ಹೊಸ ಭದ್ರತಾ ವೈಶಿಷ್ಟ್ಯ: ಶೀಘ್ರ ಬರಲಿದೆ 200 ರೂ ನೋಟು ?
Team Udayavani, Apr 4, 2017, 9:50 AM IST
ಹೊಸದಿಲ್ಲಿ: ಶೀಘ್ರದಲ್ಲಿ 200 ರೂಪಾಯಿ ಹೊಸ ನೋಟುಗಳನ್ನು ಹೊರತರಲು ಆರ್ಬಿಐ ಮುಂದಾಗಿದೆ ಎನ್ನಲಾಗಿದೆ. ವರದಿಯಾದಂತೆ ನೋಟುಗಳಲ್ಲಿ ಹೊಸ ಭದ್ರತಾ ವೈಶಿಷ್ಟ್ಯಗಳಿರಲಿವೆ ಎನ್ನಲಾಗಿದೆ.
ಹೊಸ 500 ರೂ ಮತ್ತು 2000 ರೂ ನೋಟುಗಳಲ್ಲಿ ಹಲವು ಭದ್ರತಾ ಗುಣಲಕ್ಷಣಗಳನ್ನು ಕಳ್ಳದಂಧೆ ಕೋರರು ವ್ಯಾಪಕವಾಗಿ ಬದಲಾವಣೆ ಮಾಡಿರುವ ಹಿನ್ನಲೆಯಲ್ಲಿ ಎಚ್ಚೆತ್ತು ಕೊಂಡಿರುವ ಸರ್ಕಾರ ಇನ್ನಷ್ಟು ಸುರಕ್ಷತಾ ಕ್ರಮಗಳೊಂದಿಗೆ 200 ರೂಪಾಯಿ ನೋಟು ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ಕಳ್ಳದಂಧೆಕೋರರಿಗೆ ಕಡಿವಾಣ ಸಾಕುವ ನಿಟ್ಟಿನಲ್ಲಿ ಸರ್ಕಾರ, ಪ್ರತಿ 3-4 ವರ್ಷಗಳಿಗೊಮ್ಮೆ ನೋಟು ಗಳಲ್ಲಿ ಅಳವಡಿಸಲಾಗಿರುವ ಭದ್ರತಾ ಲಕ್ಷಣಗಳನ್ನು ಬದಲಿಸಲು ನಿರ್ಧರಿಸಿದೆ.
ಆರ್ಬಿಐನ ಉನ್ನತ ಮಟ್ಟದ ಸಭೆಯಲ್ಲಿ 200 ರೂಪಾಯಿ ನೋಟು ಬಿಡುಗಡೆ ಮಾಡುವ ಕುರಿತು ಚರ್ಚೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು