ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿಯ ಮನೆ ಸೊತ್ತು ಜಪ್ತಿ ಮಾಡಿದ ಎನ್‌ಐಎ
Team Udayavani, Jul 10, 2019, 11:17 AM IST
ಹೊಸದಿಲ್ಲಿ : ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ಆಸಿಯಾ ಅಂದ್ರಾಬಿ ಗೆ ಸೇರಿದ ಮನೆ ಸೊತ್ತನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉಗ್ರ ನಿಗ್ರಹ ಕಾನೂನಿನಡಿ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸಿಯಾ ಅಂದ್ರಾಬಿ ಪ್ರಕೃತ ತಿಹಾರ್ ಜೈಲಿನಲ್ಲಿ ಜ್ಯುಡಿಶಿಯಲ್ ಕಸ್ಟಡಿಯಲ್ಲಿ ಇದ್ದಾರೆ. ಆಕೆ ತನ್ನ ವಾಸದ ಮನೆಯನ್ನು ಉಗ್ರ ನಿಧಿಯನ್ನು ಬಳಸಿಕೊಂಡು ಖರೀದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆಯ ಪ್ರಕಾರ ಅಂದ್ರಾಬಿಯ ಮನೆ ಸೊತ್ತನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.