚೆ ಹಾಗೂ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಕ್ಷೀಣಗೊಳ್ಳುತ್ತಿವೆ’ ಎಂದು ಹೇಳಿದರು.
ಇಂದು ಸಮಾನತೆ, ಸಾಮಾಜಿಕ ನ್ಯಾಯ, ಕಾನೂನು ಆಧಾರಿತ ವ್ಯವಸ್ಥೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಪ್ರಜಾಪ್ರಭುತ್ವದ ಬೇರುಗಳಿಗೆ ಹಾನಿ ಮಾಡಲಾಗುತ್ತಿದೆ ಎಂದರು. “ಸಮಾಜ ಒಡೆವ, ಕೋಮುವಾದದ ಚಿಂತನೆಯ ಸಂಕೀರ್ಣ ಮನಃಸ್ಥಿತಿಯ ಭಾರತೀಯ ಚಿಂತನೆಯನ್ನು ನಾವು ಒಪ್ಪುವುದಿಲ್ಲ. ಒಂದು ಪಂಥದ ಶಕ್ತಿಗಳ ಕೈಮೇಲಾಗಲು ನಾವು ಬಿಡುವುದಿಲ್ಲ’ ಎಂದು ಸೋನಿಯಾ ಹೇಳಿದರು. ಇದೇ ವೇಳೆ ಬಿಜೆಪಿ ಸದಸ್ಯ ಕಿರಣ್‌ ಖೇರ್‌ ಅವರು “ದುರಂತ, ದುರಂತ’ ಎಂದು ಕೂಗಿ
ದರು. ಆದರೆ ಸೋನಿಯಾ ಅವರು ಇದನ್ನು ಗಣನೆಗೆ ತೆಗೆದುಕೊಳ್ಳದೇ ಮಾತುಗಳನ್ನು ಮುಂದುವ ರಿಸಿದರು. ತಮ್ಮ ಭಾಷಣದಲ್ಲಿ ನೆಹರೂ ಅವರನ್ನು ಸ್ಮರಿಸಿದ ಅವರು, ಕಾಂಗ್ರೆಸ್‌ ಕಾರ್ಯಕರ್ತರೂ ಸ್ವಾತಂತ್ರ್ಯ ಹೋರಾಟಕ್ಕೆ ಲೆಕ್ಕವಿಲ್ಲದಷ್ಟು ತ್ಯಾಗ ಮಾಡಿದ್ದಾರೆ ಎಂದರು.

ಶಕ್ತಿಶಾಲಿ ಭಾರತ, ರಾಜ್ಯಸಭೆಯಲ್ಲಿ  ನಿರ್ಣಯ
ಕ್ವಿಟ್‌ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ನಿಮಿತ್ತ ಇತ್ತ, ರಾಜ್ಯಸಭೆ ಶಕ್ತಿಶಾಲಿ, ಸ್ವಾವಲಂಬಿ, ಜಾತ್ಯತೀತ, ಪ್ರಜಾಪ್ರಭುತ್ವವಾದಿ ಭಾರತ ನಿರ್ಮಾಣ ಮಾಡುವತ್ತ ನಿರ್ಣಯ ಕೈಗೊಂಡಿದೆ. ಈ ಬಗ್ಗೆ ಗೊತ್ತುವಳಿಯನ್ನು ಮಂಡಿಸಿದ ರಾಜ್ಯಸಭಾಧ್ಯಕ್ಷ ಹಮೀದ್‌ ಅನ್ಸಾರಿ ಅವರು, ಸ್ವಾತಂತ್ರ್ಯ ಹೋರಾಟಗಾರರು ಬಯಸಿದ್ದ ಮೌಲ್ಯಗಳನ್ನು ಎತ್ತಿಹಿಡಿಯುವ ಅಗತ್ಯ ವಿದೆ ಎಂದರು. ಇನ್ನು, ಚಂಡೀಗಢದಲ್ಲಿ ಯುವತಿಗೆ ಬಿಜೆಪಿ ಮುಖ್ಯಸ್ಥನ ಕಿರುಕುಳ, ಎರಡು ವಿಧದ ನೋಟುಗಳನ್ನು ಪ್ರಿಂಟ್‌ ಮಾಡಿದ ವಿಚಾರದಲ್ಲಿ ಕೋಲಾಹಲವೂ ನಡೆಯಿತು. 

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.