ಸರಕು ಸಾಗಣೆ ವಾಹನ ತಪಾಸಣೆ ಇಲ್ಲ
Team Udayavani, Jul 26, 2018, 6:00 AM IST
ಹೊಸದಿಲ್ಲಿ: ಇನ್ನು ಮುಂದೆ ದೇಶದಲ್ಲಿ ಸರಕು ಸಾಗಣೆಯ ವಾಹನಕ್ಕೆ ಅನಗತ್ಯ ತಪಾಸಣೆ, ತನಿಖೆ ಇರಲಾರದು. ಈ ಬಗ್ಗೆ ಜಿಎಸ್ಟಿ ಮಂಡಳಿ ರಚಿಸಿದ್ದ ಟಾಸ್ಕ್ಫೋರ್ಸ್ ನೀಡಿದ್ದ ಶಿಫಾರಸುಗಳಿಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಪರ್ಮಿಟ್, ರಸ್ತೆ ತೆರಿಗೆ, ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂಬ ಪ್ರಮಾಣ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್) ಸೇರಿದಂತೆ ಅನಗತ್ಯ ವ್ಯವಸ್ಥೆಗಳನ್ನು ರದ್ದು ಮಾಡಬೇಕು ಎಂದು ಮಾಡಿದ್ದ ಪ್ರಸ್ತಾಪಗಳಿಗೆ ಮಂಡಳಿ ಅಂಗೀಕಾರ ನೀಡಿದೆ.
ಮೌಲ್ಯ ವರ್ಧಿತ ತೆರಿಗೆ, ಎಂಟ್ರಿ ಟ್ಯಾಕ್ಸ್ಗಳನ್ನು ರದ್ದು ಮಾಡಿರುವುದರಿಂದ ಪರವಾನಗಿ ವ್ಯವಸ್ಥೆ ಬೇಕಾಗಿಲ್ಲ ಎಂದು ಟಾಸ್ಕ್ಫೋರ್ಸ್ ಹೇಳಿತ್ತು. ಹೀಗಾಗಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪರವಾನಗಿ ವ್ಯವಸ್ಥೆ ಅಗತ್ಯವಿಲ್ಲ ಎಂದು ಸಲಹೆ ಮಾಡಿತ್ತು.
ಹೀಗಿದ್ದರೂ ಸರಕು ಸಾಗಣೆಯ ವಾಹನಗಳು ಇತರ ತನಿಖೆ ಮತ್ತು ತಪಾಸಣೆಗಾಗಿ ನಿಲ್ಲುತ್ತಿದ್ದವು. ಒಂದು ವರ್ಷದ ಅವಧಿಯ ಫಿಟ್ನೆಸ್ ಸರ್ಟಿಫಿಕೆಟ್ ಜಾರಿ ಮಾಡಲೂ ಇದು ಸಲಹೆ ಮಾಡಿದೆ. ಏಕೀಕೃತ ಇ-ವೇ ಬಿಲ್ ಪ್ರಸ್ತಾಪವನ್ನು ಟಾಸ್ಕ್ಫೋರ್ಸ್ ಸೂಚಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ