2017ರ ದಾಳಿ ರೂವಾರಿ ಜೈಶ್ ಉಗ್ರನನ್ನು ಬಂಧಿಸಿದ ಎನ್.ಐ.ಎ.
ಲೆಥ್ ಪೋರಾ ಸಿ.ಆರ್.ಪಿ.ಎಫ್. ಗ್ರೂಪ್ ಸೆಂಟರ್ ದಾಳಿ ಆರೋಪಿ ಇರ್ಷಾದ್ ಅಹಮ್ಮದ್ ರೇಶಿ ಬಂಧನ
Team Udayavani, Apr 14, 2019, 4:56 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ : Representative Image Used
ಜಮ್ಮು-ಕಾಶ್ಮೀರ: 2017ರಲ್ಲಿ ಲೇಥ್ ಪೋರಾದಲ್ಲಿ ಸಿ.ಆರ್.ಪಿ.ಎಫ್. ಗ್ರೂಪ್ ಸೆಂಟರ್ ಮೇಲೆ ನಡೆದಿದ್ದ ದಾಳಿಯಲ್ಲಿ ಪಾಲ್ಗೊಂಡಿದ್ದ ಜೈಶ್ ಉಗ್ರ ಇರ್ಷಾದ್ ಅಹಮ್ಮದ್ ರೇಶಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಆದಿತ್ಯವಾರದಂದು ಬಂಧಿಸಿವೆ. ಈತ ಪುಲ್ವಾಮ ನಿವಾಸಿಯಾಗಿದ್ದಾನೆ.
ಈ ಪ್ರಕರಣದಲ್ಲಿ ಎನ್.ಐ.ಎ.ಯಿಂದ ಬಂಧಿಸಲ್ಪಟ್ಟವರಲ್ಲಿ ರೇಶಿ ಐದನೇ ಆರೋಪಿಯಾಗಿದ್ದಾನೆ. ಈ ಮೊದಲು ಬಂಧಿತರಾಗಿದ್ದ ದಾಳಿ ಪ್ರಕರಣದ ಆರೋಪಿಗಳಾದ ನಿಸಾರ್ ಅಹಮ್ಮದ್ ತಂತ್ರೆ ಮತ್ತು ಸೈಯದ್ ಹಿಲಾಲ್ ಅಂದ್ರಾಬಿಯನ್ನು ವಿಚಾರಣೆ ನಡೆಸಿದ ಬಳಿಕ ಎನ್.ಐ.ಎ. ನಡೆಸಿದ ಫಾಲೋ ಅಪ್ ತನಿಖೆಯಲ್ಲಿ ರೇಶಿಯ ಬಂಧನವಾಗಿದೆ.
ಜೈಶ್ ಎ ಮಹಮ್ಮದ್ ಸಂಘಟನೆಗೆ ಸೇರಿರುವ ರೇಶಿ ಒಬ್ಬ ಕ್ರಿಯಾಶೀಲ ಕಾರ್ಯಕರ್ತನಾಗಿದ್ದು ಸಂಘಟನೆಯ ಕೆಲಸಗಳನ್ನು ತಳಮಟ್ಟದಿಂದ ಮಾಡುತ್ತಿದ್ದ ಎಂದು ಎ.ಎನ್.ಐ. ಹೇಳಿದೆ. ಈತ ಜೈಶ್ ಕಮಾಂಡರ್ ನೂರ್ ಮಹಮ್ಮದ್ ತಾಂತ್ರೆ ಅಲಿಯಾಸ್ ನೂರ್ ತ್ರಾಲಿಯ ನಿಕಟವರ್ತಿಯಾಗಿದ್ದ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.
2017ರ ಡಿಸೆಂಬರ್ 30, 31ರಂದು ಲೇಥ್ ಪೋರಾದಲ್ಲಿರುವ ಸಿ.ಆರ್.ಪಿ.ಎಫ್.ಗ್ರೂಪ್ ಸೆಂಟರ್ ಮೇಲೆ ಜೈಶ್ ಉಗ್ರರು ದಾಳಿ ಮಾಡಿದ್ದರು. ಅದೇ ವರ್ಷ ಭದ್ರತಾ ಪಡೆಗಳಿಂದ ಎನ್ ಕೌಂಟರ್ ಗೊಳಗಾಗಿದ್ದ ಜೈಶ್ ಕಮಾಂಡರ್ ನೂರ್ ತ್ರಾಲಿ ಹತ್ಯಗೆ ಪ್ರತೀಕಾರವಾಗಿ ಉಗ್ರರು ಲೇಥ್ ಪೋರಾ ದಾಳಿ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ