ಸೈಬರ್‌ ರಣತಂತ್ರಕ್ಕೆ ಹೊಸ ಸಂಸ್ಥೆ

ವಿದೇಶಗಳ ಮಾದರಿ ಒಂದೇ ಸಂಸ್ಥೆ ರಚನೆ ಸಂಭವ

Team Udayavani, Nov 14, 2019, 6:15 AM IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದ ಮೇಲೆ ವಿದೇಶಗಳಿಂದ ಸೈಬರ್‌ ದಾಳಿ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಈವರೆಗೆ ಈ ಬಗ್ಗೆ ತನಿಖೆ ನಡೆಸಲು ಒಂದೇ ಒಂದು ಸಂಸ್ಥೆಯಿಲ್ಲ. ಈ “ಅರಾಜಕತೆ’ಗೆ ಕಡಿವಾಣ ಹಾಕಿ “ಸೈಬರ್‌ ರಣತಂತ್ರ’ ಹೆಣೆಯಲು ಹೊಸ ಸಂಸ್ಥೆಯೊಂದನ್ನು ರೂಪಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ. ಈಚೆಗಷ್ಟೇ ಕುಂಡನ್‌ಕುಲಂನ ಪರಮಾಣು ವಿದ್ಯುತ್‌ ಕೇಂದ್ರದ ಮೇಲೆ ಸೈಬರ್‌ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸೈಬರ್‌ ಭಯೋತ್ಪಾದನೆಯನ್ನು ನಿಗ್ರಹಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.

ಹಲವು ಪ್ರಮುಖ ರಾಷ್ಟ್ರಗಳಲ್ಲಿ ಸೈಬರ್‌ ಭಯೋತ್ಪಾದನೆ ತಡೆಯಲು ಹಾಗೂ ಹಿಮ್ಮೆಟ್ಟಿಸಲು ಒಂದೇ ಸಂಸ್ಥೆ ಕಾರ್ಯಾಚರಿಸುತ್ತಿದೆ. ಬ್ರಿಟನ್‌ನಲ್ಲಿ ಸರಕಾರದ ಸಂವಹನ ಕೇಂದ್ರ ಸೈಬರ್‌ ಮೂಲ ಸೌಕರ್ಯಗಳ ರಕ್ಷಣೆಯ ಹೊಣೆ ಹೊತ್ತಿದೆ. ಅಮೆರಿಕ ದಲ್ಲಿ ನ್ಯಾಶನಲ್‌ ಸೆಕ್ಯೂರಿಟಿ ಏಜೆನ್ಸಿ ಹಾಗೂ ಸಿಂಗಾಪುರದಲ್ಲಿ ಸೈಬರ್‌ ಸೆಕ್ಯೂರಿಟಿ ಏಜೆನ್ಸಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಭಾರತದಲ್ಲಿ ಸೈಬರ್‌ ಅಪರಾಧ, ಭಯೋತ್ಪಾದನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆ ಗಳು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸು ತ್ತಿವೆ.

ಏಕೀಕೃತಗೊಂಡ ಸಂಸ್ಥೆ ರಚಿಸುವ ಅಗತ್ಯ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದರ ಜವಾಬ್ದಾರಿಯನ್ನು ಈಗ ರಾಷ್ಟ್ರೀಯ ಸೈಬರ್‌ ಭದ್ರತಾ ಸಂಯೋಜಕ ಲೆ|ಜ| ರಾಜೇಶ್‌ ಪಂಥ್‌ ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ಜಾರಿಗೆ ಬರಲಿರುವ ಸೈಬರ್‌ ಭದ್ರತಾ ನೀತಿಯಲ್ಲಿ ಈ ಅಂಶ ಸೇರಿಸಿಕೊಳ್ಳಲು ಯೋಜಿಸಲಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ