ಐಸಿಸ್‌ ಸೇರಿದ್ದ ಅನೇಕರು ಪಿಎಫ್ಐ ಕಾರ್ಯಕರ್ತರು! ಎನ್‌ಐಎ ವರದಿಯಲ್ಲಿ ಉಲ್ಲೇಖ

ಸುತ್ತಿ ಬಳಸಿ ದೀರ್ಘಾವಧಿ ಪ್ರಯಾಣ ಮಾಡಿ ಸಿರಿಯಾ ತಲುಪುತ್ತಿದ್ದರು

Team Udayavani, Oct 1, 2022, 6:45 AM IST

ಐಸಿಸ್‌ ಸೇರಿದ್ದ ಅನೇಕರು ಪಿಎಫ್ಐ ಕಾರ್ಯಕರ್ತರು! ಎನ್‌ಐಎ ವರದಿಯಲ್ಲಿ ಉಲ್ಲೇಖ

ನವದೆಹಲಿ:ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ)ದ ಹಲವು ಸದಸ್ಯರು ಸಿರಿಯಾದಂಥ ಐಸಿಸ್‌ ಉಗ್ರ ಸಂಘಟನೆಯ ಬಾಹುಳ್ಯವಿರುವ ದೇಶಗಳಿಗೆ ಪ್ರಯಾಣಿಸಿ, ಜಿಹಾದ್‌ಗೆ ಸೇರಿದ್ದರು ಎಂಬ ಅಂಶ ಈಗ ಬಹಿರಂಗವಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಸಿದ್ಧಪಡಿಸಿರುವ ವರದಿಯಲ್ಲಿ ಈ ಕುರಿತು ಪ್ರಸ್ತಾಪಿಸಲಾಗಿದೆ. ಪಿಎಫ್ಐ ಸದಸ್ಯರು ಭದ್ರತಾ ಸಂಸ್ಥೆಗಳ ಕಣ್ಣಿನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸಿರಿಯಾದಂಥ ದೇಶಗಳಿಗೆ ಸುತ್ತಿ ಬಳಸಿ, ದೀರ್ಘಾವಧಿಯ ಪ್ರಯಾಣವನ್ನು ಕೈಗೊಳ್ಳುತ್ತಿದ್ದರು. ಈಗಾಗಲೇ ಕೆಲವು ವಿದೇಶಗಳಲ್ಲಿ ಜಿಹಾದ್‌ ವೇಳೆ ಮೃತಪಟ್ಟಿರುವ ಮತ್ತು ಬಂಧಿತರಾಗಿರುವ, ನಂತರ ಗಡಿಪಾರಾಗಿರುವ ಪ್ರಕರಣಗಳು ನಮ್ಮ ಮುಂದಿವೆ ಎಂದೂ ವರದಿ ಹೇಳಿದೆ.

ಸುತ್ತಿ ಬಳಸಿ ಪ್ರಯಾಣ:
ಕೆಲವು ಮುಸ್ಲಿಂ ಯುವಕರು ಸಿರಿಯಾ ಹಾಗೂ ಇತರೆ ದೇಶಗಳಿಗೆ ತೆರಳಿ, ಐಸಿಸ್‌ ಸೇರ್ಪಡೆಗೊಳ್ಳಲು ಸಿದ್ಧರಾಗಿದ್ದಾರೆ. ಈ ಪೈಕಿ ಅನೇಕ ಮಂದಿ ಪಿಎಫ್ಐ ಸಂಘಟನೆಯ ಸದಸ್ಯರು ಎಂಬ ಮಾಹಿತಿಯು 2017ರಲ್ಲಿ ಕೇರಳ ಪೊಲೀಸರಿಗೆ ದೊರೆತಿತ್ತು. ಜತೆಗೆ, ಸಿರಿಯಾಗೆ ಹೋಗಿ ಐಸಿಸ್‌ ಸಂಘಟನೆಯನ್ನು ಸೇರಿದವರು ಮೊದಲಿಗೆ ಸೌದಿ ಅರೇಬಿಯಾಗೆ ತೆರಳಿ, ಅಲ್ಲಿಂದ ಮಲೇಷ್ಯಾ ಮತ್ತು ಟರ್ಕಿಗೆ ಸಂಚರಿಸುತ್ತಿದ್ದರು.

ನಂತರ, ಸಿರಿಯಾದಲ್ಲಿ ಐಸಿಸ್‌ಗೆ ಸೇರ್ಪಡೆಯಾಗಲು ಅಂತಿಮ ಒಪ್ಪಿಗೆಗಾಗಿ ಕಾಯುತ್ತಿದ್ದರು ಎಂದೂ ಎನ್‌ಐಎ ತಿಳಿಸಿದೆ.

ಪಿಎಫ್ಐ ನಾಯಕರಾದ ಅಬ್ದುಲ್‌ ಮನಾಫ್ ಅಲಿಯಾಸ್‌ ಅಬು ಫಾತಿಮಾಂದ್‌, ಮೊಹಮ್ಮದ್‌ ಸಮೀರ್‌ ಅಲಿಯಾಸ್‌ ಅಬು ಸಿರಿಯಾದಲ್ಲೇ ಮೃತಪಟ್ಟಿದ್ದರು. ಇನ್ನು ಒಬ್ಬ ಮಾಸ್ಟರ್‌ಮೈಂಡ್ ಸೇರಿದಂತೆ 5 ಮಂದಿಯನ್ನು ಐಸಿಸ್‌ ಸೇರುವ ಮುನ್ನವೇ ಕೇರಳ ಪೊಲೀಸರು ಬಂಧಿಸಿದ್ದರು ಎಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅ.20ರವರೆಗೆ ನ್ಯಾಯಾಂಗ ವಶಕ್ಕೆ
ಇತ್ತೀಚೆಗಿನ ದಾಳಿ ವೇಳೆ ಎನ್‌ಐಎಯಿಂದ ಬಂಧಿತರಾಗಿದ್ದ ಪಿಎಫ್ಐನ 11 ಮಂದಿ ಕಾರ್ಯಕರ್ತರನ್ನು ಕೊಚ್ಚಿಯ ವಿಶೇಷ ಕೋರ್ಟ್‌ ಶುಕ್ರವಾರ ಅ.20ರವರೆಗೆ ನ್ಯಾಯಾಂಗ ವಶಕ್ಕೆ ನೀಡಿದೆ. ಎನ್‌ಐಎ ವಶದ ಅವಧಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು.

ಪ್ರಧಾನ ಕಚೇರಿಗೆ ಬೀಗಮುದ್ರೆ
ಕೇರಳದ ಕಲ್ಲಿಕೋಟೆಯಲ್ಲಿರುವ ಪಿಎಫ್ಐನ ರಾಜ್ಯ ಪ್ರಧಾನ ಕಚೇರಿಗೆ ಶುಕ್ರವಾರ ಎನ್‌ಐಎ ಅಧಿಕಾರಿಗಳು ಬೀಗಮುದ್ರೆ ಜಡಿದಿದ್ದಾರೆ. ಮೀನ್‌ಚಂದಾ ಪ್ರದೇಶದಲ್ಲಿ ಕಚೇರಿಯ ಗೋಡೆಗೆ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ನೋಟಿಸ್‌ವೊಂದನ್ನು ಅಂಟಿಸಿದ್ದಾರೆ.

ಟಾಪ್ ನ್ಯೂಸ್

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

1-fdfadad

ಅಂಜನಾದ್ರಿ: ಸ್ವಪ್ರೇರಣೆಯಿಂದ ಅನ್ಯಕೋಮಿನ ವ್ಯಾಪಾರಿಗಳ ಅಂಗಡಿಗಳು ಬಂದ್

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

ಚೀನ ಮಾಜಿ ಅಧ್ಯಕ್ಷ ಜಿಯಾಂಗ್‌ ಜೆಮಿನ್‌ ನಿಧನ

1-sadadasd

ಅಫ್ಘಾನ್ ಧಾರ್ಮಿಕ ಕೇಂದ್ರಕ್ಕೆ ಉಗ್ರ ದಾಳಿ : 10 ವಿದ್ಯಾರ್ಥಿಗಳು ಬಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

ಡೇಟಿಂಗ್‌ ನಲ್ಲಿ ಮಲೈಕಾ – ಅರ್ಜುನ್‌: ಮೊದಲ ಮಗುವಿನ ನಿರೀಕ್ಷೆಯಲ್ಲಿ? ಬಿಟೌನ್‌ ನಲ್ಲಿ ಹಾಟ್‌ ಟಾಪಿಕ್

1-aa-SAsAS

ದಾವೂದ್ ನಂಟು ಪ್ರಕರಣ: ನವಾಬ್ ಮಲಿಕ್ ಗೆ ಜಾಮೀನು ನಕಾರ

1-sadsadasd

ಮಫ್ಲರ್ ಯಾಕೆ ಧರಿಸಿಲ್ಲ ಎಂದ ಮಹಿಳೆಗೆ ಉತ್ತರ ಕೊಟ್ಟ ಕೇಜ್ರಿವಾಲ್; ವಿಡಿಯೋ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

1-wqewqwqe

ಗೆಹ್ಲೋಟ್-ಪೈಲಟ್ ಏಕತೆಯ ಪ್ರದರ್ಶನ ಕೇವಲ ‘ರಾಜಕೀಯ ವಿರಾಮ’ ಎಂದ ಬಿಜೆಪಿ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

ವಿಜಯಪುರ: ಅನಾಮಧೇಯನಿಂದ ನಗರದ ಮತದಾರರ ಮಾಹಿತಿ ಸಂಗ್ರಹ

1–adasdasd

ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

1-aweqwewq

ಶಾಲೆಯ ನೀರಿನ ಟ್ಯಾಂಕ್ ನಲ್ಲಿ ನಾಗರಹಾವು; ಆತಂಕಗೊಂಡ ವಿದ್ಯಾರ್ಥಿಗಳು

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

ಮುದ್ದೇಬಿಹಾಳ: ಬಾವಿಯಲ್ಲಿ ಯುವತಿಯ ಶವ ಪತ್ತೆ; ಕೊಲೆ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.