ಎನ್‌ಐಎ ವಶಕ್ಕೆ ನಾಲ್ವರು

Team Udayavani, Apr 21, 2019, 6:00 AM IST

ಹೈದರಾಬಾದ್‌: ಕುಖ್ಯಾತ ಐಸಿಸ್‌ ಭಯೋತ್ಪಾದಕ ತಂಡಕ್ಕೆ ಭಾರತದಿಂದ ನೇಮಕಾತಿ ಮಾಡಿಕೊಳ್ಳುವ ದೊಡ್ಡ ದಂಧೆಯೊಂದನ್ನು ಅನಾವರಣಗೊಳಿಸಿದ್ದ 2016ರ ಅಬುಧಾಬಿ ಮಾಡ್ನೂಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ, ಹೈದರಾಬಾದ್‌ ಹಾಗೂ ಮಹಾರಾಷ್ಟ್ರದ ವಾರ್ಧಾದಲ್ಲಿ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ನಾಲ್ವರು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ಈ ಕುರಿತಂತೆ ಪ್ರಕಟನೆ ಹೊರಡಿಸಿರುವ ಎನ್‌ಐಎ, “ಅಬುಧಾಬಿ ಮಾಡ್ನೂಲ್‌ನ ತನಿಖೆಯನ್ನು 2016ರಿಂದ ತಾನು ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಶುಕ್ರವಾರದ ದಾಳಿಗಳನ್ನು ಸಂಘಟಿಸಲಾಗಿತ್ತು’ ಎಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ