ಇಂದಿನಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ, ಸ್ಕಾರ್ಪ್ ಗೆ ನಿಷೇಧ; ಶ್ರೀಲಂಕಾ ಘೋಷಣೆ

Team Udayavani, Apr 29, 2019, 1:01 PM IST

ಕೊಲೊಂಬೋ: ಈಸ್ಟರ್ ಸಂಡೇಯ ಸರಣಿ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣದ ನಂತರ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತುರ್ತು ಅಧಿಕಾರ ಬಳಸಿ ಶ್ರೀಲಂಕಾದಲ್ಲಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಅಥವಾ ಸ್ಕಾರ್ಪ್ ಸೇರಿದಂತೆ ಯಾವುದೇ ವಿಧದ ಮುಖಗವಸು ಧರಿಸಲು ನಿಷೇಧ ಹೇರಿದ್ದಾರೆ.

ಕಳೆದ ಭಾನುವಾರ ಈಸ್ಟರ್ ಭಾನುವಾರದಂದು ಮೂರು ಚರ್ಚ್ ಗಳು ಹಾಗೂ ಮೂರು ಐಶಾರಾಮಿ ಹೋಟೆಲ್ ಗಳನ್ನು ಗುರಿಯಾಗಿರಿಸಿಕೊಂಡು ಐಸಿಸ್ ನಡೆದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಭಾರತೀಯರು ಸೇರಿದಂತೆ 280ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 500 ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿತ್ತು.

ಈ ನಿಟ್ಟಿನಲ್ಲಿ ಭದ್ರತಾ ದೃಷ್ಟಿಯಲ್ಲಿ ಕ್ರಮ ಮುಂದಾಗಿರುವ ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ಅವರು, ಮುಖಕ್ಕೆ ಯಾವುದೇ ವಿಧದ ಸ್ಕಾರ್ಪ್ ಆಗಲಿ, ಬುರ್ಖಾ ಧರಿಸುವುದನ್ನು ನಿಷೇಧಿಸಿರುವುದಾಗಿ ಘೋಷಿಸಿದ್ದು, ಸೋಮವಾರದಿಂದ ಈ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತೆ ನಿಟ್ಟಿನಲ್ಲಿ ನಿಷೇಧ ಜಾರಿಗೊಳಿಸಲಾಗಿದೆ. ಯಾರೊಬ್ಬರೂ ತಮ್ಮ ಮುಖದ ಗುರುತು ಹಚ್ಚದ ರೀತಿಯಲ್ಲಿ ಮುಖವನ್ನು ಮುಚ್ಚಿಕೊಂಡಿರಬಾರದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ