ನಿತೀಶ್ ಸಂಪುಟಕ್ಕೆ 27 ಸಚಿವರ ಸೇರ್ಪಡೆ
Team Udayavani, Jul 30, 2017, 9:45 AM IST
ಪಟ್ನಾ: ಎನ್ಡಿಎ ಜತೆ ಸೇರಿ ಹೊಸದಾಗಿ ಸರಕಾರ ರಚಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಶನಿವಾರ ತಮ್ಮ ಸಂಪುಟ ವಿಸ್ತರಿಸಿದ್ದಾರೆ. ಬಿಜೆಪಿಯ 12 ಮಂದಿ, ಎಲ್ಜೆಪಿಯ ಓರ್ವ ಸಹಿತ 27 ಮಂದಿ ಹೊಸ ಸಚಿವರನ್ನು ನಿತೀಶ್ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ಶನಿವಾರ ಸಂಜೆ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರು ರಾಜಭವನದಲ್ಲಿ ಎಲ್ಲ ಹೊಸ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಜು.27ರಂದು ಸಿಎಂ ಆಗಿ ನಿತೀಶ್ ಹಾಗೂ ಡಿಸಿಎಂ ಆಗಿ ಸುಶೀಲ್ ಮೋದಿ ಅವರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದರು. ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಶನಿವಾರ ಸಂಪುಟ ಪುನಾರಚನೆ ನಡೆದಿದೆ. 243 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಗರಿಷ್ಠ 37 ಮಂದಿ ಸಚಿವರನ್ನು ಹೊಂದಲು ಅವಕಾಶವಿದೆ. 14 ಮಂದಿ ಜೆಡಿಯು ಸದಸ್ಯರು ಸಚಿವರಾದರೆ, ಎನ್ಡಿಎ ಮಿತ್ರಕೂಟದ ಪೈಕಿ ಬಿಜೆಪಿಯ 12 ಮಂದಿ, ಎಲ್ಜೆಪಿಯ ಪಶುಪತಿ ಕುಮಾರ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಆರ್ಎಲ್ಎಸ್ಪಿ ಮತ್ತು ಎಚ್ಎಎಂ ಪ್ರತಿನಿಧಿಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ