ಬ್ಯಾಂಕ್ ವ್ಯವಹಾರ ಬಹಿರಂಗ: ಪಿಎಂಒ ಬಳಿ ಮಾಹಿತಿ ಇಲ್ಲ
Team Udayavani, Feb 8, 2017, 8:40 AM IST
ಹೊಸದಿಲ್ಲಿ: ಅಪನಗದೀಕರಣ ಬಳಿಕ ಬಿಜೆಪಿ ಸಂಸದರು, ಶಾಸಕರಿಗೆ ಬ್ಯಾಂಕ್ ವಹಿವಾಟಿನ ಮಾಹಿತಿ ಬಹಿರಂಗ ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದೇನೋ ಹೌದು. ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದೂ ಹೌದು. ಆದರೆ ಆ ಕುರಿತಂತೆ ಯಾವುದೇ ಅಧಿಕೃತ ದಾಖಲೆಗಳೇ ಇಲ್ಲ ಎಂಬ ವಿಚಾರ ಇದೀಗ ಬಹಿರಂಗವಾಗಿದೆ. ಬ್ಯಾಂಕ್ ವ್ಯವಹಾರ ಬಹಿರಂಗ ಕುರಿತ ಮಾಹಿತಿ ತಿಳಿಸುವಂತೆ ಬಿಜೆಪಿ ಸಂಸದರು ಮತ್ತು ಶಾಸಕರಿಗೆ ಪ್ರಧಾನಿ ನೀಡಿದ ನಿರ್ದೇಶನದ ಬಗ್ಗೆ ತನ್ನ ಬಳಿ ಯಾವುದೇ ಮಾಹಿತಿಯಿಲ್ಲ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ನ.8 ರಿಂದ ಡಿ.31ರವರೆಗಿನ ಬ್ಯಾಂಕ್ ವ್ಯವಹಾರ ಮಾಹಿತಿ ಬಹಿರಂಗಕ್ಕೆ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದೀಯ ಸಭೆಯಲ್ಲಿ ಕರೆ ನೀಡಿದ್ದರು. ಅದರಂತೆ ಬಿಜೆಪಿ ಸಂಸದರು, ಸಚಿವರಿಗೆ ಅಧಿಕೃತವಾಗಿ ಸೂಚನೆ ನೀಡಿದ್ದಾರೆಯೇ? ಎಂಬುದನ್ನು ತಿಳಿವ ಅಗತ್ಯವಿತ್ತು. ಇದಕ್ಕಾಗಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದಾಗಿ ವೆಂಕಟೇಶ್ ನಾಯಕ್ ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅಧಿಕೃತ ಪ್ರಕಟಣೆ, ಇ-ಮೇಲ್, ಪತ್ರಿಕಾ ಪ್ರಕಟಣೆ, ಸುತ್ತೋಲೆ ಯಾವುದೂ ನಮ್ಮ ಬಳಿ ಇಲ್ಲ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ