ವಿವಿಧೆಡೆ ಎನ್‌ಐಎ ದಾಳಿ

Team Udayavani, Jan 24, 2019, 12:30 AM IST

ಹೊಸದಿಲ್ಲಿ: ಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಹಣಕಾಸು ನೆರವು ನೀಡುತ್ತಿರುವ ಕೆಲ ಮಾಹಿತಿಗಳ ಮೇರೆಗೆ ಬುಧವಾರ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಉತ್ತರ ಪ್ರದೇಶ, ರಾಜಸ್ಥಾನದ ಕೆಲ ಪ್ರಾಂತ್ಯಗಳಲ್ಲಿ ದಾಳಿ ನಡೆಸಿದೆ. ದಾಳಿಯ ವೇಳೆ, 23 ಸಿಮ್‌ ಕಾರ್ಡುಗಳು, 23 ಫೋನ್‌ಗಳು, ಐದು ಮೆಮರಿ ಕಾರ್ಡುಗಳು, ಸಿಡಿಗಳು, ಹಾರ್ಡ್‌ ಡ್ರೈವ್‌ಗಳು, ಕಂಪ್ಯೂಟರ್‌ ಬಿಡಿಭಾಗಗಳು, ಎಂಟು ಪಾಸ್‌ಪೋರ್ಟ್‌ಗಳು, ವಿದೇಶಿ ಬ್ಯಾಂಕುಗಳ ಡೆಬಿಟ್‌ ಕಾರ್ಡುಗಳು, ಒಂದು ಲ್ಯಾಪ್‌ಟಾಪ್‌, 2 ಕೆಜಿ ಚಿನ್ನ ಹಾಗೂ 21 ಕೆಜಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಸೋಮವಾರ ಮೊಹಮ್ಮದ್‌ ಮೊಲಾನಿ ಅಲಿಯಾಸ್‌ ಬಬ್ಲೂ (43) ಎಂಬಾತನನ್ನು ಬಂಧಿಸಿರುವ ಬೆನ್ನಿಗೇ ಈ ದಾಳಿ ನಡೆದಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ