ಹಬ್ಬದ ಸಾಲಿಗೆ ಸೋನಿ YAY! ನಿಂದ ಹೊಸ ಶೋ ಗಳು
Team Udayavani, Sep 26, 2021, 4:17 PM IST
ನವದೆಹಲಿ: ಮಕ್ಕಳಿಗೆ ಅವರ ನೆಚ್ಚಿನ ಶೋಗಳು ಮತ್ತು ಪಾತ್ರಗಳನ್ನು ನೀಡುವ ಪ್ರಯತ್ನದಲ್ಲಿ ಪ್ರಾರಂಭವಾದ ಜನಪ್ರಿಯ ಮಕ್ಕಳ ಮನರಂಜನೆಯ ಚಾನೆಲ್ ಆದ Sony YAY! ಚಾನೆಲ್ ತನ್ನ ಬಹುನಿರೀಕ್ಷಿತ ಹಬ್ಬದ ಕೊಡುಗೆಗಳಾಗಿ ಹೊಸ ವಿಷಯ, ಮೋಜು, ಸ್ನೇಹ ಮತ್ತು ಹಾಸ್ಯ ತುಂಬಿದ ಹೊಸ ಶೋಗಳನ್ನು ಘೋಷಿಸಿದೆ.
ಮಕ್ಕಳ ಅತ್ಯಂತ ನೆಚ್ಚಿನ ಮತ್ತು ದಶಕದ ಜನಪ್ರಿಯ ಶೋ – ಒಗ್ಗಿ ಎಂಡ್ ದ ಕಾಕ್ರೋಚಸ್ಗೆ ಹೊಸ ವಾಸಸ್ಥಳವಾಗಿದೆ. ಮೊದಲ ಋತುವಿನ ದೊಡ್ಡ ಯಶಸ್ಸಿನ ನಂತರ, Sony YAY!ನ ವರ್ಗದಲ್ಲೇ ಪ್ರಥಮವಾದ ಒರಿಜಿನಲ್ ಶೋ ತಾರಕ್ ಮೆಹ್ತಾ ಕಾ ಛೋಟಾ ಚಶ್ಮಾದ ಎರಡನೇ ಸೀಸನ್ ಬರುತ್ತಿದೆ.
ಎರಡು ಹೊಚ್ಚ ಹೊಸ ಸರಣಿಗಳಾದ ಹಸ್ತೆ ರಹೋ ಹೆನ್ರಿ ಮತ್ತು ಹ್ಯಾರಿ & ಬನ್ನಿಗೆ ಪರಿಚಯಿಸಲಿದೆ.
ಅಕ್ಟೋಬರ್ನಲ್ಲಿ Sony YAY! ಮಕ್ಕಳು ತಮ್ಮ ನೆಚ್ಚಿನ ಶೋ ಒಗ್ಗಿ ಎಂಡ್ ದ ಕಾಕ್ರೋಚಸ್ ಅನ್ನು ಒಂದು ವಿಶೇಷ ತಿರುವಿನೊಂದಿಗೆ ಆನಂದಿಸಲು ಎಲ್ಲಾ ಏರ್ಪಾಡುಗಳನ್ನು ಮಾಡಿದೆ. ಈ ಅಟ್ಟಿಸಿಕೊಂಡು ಹೋಗುವ ಹಾಸ್ಯವು, ತನ್ನ ವಿಚಿತ್ರ ನಿರೂಪಣೆ ಮತ್ತು ಉಲ್ಲಾಸದ ಬೆನ್ನಟ್ಟುವಿಕೆಯೊಂದಿಗೆ ಯಾವಾಗಲೂ ಯುವ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ ಇದರ ನಂತರ ಟಿವಿಯ ಅತ್ಯಂತ ಪ್ರೀತಿಪಾತ್ರರಾದ ಗೋಕುಲಧಾಮ್ ಸೊಸೈಟಿ ಬರಲಿದ್ದು, ಇದು ತಾರಕ್ ಮೆಹ್ತಾ ಕಾ ಛೋಟಾ ಚಶ್ಮಾ- ಸೀಸನ್ 2ರಲ್ಲಿ ಹೊಸ ಸಂಚಿಕೆಗಳು, ಇನ್ನೂ ವಿಚಿತ್ರವಾದ ಸಾಹಸಗಳ ಜೊತೆ ಮಕ್ಕಳು ಮತ್ತು ಕುಟುಂಬಗಳ ಮನರಂಜಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ