ವಿಶ್ವದ 100 ಅಗ್ರ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿವಿ ಇಲ್ಲ !

Team Udayavani, Jun 19, 2019, 4:04 PM IST

ಹೊಸದಿಲ್ಲಿ : ದೇಶದ ಉನ್ನತ ಶಿಕ್ಷಣ ರಂಗದಲ್ಲಿ ಮಹತ್ತರ ಸುಧಾರಣೆಗಳು ಆಗಿವೆ; ಆದರೂ ವಿಶ್ವದ 100 ಅಗ್ರ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲ.

ಜಾಗತಿಕ ಉನ್ನತ ಶಿಕ್ಷಣ ಕನ್‌ಸೆಲ್ಟೆನ್ಸಿ ಸಂಸ್ಥೆಯಾಗಿರುವ Quacquarelli Symonds (QS) ಸಿದ್ಧಪಡಿಸಿರುವ ವಿಶ್ವದ ಅಗ್ರ ನೂರು ವಿವಿಗಳಲ್ಲಿ ಭಾರತದ ಒಂದೇ ಒಂದು ವಿವಿ ಇಲ್ಲದಿರುವುದು ಇದೀಗ ಬಹಿರಂಗವಾಗಿದೆ.

ಭಾರತದ ಉನ್ನತ ಶೈಕ್ಷಣಿಕ ಸಂಸ್ಥೆಗಳಾಗಿರುವ ಐಐಟಿ ಬಾಂಬೆ, ಐಐಟಿ ದಿಲ್ಲಿ ಮತ್ತು ಐಐಎಸ್‌ಸಿ ಬೆಂಗಳೂರು ವಿಶ್ವದ ಮೊದಲ 200 ವಿವಿಗಳಲ್ಲಿ ಸ್ಥಾನ ಪಡೆದಿದೆ. ಆ ಪ್ರಕಾರ ಐಐಟಿ ಬಾಂಬೆ 152ನೇ ಸ್ಥಾನ ಮತ್ತು ಐಐಟಿ ದಿಲ್ಲಿ 182ನೇ ಸ್ಥಾನ ಪಡೆದಿವೆ.

ಕಳೆದ ವರ್ಷಕ್ಕೆ ಹೋಲಿಸಿದಾಗ, Quacquarelli Symonds (QS) ಸಿದ್ಧಪಡಿಸಿರುವ 16ನೇ ಆವೃತ್ತಿಯ ವಿಶ್ವ ವಿವಿ ರಾಂಕಿಂಗ್‌ ಪಟ್ಟಿಯಲ್ಲಿ ಭಾರತದ 23 ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ನಾಲ್ಕು ಸಂಸ್ಥೆಗಳು ತಮ್ಮ ಕ್ರಮಾಂಕವನ್ನು ಸುಧಾರಿಸಿವೆ; ಆದರೆ ಅದೇ ವೇಳೆ ಏಳು ಶಿಕ್ಷಣ ಸಂಸ್ಥೆಗಳು ಪಟ್ಟಿಯಿಂದ ಹೊರಬಿದ್ದಿವೆ.

ಶಿಕ್ಷಕ ವೃಂದದ ಗಾತ್ರಕ್ಕೆ ಅನುಗುಣವಾಗಿ ಸಂಶೋಧನ ರಂಗದಲ್ಲಿ ಬೆಂಗಳೂರಿನ ಐಐಎಸ್‌ಸಿ ನೂರರಲ್ಲಿ ನೂರು ಅಂಕ ಗಳಿಸುವ ಮೂಲಕ ವಿಶ್ವದ ಎರಡನೇ ಶ್ರೇಷ್ಠತಾ ಸಂಸ್ಥೆ ಎಂಬ ಸ್ಥಾನವನ್ನು ಪಡೆದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಸ್ಯಾಂಟಿಯಾಗೋ: 38 ಜನರನ್ನು ಹೊತ್ತೂಯ್ಯುತ್ತಿದ್ದ ಚಿಲಿಯ ಯುದ್ಧ ವಿಮಾನ ಸೋಮವಾರ ಸಂಜೆ ಕಾಣೆಯಾಗಿದೆ. ಸಿ-130 ಹರ್ಕ್ಯುಲಸ್‌ ವಿಮಾನದಲ್ಲಿ 17 ಸಿಬ್ಬಂದಿ ಮತ್ತು 12 ಪ್ರಯಾಣಿಕರು...

  • ರಾಯ್ಪುರ: ತಲೆಗೆ 40 ಲಕ್ಷ ರೂ. ಬಹುಮಾನ ಹೊತ್ತಿದ್ದ ಛತ್ತೀಸ್‌ಗಢದ ಪ್ರಮುಖ ನಕ್ಸಲ್‌ ನಾಯಕ ರಾಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ...

  • ರಾಂಚಿ: ಜಾರ್ಖಂಡ್‌ನ‌ಲ್ಲಿ ಸೋಮವಾರ ರಾತ್ರಿ ಸಿಆರ್‌ಪಿಎಫ್ ಯೋಧರೊಬ್ಬರು ಪಾನಮತ್ತರಾಗಿ ತಮ್ಮ ಸಹೋದ್ಯೋಗಿ ಯೋಧ ಮತ್ತು ಅಧಿಕಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ....

  • ಹೊಸದಿಲ್ಲಿ: ಹೋಂಡಾ ಕಾರ್ಸ್‌ ಇಂಡಿಯಾವು ಮಂಗಳವಾರ ಬಿಎಸ್‌6 ಮಾದರಿಯ ಪೆಟ್ರೋಲ್‌ ಆವೃತ್ತಿಯ ಹೋಂಡಾ ಸಿಟಿ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸದಿಲ್ಲಿಯಲ್ಲಿ...

  • ಹೊಸದಿಲ್ಲಿ: ದಕ್ಷಿಣ ಕೊರಿಯಾದ ಆಟೋಮೊಬೈಲ್‌ ದಿಗ್ಗಜ ಹ್ಯುಂಡೈ ಮೋಟಾರ್‌ ಇಂಡಿಯಾ ಮುಂದಿನ ಜನವರಿಯಿಂದ ತನ್ನ ಎಲ್ಲ ಕಾರುಗಳ ದರವನ್ನೂ ಏರಿಕೆ ಮಾಡುವುದಾಗಿ ಘೋಷಿಸಿದೆ....