24 ವಾರಗಳ ವರೆಗೆ ಗರ್ಭಪಾತ: ಶೀಘ್ರ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟ
Team Udayavani, Aug 1, 2017, 3:20 PM IST
ಹೊಸದಿಲ್ಲಿ : ಅಪರೂಪದಲ್ಲೇ ಅಪರೂಪದ ಪ್ರಕರಣಗಳಲ್ಲಿ ಗರ್ಭ ಧಾರಣೆಯಾದ 24 ವಾರಗಳ ವರೆಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅನುಮತಿ ನೀಡುವ ಹೊಸ ಮಾರ್ಗದರ್ಶಿ ಸೂತ್ರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ.
ಈಗ ಊರ್ಜಿತದಲ್ಲಿರುವ ಪ್ರಕಾರ ವೈದ್ಯಕೀಯ ಗರ್ಭಪಾತ ಕಾಯಿದೆಯ ಸೆ.5ರ ಪ್ರಕಾರ ತಾಯಿಯ ಜೀವವನ್ನು ಉಳಿಸುವ ತತ್‌ಕ್ಷಣದ ಅಗತ್ಯವನ್ನು ನಿರ್ವಹಿಸುವುದಕ್ಕಾಗಿ 20 ವಾರಗಳ ಅನಂತರದಲ್ಲಿ ಗರ್ಭಪಾತಕ್ಕೆ ಅವಕಾಶವಿದೆ.
ಪ್ರಧಾನಿ ಕಾರ್ಯಾಲಯದ ಸಲಹೆಯ ಪ್ರಕಾರ 1971ರ ವೈದ್ಯಕೀಯ ಗರ್ಭಪಾತ ಕಾಯಿದೆಗೆ ಈ ಹಿಂದೆ ಸೂಚಿಸಲಾಗಿದ್ದ ತಿದ್ದುಪಡಿಗೆ ಬದಲಾವಣೆಗಳನ್ನು ಕೇಂದ್ರ ಸರಕಾರ ಮಾಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಮೊದಲು ವೈದ್ಯಕೀಯ ಗರ್ಭಪಾತದ ಗರಿಷ್ಠ ಅವಧಿಯನ್ನು 20ರಿಂದ 24 ವಾರಗಳಿಗೆ ಏರಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾವವನ್ನು ಸ್ವೀಕರಿಸಿದ ಬಳಿಕ ಪಿಎಂಓ, ಆರೋಗ್ಯ ಸಚಿವಾಲಯಕ್ಕೆ “ಲಿಂಗಾಯ್ಕೆಯ ಗರ್ಭಪಾತ’ ಕುರಿತಾದ ಪ್ರಶ್ನೆಯನ್ನು ಬಗೆಹರಿಸುವಂತೆ ಸೂಚಿಸಿತ್ತು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಹೋಮಿಯೋಪತಿ ಕ್ಲಿನಿಕ್‌ನಲ್ಲಿ ಡಜನ್‌ಗೂ ಅಧಿಕ ಭ್ರೂಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮ ಗರ್ಭಪಾತದ ಜಾಲವೇ ಕ್ರಿಯಾಶೀಲವಾಗಿರುವುದನ್ನು ಲೆಕ್ಕಿಸಿ ಈ ಸಲಹೆಯನ್ನು ನೀಡಲಾಗಿತ್ತು.
ಗರ್ಭಧಾರಣೆಯಾದ ಇಪ್ಪತ್ತು ವಾರಗಳ ಬಳಿಕದ ಗರ್ಭಪಾತಕ್ಕೆ ಅನುಕೂಲಿಸುವ “ಗರಿಷ್ಠ ಅವಧಿ ವಿಸ್ತರಣೆ’ಯ ಅವಕಾಶವನ್ನು ಅಪರೂಪದಲ್ಲೇ ಅಪರೂಪ ಎಂಬಂತಹ ಪ್ರಕರಣಗಳಿಗೆ ಮಾತ್ರವೇ ಅನ್ವಯಿಸಬೇಕು ಎಂದು ಆರೋಗ್ಯ ಸಚಿವಾಲಯವು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪರಿಷ್ಕೃತ ಪ್ರಸ್ತಾವದಲ್ಲಿ ಸ್ಪಷ್ಟಪಡಿಸಿದೆ ಎಂದು ಡಿಎನ್‌ಎ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ