ಮೋದಿ ಬೆಂಬಲಿಸಿ, ಆದರೆ ನಿತೀಶ್ ಕೂಡ ಪ್ರಧಾನಿ ಅಭ್ಯರ್ಥಿ!: ಜೆಡಿಯು
Team Udayavani, Jan 6, 2019, 6:52 AM IST
ಹೊಸದಿಲ್ಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಧಾನಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರುಗಳ ಸಂಖ್ಯೆ ಹೆಚ್ಚುತ್ತಲೆ ಇದ್ದು, ಆ ಬಗ್ಗೆ ಚರ್ಚೆ ಯೂ ನಡೆಯುತ್ತಿದೆ. ಈಗಾಗಲೇ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರೆ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದಿದೆ.ಆದರೆ ಎನ್‌ಡಿಎ ಮೈತ್ರಿ ಕೂಟದ ಪ್ರಮುಖ ಮಿತ್ರ ಪಕ್ಷ ಜೆಡಿಯು ಬಿಹಾರ ಸಿಎಂ ನಿತೀಶ್ ಕುಮಾರ್ ಅವರೂ ಪ್ರಧಾನ ಮಂತ್ರಿ ಹುದ್ದೆಯ ಸ್ಪರ್ಧಿ ಎಂದಿದೆ.
ಜೆಡಿಯು ವಕ್ತಾರ ರಾಜೀವ್ ರಂಜನ್ ಮಾತನಾಡಿ ನಿತೀಶ್ ಅವರ ರಾಜಕೀಯ ಜೀವನ ನಮಗೆಲ್ಲಾ ಸ್ಫೂರ್ತಿ. ಅವರ ನಾಯಕತ್ವದಲ್ಲಿ ಬಿಹಾರ ಅಭೂತಪೂರ್ವ ಏಳಿಗೆಯನ್ನು ಕಂಡಿದೆ. ಮೋದಿ ಅವರು ಎನ್‌ಡಿಎಯ ಪ್ರಧಾನಿ ಅಭ್ಯರ್ಥಿ,ಆದರೂ ನಿತೀಶ್ ಕುಮಾರ್ ಅವರ ಹೆಸರು ಸ್ಪರ್ಧಿಯಾಗಿ ಚಾಲ್ತಿಯಲ್ಲಿದೆ ಎಂದರು.
ಈ ಬಗ್ಗೆ ಬಿಜೆಪಿ ಸಂಸದ ಸಿ.ಪಿ.ಠಾಕೂರ್ ಅವರು ಪ್ರತಿಕ್ರಿಯೆ ನೀಡಿ, ರಾಜೀವ್ ರಂಜನ್ ಅವರ ಹೇಳಿಕೆಯನ್ನು ತಳ್ಳಿಹಾಕಿದರು. ನಿತೀಶ್ ಕುಮಾರ್ ಅವರೇ ಪ್ರಧಾನಿ ಹುದ್ದೆಗೆ ಮೋದಿ ಅವರ ಹೆಸರನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ. ಬಿಹಾರದ ಜನತೆಯೇ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದಾರೆ ಎಂದರು.
ಈ ಬಗ್ಗೆ ಕಾಂಗ್ರೆಸ್ ನಾಯಕ ಪ್ರೇಮ್‌ಚಂದ್ರ ಮಿಶ್ರಾ ಪ್ರತಿಕ್ರಿಯಿಸಿ, ಜೆಡಿಯು ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದಾರೆ. ನಿತೀಶ್ ಕುಮಾರ್ ಅವರು ರೊಂಗ್ ನಂಬರ್ ಡಯಲ್ ಮಾಡಿದ್ದಾರೆ. ಮಹಾಘಟಬಂಧನ್‌ನಲ್ಲಿದ್ದರೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪರಿಗಣಿಸುವ ಕಾಲ ಬರುತ್ತಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಕೇರಳದಲ್ಲಿ “ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ’ ವಿವಾದ
ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್