ಬೆಂಗ್ಳೂರಿಗೆ ಹೊಸ ವರ್ತುಲ ರಸ್ತೆ
Team Udayavani, Jan 16, 2018, 6:05 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ “ಭಾರತ ಮಾಲಾ’ ಯೋಜನೆಯ ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 28 ನಗರಗಳಿಗೆ ಸುಮಾರು 36,290 ಕೋಟಿ ರೂ. ವೆಚ್ಚದಲ್ಲಿ ಹೊಸ ರಿಂಗ್ ರಸ್ತೆಗಳನ್ನು ನಿರ್ಮಿಸಲಾಗುವುದೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಲ್ಲಿ ಸದ್ಯಕ್ಕೆ 21,000 ರೂ. ಮೌಲ್ಯದ ಕಾಮಗಾರಿಗಳ ಬಗ್ಗೆ ರೂಪುರೇಷೆಗಳನ್ನು ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಯೋಜನೆಯ ಮೊದಲ ಹಂತದಡಿ ಬೆಂಗಳೂರು, ದಿಲ್ಲಿ, ಲಕ್ನೋ, ರಾಂಚಿ, ಪಾಟ್ನಾ, ಶ್ರೀನಗರ ಹಾಗೂ ಉದಯ್ಪುರ್ಗಳಿಗೆ ರಿಂಗ್ ರೋಡ್ ಸೌಲಭ್ಯ ಸಿಗಲಿದೆ ಎಂದು ಗಡ್ಕರಿ ವಿವರಿಸಿದರು. ದೇಶದ ಮಹಾ ನಗರಗಳನ್ನು ಬೆಸೆಯುವ “ಭಾರತ ಮಾಲಾ’ ಯೋಜನೆಯಡಿ 2022ರ ಹೊತ್ತಿಗೆ 84 ಸಾವಿರ ಕಿ.ಮೀ.ಗಳಷ್ಟು ರಿಂಗ್ ರಸ್ತೆಗಳನ್ನು ಅಂದಾಜು 6.92 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕೇಂದ್ರ ಉದ್ದೇಶಿಸಿದೆ.
ಹೆಚ್ಚಿನ ಅನುದಾನಕ್ಕೆ ಆಗ್ರಹ: ಭಾರತ ಮಾಲಾ ಯೋಜನೆ ಸದ್ಯಕ್ಕೆ ಲೆಕ್ಕ ಹಾಕಲಾಗಿರುವ ಅಂದಾಜು ವೆಚ್ಚಕ್ಕಿಂತ ಅಧಿಕ ಖರ್ಚಾಗಲಿರುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಅನುದಾನಕ್ಕೆ ಹೆದ್ದಾರಿ ಪ್ರಾಧಿಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿದೆ .
ಮೊದಲ ಹಂತದ ಕಾಮಗಾರಿಗೆ ಬಜೆಟ್ನಲ್ಲಿ 84,260 ಕೋಟಿ ರೂ.ಗಳನ್ನು ಅನುದಾನವಾಗಿ ನೀಡುವಂತೆ ಹಣಕಾಸು ಇಲಾಖೆಗೆ ಸಾರಿಗೆ ಸಚಿವಾಲಯ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಸ್ಪಂದಿಸಿರುವ ಹಣಕಾಸು ಇಲಾಖೆ, ಈ ಬಾರಿಯ ಬಜೆಟ್ನಲ್ಲಿ 66,760 ಕೋಟಿ ರೂ. ನೀಡುವುದಾಗಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ