
102 ಲಕ್ಷ ಕೋಟಿ ರೂ. ಚಿಕಿತ್ಸೆ
ವಿತ್ತ ಸಚಿವೆ ನಿರ್ಮಲಾರಿಂದ ಭರಪೂರ ಪ್ಯಾಕೇಜ್ ಘೋಷಣೆ
Team Udayavani, Jan 1, 2020, 7:28 AM IST

ಹೊಸದಿಲ್ಲಿ: ಮಂಕಾಗಿರುವ ದೇಶೀಯ ಆರ್ಥಿಕತೆಗೆ ಶಕ್ತಿ ತುಂಬಲು ಹಾಗೂ 2025ರ ವೇಳೆಗೆ ಭಾರತವನ್ನು 5 ಶತಕೋಟಿ ಡಾಲರ್ ಆರ್ಥಿಕತೆಯ ದೇಶವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ದೇಶದ ಮೂಲ ಸೌಕರ್ಯ ಯೋಜನೆಗೆ ಭರಪೂರ 102 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಕಟಿಸಿದೆ.
ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “2019ರ ಸ್ವಾತಂತ್ರ್ಯೋತ್ಸವ ದಿನ ದಂದೇ ಪ್ರಧಾನಿ ನರೇಂದ್ರ ಮೋದಿ, ಮೂಲ ಸೌಕರ್ಯ ವಲಯಕ್ಕೆ 100 ಕೋಟಿ ರೂ.ಗಳ ಯೋಜನೆಗಳನ್ನು ನೀಡುವುದಾಗಿ ಘೋಷಿಸಿದ್ದರು. ವಲಯವಾರು ಯೋಜನೆಗಳನ್ನು ಗುರುತಿಸಲು ಕಾರ್ಯಪಡೆಯನ್ನು ನೇಮಿಸಲಾಗಿತ್ತು. ಈ ಕಾರ್ಯ ಪಡೆಯು ಮೂಲಸೌಕರ್ಯ ವಲಯದ 70 ಸಹ ಭಾಗಿ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಿ, 102 ಲಕ್ಷ ಕೋಟಿ ರೂ.ಗಳ ಯೋಜನೆಯನ್ನು ಪಟ್ಟಿ ಮಾಡಿ ನೀಡಿದ್ದು, ಆ ಯೋಜನೆಗಳನ್ನು ಒಂದರ ಹಿಂದೊಂದ ರಂತೆ (ಪೈಪ್‌ಲೈನ್ ಮಾದರಿ) ಜಾರಿಗೊಳಿಸಲಾಗುತ್ತದೆ. ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳ (ಎನ್‌ಐಪಿ) ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ಕಳೆದ ಆರು ವರ್ಷಗಳಿಂದ ಎನ್‌ಐಪಿ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ ಗಳಿಗೂ ಈ ಪ್ಯಾಕೇಜ್ ಅನ್ವಯವಾಗಲಿದೆ ಎಂದು ಅವರು ವಿವರಿಸಿದರು.
ಒಟ್ಟು 105 ಲಕ್ಷ ಕೋಟಿ ರೂ. ಪ್ಯಾಕೇಜ್? ಮುಂಬರುವ ದಿನಗಳಲ್ಲಿ ಇದಕ್ಕೆ 3 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುವ ಆಲೋಚನೆಯೂ ಇದೆ ಎಂದರು. ಜತೆಗೆ, ಈ ಆರ್ಥಿಕ ಪ್ಯಾಕೇಜ್‌ನಿಂದ ಉದ್ಯೋಗ ಸೃಷ್ಟಿ, ಉತ್ತಮ ಸೌಕರ್ಯ, ಜೀವನ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆಯ ಜತೆಗೆ “ಮೂಲಸೌಕರ್ಯ ವಲಯದ ಅಭಿವೃದ್ಧಿ’ಗೆ ತನ್ನದೇ ಆದ ಕಾಣಿಕೆ ನೀಡಲಿದೆ ಎಂದು ಆಶಿಸಿದರು.
ಕೇಂದ್ರ-ರಾಜ್ಯ-ಖಾಸಗಿ ಸಹಭಾಗಿತ್ವ: ಈ ಯೋಜನೆ ಯಡಿ ಅನುಷ್ಠಾನಗೊಳ್ಳುವ ಎಲ್ಲ ಯೋಜನೆಗಳಲ್ಲೂ ಶೇ. 39ರಷ್ಟು ಕೇಂದ್ರದ ಪಾಲು ಇದ್ದರೆ, ಸಂಬಂಧಪಟ್ಟ ರಾಜ್ಯ ಸರಕಾರಗಳ ಪಾಲು ಕೂಡ ಶೇ. 39ರಷ್ಟಿರಲಿದೆ. ಇನ್ನು, ಶೇ. 22ರಷ್ಟು ಪಾಲನ್ನು ಖಾಸಗಿ ವಲಯದಿಂದ ಪಡೆದುಕೊಳ್ಳಲು ತೀರ್ಮಾನಿಸಲಾಗಿದ್ದು, 2025ರ ವರೆಗೆ ಖಾಸಗಿ ಸಹಭಾಗಿತ್ವದ ಪಾಲನ್ನು ಶೇ. 30ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ವಿದ್ಯುತ್ ನಷ್ಟ ತಪ್ಪಿಸಲು 2.5 ಲಕ್ಷ ಕೋಟಿ ರೂ. ಹೂಡಿಕೆ! ನಷ್ಟದಲ್ಲಿರುವ ಭಾರತೀಯ ವಿದ್ಯುತ್ ಮಾರಾಟ ಗಾರರಿಗೆ ಮರುಜೀವ ನೀಡಲು, ಕೇಂದ್ರ ಸರಕಾರ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಮುಂದಿನ 5 ವರ್ಷಗಳಲ್ಲಿ 2.50 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ. ದೇಶಾದ್ಯಂತ ಇರುವ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಹೊಸ ದಾರಿ ಹುಡುಕಲಿದೆ.
ಮೂಲ ಸೌಕರ್ಯಗಳನ್ನು ವೃದ್ಧಿಸುವುದು ಹಾಗೂ ತಾಂತ್ರಿಕ ಉನ್ನತೀಕರಣ ಮಾಡುವುದು ಈ ಖರ್ಚಿನ ವ್ಯಾಪ್ತಿಯಲ್ಲಿ ಬರುತ್ತದೆ. ಇದರ ಮೂಲಕ ವ್ಯಾಪಾರಿ ಸಂಸ್ಥೆಗಳನ್ನು ಸಶಕ್ತಗೊಳಿಸಿ, ಅವುಗಳಿಗೆ ಸದ್ಯ ಆಗುತ್ತಿರುವ ನಷ್ಟ ತಪ್ಪಿಸಬೇಕೆಂದು ಯೋಜಿಸಿದೆ. ಇದಕ್ಕಾಗಿ ರಾಜ್ಯಸರಕಾರಗಳಿಗೆ 1 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರ ನೀಡಲಿದೆ.
ಮೂಲಸೌಕರ್ಯ ಕ್ಷೇತ್ರಕ್ಕೆ ಭರಪೂರ ಆರ್ಥಿಕ ಪ್ಯಾಕೇಜ್ ಘೋಷಣೆ
ರಾಷ್ಟ್ರೀಯ ಮೂಲಸೌಕರ್ಯ ಯೋಜನೆಗಳ ಮುಂದಿನ ಐದು ವರ್ಷದಲ್ಲಿ ಅನುಷ್ಠಾನಗೊಳ್ಳಲಿರುವ ಯೋಜನೆಗಳು
ಆರು ವರ್ಷಗಳಿಂದ ಕೇಂದ್ರ, ರಾಜ್ಯಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಹಂತದಲ್ಲಿರುವ ಯೋಜನೆಗಳಿಗೂ ಪ್ಯಾಕೇಜ್ ಅನ್ವಯ
ಎಲ್ಲ ಯೋಜನೆಗಳಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಪಾಲು ತಲಾ ಶೇ. 39ರಷ್ಟು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Russia-Ukraine War ವಿಚಾರದಲ್ಲಿ ಕೇಂದ್ರ ಸರ್ಕಾರದ ನೀತಿಯನ್ನು ಬೆಂಬಲಿಸಿದ ರಾಹುಲ್ ಗಾಂಧಿ

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್: ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

ಕಣ್ಣೂರು ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: CCTVಯಲ್ಲಿ ಅಪರಿಚಿತ ವ್ಯಕ್ತಿ ಪತ್ತೆ

BJP MLA: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಬಿಜೆಪಿ ಶಾಸಕ