ಕೊಂಕಣಿ ಭಾಷೆಗೆ ಯಾರ ಪ್ರಮಾಣಪತ್ರ ಬೇಕಿಲ್ಲ: ಪ್ರಮೋದ್ ಸಾವಂತ್
Team Udayavani, May 14, 2022, 5:22 PM IST
ಪಣಜಿ: ಕೊಂಕಣಿ ಭಾಷೆಯು ಗೋವಾ,ಕರ್ನಾಟಕ, ಕೇರಳದಲ್ಲಿ ಮರಾಠಿ ಭಾಷೆಯ ಉಪಭಾಷೆಯಲ್ಲ ಅದು ಸ್ವತಂತ್ರ ಭಾಷೆಯಾಗಿದೆ. ಕೊಂಕಣಿ ಭಾಷೆಗೆ ಯಾರ ಪ್ರಮಾಣಪತ್ರ ಬೇಕಿಲ್ಲ.ಯಾಕೆಂದರೆ ಕೊಂಕಣಿ ಗೋವಾ ರಾಜ್ಯದ ಅಧಿಕೃತ ಭಾಷೆಯಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಗೋವಾದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕೊಂಕಣಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಾವಂತ್, ಗೂಗಲ್ ಅನುವಾದವು ಈಗ ಕೊಂಕಣಿಯನ್ನೂ ಒಳಗೊಂಡಿದೆ. ಕೊಂಕಣಿ ಭಾಷೆಯನ್ನು ಈಗ ಗೂಗಲ್ನಲ್ಲಿ ಸೇರಿಸಲಾಗಿದೆ. ಮಧ್ಯಭಾರತದಲ್ಲಿ ಸುಮಾರು 2 ಮಿಲಿಯನ್ ನಷ್ಟು ಜನರು ಕೊಂಕಣಿ ಮಾತನಾಡುತ್ತಾರೆ. ಈ ಹಿಲ್ಲೆಯಲ್ಲಿ ಗೂಗಲ್ನಲ್ಲಿ ಕೊಂಕಣಿ ಭಾಷೆಯನ್ನು ಸೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೂಗಲ್ ರಿಸರ್ಚ್ ನ ಹಿರಿಯ ಸಾಫ್ಟ್ ವೇರ್ ಇಂಜಿನಿಯರ್ ಐಸಾಕ್ ಕ್ಯಾನ್ವೇಲ್ ಮಾತನಾಡಿ, ಗೂಗಲ್ ಟ್ರಾನ್ಸಲೆಟ್ನಲ್ಲಿ ಸಂಸ್ಕೃತವನ್ನೂ ಸೇರಿಸಲು ತಮ್ಮನ್ನು ಅನೇಕ ಜನರು ಕೇಳಿಕೊಂಡಿದ್ದಾರೆ. ನಾವು ಈಶಾನ್ಯ ಭಾರತದ ಭಾಷೆಗಳನ್ನು ಸಹ ಸೇರಿಸಿದ್ದೇವೆ ಎಂದು ಹೇಳಿದರು.