ಚೌಕೀದಾರ್‌ ಮಾದರಿಯಲ್ಲಿ ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಂದ ಹೊಸ ಆಂದೋಲನ

Team Udayavani, Jun 17, 2019, 5:41 AM IST

ಸಾಂದರ್ಭಿಕ ಚಿತ್ರ

ಗುವಾಹಟಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಯವರ ಚೌಕಿದಾರ್‌ ಟೀಕೆಗೆ ಪ್ರತಿಭಟನ ಸೂಚಕವಾಗಿ ಪ್ರಧಾನಿ ಮೋದಿ ಸಮೇತ ಎಲ್ಲ ಬಿಜೆಪಿ ನಾಯಕರು ಚುನಾವಣೆಗೂ ಮುನ್ನ ತಮ್ಮ ಟ್ವಿಟರ್‌ ಖಾತೆಗಳ ಹ್ಯಾಂಡಲ್‌ನ ತಮ್ಮ ಹೆಸರಿನ ಮುಂದೆ ಚೌಕಿದಾರ್‌ ಪದವನ್ನು ಸೇರಿಸಿಕೊಂಡಿದ್ದರು.

ಅದರಿಂದ ಸ್ಫೂರ್ತಿಗೊಂಡಿರುವ ಅಸ್ಸಾಂನ ಶಿಕ್ಷಕರ ವೃಂದ ತಮ್ಮನ್ನು ಆಟೋ ಚಾಲಕರಿಗೆ ಹೋಲಿಸಿರುವ ಅಲ್ಲಿನ ಶಿಕ್ಷಣ ಸಚಿವ ಸಿದ್ದಾರ್ಥ ಭಟ್ಟಾಚಾರ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

ಅದಕ್ಕಾಗಿ, ಟ್ವಿಟರ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ತಮ್ಮ ಖಾತೆಗಳಲ್ಲಿರುವ ತಮ್ಮ ಹೆಸರುಗಳ ಮುಂದೆ ಹ್ಯಾಶ್‌ಟ್ಯಾಗ್‌ ಬಳಸಿ “ನಾನೂ ಕೂಡ ಆಟೋ ಚಾಲಕ’ (ಐ ಆ್ಯಮ ಆಲ್ಸೊà ಆಟೋ ಡ್ರೈವರ್‌) ಎಂದು ಬರೆದುಕೊಳ್ಳಲು ನಿರ್ಧ ರಿಸಿ ದ್ದಾರೆ. ಶಿಕ್ಷಕರಿಗೆ ಸ್ಪರ್ಧಾತ್ಮಕ ಪರೀಕ್ಷೆಯ (ಟಿಇಟಿ) ಮೂಲಕ ನೀಡಲಾಗುವ ಅರ್ಹತಾ ಪ್ರಮಾಣ ಪತ್ರ ವನ್ನು, ಆಟೋ ಚಾಲಕರಿಗೆ ನೀಡುವ ಚಾಲನ ಪರ ವಾನಗಿಯನ್ನು ಆಗಾಗ ಪರಿಷ್ಕರಿಸಬೇಕು ಎಂದಿದ್ದು ಇದರ ಹಿಂದಿನ ಕಾರಣ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ