Udayavni Special

ರಾತ್ರಿ 2 ಗಂಟೆಗೆ ಅಪ್ಪಳಿಸಲಿರುವ ನಿವಾರ್ ಚಂಡಮಾರುತ; NDRF ಸನ್ನದ್ಧ, 1 ಲಕ್ಷ ಮಂದಿ ಶಿಫ್ಟ್


Team Udayavani, Nov 25, 2020, 8:09 PM IST

Cyclone Nivar in Mamallapuram

ಮಣಿಪಾಲ: ಬಂಗಾಲಕೊಲ್ಲಿಯಿಂದ ನಿವಾರ್ ಚಂಡಮಾರುತವು ಗಂಟೆಗೆ 11 ಕಿ.ಮೀ ವೇಗದೊಂದಿಗೆ ಪುದುಚೇರಿಗೆ ಅಪ್ಪಳಿಸಲಿದೆ. ಇಂದು (ಬುಧವಾರ) ರಾತ್ರಿ 2 ಗಂಟೆಗೆ ಅದು ದಕ್ಷಿಣ ಕರಾವಳಿಯನ್ನು ಅಪ್ಪಳಿಸಲಿದ್ದು, ಅನಂತರ ಕಾರೈಕಲ್ (ಆಂಧ್ರಪ್ರದೇಶ) ಮತ್ತು ಮಹಾಬಲಿಪುರಂ (ತಮಿಳುನಾಡು) ದಾಟಲಿದೆ. ಈ ನಡುವೆ ಗಾಳಿಯು ಗಂಟೆಗೆ 145 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ.

ಚಂಡಮಾರುತದ ಅಪಾಯದಿಂದ ಪಾರಾಗುವ ಸಲುವಾಗಿ ರಾಜ್ಯ ಸರಕಾರಗಳು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ರಜೆಯನ್ನು ಘೋಷಿಸಲಾಗಿದೆ. ಈ 3 ದಿನಗಳ ಕಾಲ ಭಾರೀ ಮಳೆಯಾಗಲಿದೆ. ನೆರೆಯ ರಾಜ್ಯಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.

ಚೆನ್ನೈ ವಿಮಾನ ನಿಲ್ದಾಣವನ್ನು ಬುಧವಾರ ಸಂಜೆ 7 ರಿಂದ ಗುರುವಾರ ಬೆಳಗ್ಗೆ 7 ರ ವರೆಗೆ ಮುಚ್ಚಲಾಗಿದೆ. 26 ವಿಮಾನಗಳನ್ನು ರದ್ದುಪಡಿಸಲಾಗಿದೆ. ಚೆನ್ನೈನ ಅನೇಕ ಸ್ಥಳಗಳಲ್ಲಿ ವಿದ್ಯುತ್ ಕಡಿತ ಮಾಡಲಾಗಿದೆ. ಚೆನ್ನೈ, ವೆಲ್ಲೂರು, ಕಡಲೂರು, ವಿಲ್ಲುಪುರಂ, ನಾಗಪಟ್ಟಣಂ, ತಿರುವರೂರು, ಚೆಂಗಲ್ಪಟ್ಟು ಮತ್ತು ಪೆರಂಬಲೋರ್ ಮುಂತಾದ ನಗರಗಳು ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ನವೆಂಬರ್ 26 ರ ವರೆಗೆ ರಜೆಯನ್ನು ಘೋಷಿಸಲಾಗಿದೆ. ಒಂದು ಲಕ್ಷ ಜನರನ್ನು ತಮಿಳುನಾಡಿನಿಂದ ಸ್ಥಳಾಂತರಿಸಲಾಗಿದ್ದು, 7 ಸಾವಿರ ಜನರನ್ನು ಪುದುಚೇರಿಯಿಂದ ಸ್ಥಳಾಂತರಿಸಲಾಗಿದೆ.

ತಮಿಳುನಾಡು, ಪುದುಚೇರಿ ಮತ್ತು ಆಂಧ್ರದಲ್ಲಿ 25 ತಂಡಗಳನ್ನು ಎನ್‌ಡಿಆರ್‌ಎಫ್ ನಿಯೋಜಿಸಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಂಡ ಸನ್ನದ್ಧವಾಗಿದೆ.

ನಿರಂತರ ಮಳೆ
ಕಳೆದ 24 ಗಂಟೆಗಳಿಂದ ಚೆನ್ನೈನಲ್ಲಿ ಮಳೆಯಾಗುತ್ತಿದೆ. ಅನೇಕ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಮಾಜಿ ಸಿಎಂ ಕರುಣಾನಿಧಿ ಅವರ ಮನೆಯೂ ಪ್ರವಾಹಕ್ಕೀಡಾಗಿದೆ. ಚೆನ್ನೈನಲ್ಲಿ 2015ರಲ್ಲಿ ಇಂತಹದ್ದೇ ಪರಿಸ್ಥಿತಿ ಉಂಟಾಗಿತ್ತು. ಅಂದಿನ ಪಾಠಗಳನ್ನು ಸರಕಾರ ನೆನಪಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಶೇ. 90ರಷ್ಟು ತುಂಬಿದ ಚೇಂಬರ್ಂಬಕ್ಕಂ ಅಣೆಕಟ್ಟಿನ ಬಾಗಿಲುಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ ಅಣೆಕಟ್ಟಿನಿಂದ 1000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಅಣೆಕಟ್ಟಿನಿಂದ ನೀರು ಅಡ್ಯಾರ್ ನದಿಗೆ ಹರಿಯಲಿದ್ದು, ನದಿಯ ಪ್ರದೇಶದ ಕೆಳಭಾಗಗಳಾದ ಕುಂದ್ರಾತೂರ್, ಸಿರುಕಲಥೂರ್, ತಿರುಮುಡಿವಕ್ಕಂ, ಮತ್ತು ತಿರುನಿರಾಮಲೈ ಮೊದಲಾದ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯ ಕ್ರಮಗಳ ಮಾಹಿತಿ ಪಡೆದುಕೊಂಡಿದ್ದಾರೆ. ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಎರಡೂ ಸಿಎಂಗಳಿಗೆ ಪ್ರಧಾನಿ ಭರವಸೆ ನೀಡಿದ್ದಾರೆ.

ಚಂಡಮಾರುತದ ಪರಿಣಾಮವನ್ನು ಎದುರಿಸಲು ಬಂಗಾಲಕೊಲ್ಲಿಯ ಆಗ್ನೇಯದಲ್ಲಿರುವ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯ ಬಳಿ ಕೋಸ್ಟ್ ಗಾರ್ಡ್‌ನ 8 ಹಡಗುಗಳು ಮತ್ತು 2 ವಿಮಾನಗಳನ್ನು ನಿಯೋಜಿಸಲಾಗಿದೆ. ಇನ್ನು ವ್ಯಾಪಾರಿ ಹಡಗುಗಳು ಮತ್ತು ಮೀನುಗಾರಿಕೆ ದೋಣಿಗಳಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

Untitled-4

ಸಾಧಕರ ಸನ್ಮಾನಕ್ಕಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳ ಘೋಷಣೆ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಸೋಲಿನಲ್ಲೂ ಗೆಲ್ಲುವುದಕ್ಕೆ ಬೇಕು ಅಪೂರ್ವ ಧೈರ್ಯ

ಖಾತೆ ಕಣ್ಣಾ ಮುಚ್ಚಾಲೆ

ಖಾತೆ ಕಣ್ಣಾ ಮುಚ್ಚಾಲೆ

ಏನಾಗಲಿದೆ ಒಲಿ ಭವಿಷ್ಯ?

ಏನಾಗಲಿದೆ ಒಲಿ ಭವಿಷ್ಯ?

 ಭರವಸೆ ಹುಟ್ಟಿಸಿದ ಚುನಾವಣ ಆಯೋಗದ ಹೆಜ್ಜೆ 

 ಭರವಸೆ ಹುಟ್ಟಿಸಿದ ಚುನಾವಣ ಆಯೋಗದ ಹೆಜ್ಜೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಗೆ ಸ್ವಾತಂತ್ರ್ಯ ಸೇನಾನಿ “ಅಹ್ಮದುಲ್ಲಾ ಶಾ’ ಹೆಸರು

Farmers will ‘destroy’ new agri laws: NCP president Sharad Pawar warns Centre

ರೈತರು ಕೃಷಿ ಕಾನೂನುಗಳನ್ನು ಮುರಿಯುತ್ತಾರೆ : ಶರದ್ ಪವಾರ್

ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ

ಲಸಿಕೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣಕ್ರಮ ಕೈಗೊಳ್ಳಲು ರಾಜ್ಯಕ್ಕೆ ಕೇಂದ್ರ ಸೂಚನೆ

INDIA-PAKISTAN-KASHMIR-UNREST

ಉತ್ತರ ಭಾರತದಲ್ಲಿ ಮುಂದುವರಿದ ಹಿಮಪಾತ; ಕೆಲವೆಡೆ ಆರೆಂಜ್‌ ಅಲರ್ಟ್

MUST WATCH

udayavani youtube

ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ

udayavani youtube

ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!

udayavani youtube

ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

ಹೊಸ ಸೇರ್ಪಡೆ

ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಮೂರೇ ದಿನಗಳ ಅಭ್ಯಾಸ

ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಮೂರೇ ದಿನಗಳ ಅಭ್ಯಾಸ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

ಸತ್ಯಯುಗದಲ್ಲಿ ಹುಟ್ಟಲಿ ಎಂದು ಮಕ್ಕಳ ಬಲಿ ಕೊಟ್ಟ ದಂಪತಿ

“ಬ್ಲೂ ಫ್ಲ್ಯಾಗ್‌’ ಮಾನ್ಯತೆ ಪಡೆಯುವತ್ತ ತಣ್ಣೀರುಬಾವಿ ಬೀಚ್‌

“ಬ್ಲೂ ಫ್ಲ್ಯಾಗ್‌’ ಮಾನ್ಯತೆ ಪಡೆಯುವತ್ತ ತಣ್ಣೀರುಬಾವಿ ಬೀಚ್‌

ಇಂಗ್ಲೆಂಡ್‌ 2-0 ಕ್ಲೀನ್‌ ಸ್ವೀಪ್‌ ಸಾಹಸ

ಇಂಗ್ಲೆಂಡ್‌ 2-0 ಕ್ಲೀನ್‌ ಸ್ವೀಪ್‌ ಸಾಹಸ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

ಲಸಿಕೆ ನೀಡಿಕೆ: ರಾಜ್ಯವೇ ಮೊದಲಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.