ಹಿಜ್ಬುಲ್ ಉಗ್ರರ ಜತೆ ಬಂಧಿಸಲ್ಪಟ್ಟ ಡಿಎಸ್ಪಿ ಸಿಂಗ್ ವಿಚಾರಣೆ ಆರಂಭಿಸಿದ ಎನ್ ಐಎ

ವರದಿಯ ಪ್ರಕಾರ, ದಾಳಿ ವೇಳೆ ಸಿಂಗ್ ಮನೆಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಎನ್ ಐಎ ವಶಪಡಿಸಿಕೊಂಡಿದೆ.

Team Udayavani, Jan 18, 2020, 3:36 PM IST

ನವದೆಹಲಿ: ಹಿಜ್ಬುಲ್ ಮುಜಾಹಿದೀನ್ ಉಗ್ರರ ಜತೆ ಸೆರೆ ಸಿಕ್ಕಿದ್ದ ಜಮ್ಮು-ಕಾಶ್ಮೀರ ಡಿಎಸ್ಪಿ ದೇವಿಂದರ್ ಸಿಂಗ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ) ತನಿಖೆ ನಡೆಸುತ್ತಿದ್ದು, ಅಮಾನತುಗೊಂಡ ಡಿಎಸ್ಪಿಯನ್ನು ವಿಚಾರಣೆಗಾಗಿ ದೆಹಲಿಗೆ ಕರೆ ತರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

ಸಿಂಗ್ ಬಂಧನ ಹಾಗೂ ಭಯೋತ್ಪಾದಕ ಸಂಘಟನೆ ಜತೆಗೆ ಶಾಮೀಲಾಗಿರುವ ಆರೋಪದ ಕುರಿತು ಎನ್ ಐಎ ವಿಚಾರಣೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಜನವರಿ 16ರಂದು ತಿಳಿಸಿತ್ತು ಎಂದು ನ್ಯೂಸ್ ಏಜೆನ್ಸಿ ಎಎನ್ ಐ ವಿವರಿಸಿದೆ.

ವರದಿಯ ಪ್ರಕಾರ, ದಾಳಿ ವೇಳೆ ಸಿಂಗ್ ಮನೆಯಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಎನ್ ಐಎ ವಶಪಡಿಸಿಕೊಂಡಿದೆ. ಸಿಂಗ್ ಬಂಧನದ ನಂತರ ಪೊಲೀಸ್ ಅಧಿಕಾರಿ ಸಿಂಗ್ ಮನೆ ಮೇಲೆ ಜಮ್ಮು ಕಾಶ್ಮೀರ ಪೊಲೀಸರು ದಾಳಿ ನಡೆಸಿದ ವೇಳೆ ಎಕೆ 47, ಹ್ಯಾಂಡ್ ಗ್ರೆನೇಡ್ಸ್ ಹಾಗೂ ಪಿಸ್ತೂಲ್ ಅನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ