ಟಿಕೆಟ್ ರದ್ದತಿಗೆ ಶುಲ್ಕವಿಲ್ಲ
Team Udayavani, Feb 23, 2019, 12:30 AM IST
ಹೊಸದಿಲ್ಲಿ: ವಿಮಾನ ಟಿಕೆಟ್ ವಿತರಣೆ ವ್ಯವಸ್ಥೆಯಲ್ಲಿರುವಂತೆ ರೈಲ್ವೆಯಲ್ಲೂ ಪಿಎನ್ಆರ್ಗಳನ್ನು ಲಿಂಕ್ ಮಾಡಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಅಂದರೆ ಒಬ್ಬ ಪ್ರಯಾಣಿಕ ಒಂದಾದ ಮೇಲೆ ಇನ್ನೊಂದು ರೈಲನ್ನೇರಿ ಪ್ರಯಾಣಿಸುವಾಗ ಮೊದಲಿನ ರೈಲು ವಿಳಂಬವಾದರೆ, ಎರಡನೇ ರೈಲಿನ ಟಿಕೆಟ್ ರದ್ದುಗೊಳಿಸಬಹುದು. ಅಷ್ಟೇ ಅಲ್ಲ, ಈ ಟಿಕೆಟ್ ರದ್ದುಗೊಳಿಸಿದರೆ ಅದಕ್ಕೆ ಪ್ರಯಾಣಿಕರಿಗೆ ರದ್ದತಿ ಶುಲ್ಕ ವಿಧಿಸುವುದಿಲ್ಲ. ಟಿಕೆಟ್ನ ಸಂಪೂರ್ಣ ಮೊತ್ತವನ್ನು ವಾಪಸ್ ಮಾಡಲಾಗುತ್ತದೆ. ಈ ಹೊಸ ವಿಧಾನ ಏಪ್ರಿಲ್ನಿಂದ ಜಾರಿಗೆ ಬರಲಿದೆ. ಎರಡನೇ ರೈಲು ನಿಗದಿತ ರೈಲ್ವೆ ನಿಲ್ದಾಣಕ್ಕೆ ಬರುವುದಕ್ಕೂ 3 ಗಂಟೆ ಮೊದಲು ಪ್ರಯಾಣಿಕರು ಟಿಕೆಟ್ ಸಲ್ಲಿಸಿ ದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಇದು ರೈಲು ತಪ್ಪಿಸಿಕೊಂಡವರಿಗೆ ಅತ್ಯಂತ ಅನುಕೂಲವಾಗಲಿದ್ದು, ಈ ಹಿಂದೆ ಪಿಎನ್ಆರ್ ಲಿಂಕ್ ಮಾಡಿಲ್ಲದೇ ಇದ್ದುದರಿಂದ ರದ್ದತಿಯಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ವಿಮಾನ ಟಿಕೆಟ್ ಬುಕ್ ಮಾಡುವಲ್ಲೂ ಇದೇ ವ್ಯವಸ್ಥೆಯಿದೆ.