ವರದಕ್ಷಿಣೆ ಕೇಸ್‌ಗೆ ವ್ಯಾಪ್ತಿಯ ಮಿತಿಯಿಲ್ಲ: ಸುಪ್ರೀಂ ತೀರ್ಪು
Team Udayavani, Apr 10, 2019, 6:00 AM IST
ಹೊಸದಿಲ್ಲಿ: ಮಹಿಳೆ, ಗಂಡನ ಮನೆಯಿಂದ ಹೊರಬಂದು ಬೇರೆಲ್ಲೇ ಆಶ್ರಯ ಪಡೆದಿದ್ದರೂ ಅಲ್ಲಿಂದಲೇ ಗಂಡನ ಮನೆಯಲ್ಲಿ ತಮ್ಮ ವಿರುದ್ಧದ ವರದಕ್ಷಿಣೆ ಕಿರುಕುಳಗಳ ಬಗ್ಗೆ ಪ್ರಕರಣ ದಾಖಲಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿದೆ. ಈ ಮೂಲಕ, ಇದೇ ವಿಚಾರಕ್ಕೆ ಸಂಬಂಧಿಸಿ ರುಪಾಲಿ ದೇವಿ ಎಂಬ ಮಹಿಳೆಯ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಪೀಠ ತಳ್ಳಿ ಹಾಕಿದೆ.
ಗಂಡನ ಮನೆಯಿಂದ ತವರು ಮನೆಗೆ ಹಿಂದಿರುಗಿದ್ದ ರುಪಾಲಿ ದೇವಿ, ಗಂಡನ ಮನೆಯವರ ವಿರುದ್ಧ ಕಿರು ಕುಳದ ಕೇಸು ದಾಖಲಿಸಿದ್ದರು. ಆದರೆ, ಅದನ್ನು ಆಕ್ಷೇಪಿಸಿದ್ದ ಹೈಕೋರ್ಟ್, ಗಂಡನ ಮನೆ ಅಥವಾ ಅತ್ತೆ/ಮಾವನ ಮನೆ ಯಾವ ನ್ಯಾಯಾಂಗ ಪರಿಧಿಗೆ ಒಳಪಡುತ್ತದೋ ಆ ಪರಿಧಿಯನ್ನು ಬಿಟ್ಟು ಬೇರೆಡೆಯಿಂದ ಕೇಸು ದಾಖಲಿಸಿದರೆ ಅಂಥ ಕೇಸುಗಳ ತನಿಖೆ ಮಾಡುವುದಾಗಲೀ ಅಥವಾ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡುವುದಾಗಲಿ ಸಲ್ಲದು ಎಂದು ಹೇಳಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಗೋವಾದಲ್ಲಿ ಕ್ರೈಸ್ತ ಪಾದ್ರಿ ಬಂಧನ : ಮತಾಂತರ ಸಹಿಸುವುದಿಲ್ಲ ಎಂದ ಸಿಎಂ ಸಾವಂತ್
ರಾಜ್ಯಗಳ ಅಭಿವೃದ್ಧಿಯಾಗದೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಉಪರಾಷ್ಟ್ರಪತಿ ನಾಯ್ಡು
ಆನ್ಲೈನ್ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ
MUST WATCH
ಹೊಸ ಸೇರ್ಪಡೆ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’
ಕುಂದಾಪುರ : ಜಾಗದ ವಿಚಾರ ; ದೂರು – ಪ್ರತಿದೂರು
ನೈಜೀರಿಯಾದಲ್ಲಿ ಚರ್ಚ್ನಲ್ಲಿ ಕಾಲ್ತುಳಿತ : 31 ಮಂದಿ ಸಾವು