ಗುಜರಾತ್ನಲ್ಲಿ ಬುದ್ಧನ ಪ್ರತಿಮೆ?
Team Udayavani, Nov 23, 2018, 10:38 AM IST
ಅಹಮದಾಬಾದ್: 182 ಮೀಟರ್ ಎತ್ತರದ “ಏಕತಾ ಪ್ರತಿಮೆ’ ಹೊಂದಿರುವ ಹೆಗ್ಗಳಿಕೆಯ ಬೆನ್ನಲ್ಲೇ ಗುಜರಾತ್ನಲ್ಲಿ ಬುದ್ಧನ ಬೃಹತ್ ಪ್ರತಿಮೆಯೊಂದು ನಿರ್ಮಾಣವಾಗುವ ಸಾಧ್ಯತೆಯಿದೆ.
ಗಾಂಧಿನಗರದಲ್ಲಿ 80 ಅಡಿ ಎತ್ತರದ ಬುದ್ಧನ ಪ್ರತಿಮೆ ಸ್ಥಾಪನೆಗೆ ಜಮೀನು ಒದಗಿಸುವಂತೆ ಗುಜರಾತ್ ಸರಕಾರಕ್ಕೆ ಮನವಿ ಮಾಡಿರುವುದಾಗಿ ಬೌದ್ಧ ಸಂಸ್ಥೆ ಸಂಘಕಾಯಾ ಪ್ರತಿಷ್ಠಾನ ತಿಳಿಸಿದೆ.