2020 ಜನವರಿ ಬಳಿಕ ನೆಫ್ಟ್ ಪಾವತಿಗೆ ಶುಲ್ಕವಿಲ್ಲ

Team Udayavani, Nov 8, 2019, 5:18 PM IST

ಹೊಸದಿಲ್ಲಿ: ಡಿಜಿಟಲ್‌ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ 2020 ಜನವರಿಯಿಂದ ನೆಫ್ಟ್ ಪಾವತಿ (ನ್ಯಾಷನಲ್‌ ಎಲೆಕ್ಟ್ರಾನಿಕ್‌ ಫ‌ಂಡ್ಸ್‌ ಟ್ರಾನ್ಸ್‌ಫ‌ರ್‌) ಮೇಲೆ ಯಾವುದೇ ಶುಲ್ಕವನ್ನು ವಿಧಿಸದಂತೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕುಗಳಿಗೆ ಸೂಚಿಸಿದೆ.

ಸದ್ಯ ಡಿಜಿಟಲ್‌ ಮಾದರಿಯಲ್ಲಿ ಹಣ ವರ್ಗಾವಣೆಗೆ ನೆಫ್ಟ್ ಮತ್ತು ಆರ್‌ಟಿಜಿಎಸ್‌ ಎಂಬ ವಿಧಾನಗಳಿದ್ದು, ಇದಕ್ಕೆ ಬ್ಯಾಂಕುಗಳು ನಿರ್ದಿಷ್ಟ ಶುಲ್ಕ ವಿಧಿಸುತ್ತವೆ. ಈ ವ್ಯವಸ್ಥೆಗಳು ಆರ್‌ಬಿಐನಿಂದ ನಿಯಂತ್ರಿತವಾಗುತ್ತವೆ.

ಸುರಕ್ಷಿತ ಹಣ ವರ್ಗಾವಣೆಗೆ ಈ ಎರಡೂ ಡಿಜಿಟಲ್‌ ಮಾರ್ಗಗಳು ಉತ್ತಮವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇವುಗಳ ಬಳಕೆ ಹೆಚ್ಚಿವೆ.

2018 ಅಕ್ಟೋಬರ್‌ನಿಂದ 2019 ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ನಗದು ರಹಿತ ವ್ಯವಹಾರದಲ್ಲಿ ಡಿಜಿಟಲ್‌ ಪಾವತಿಯ ಪ್ರಮಾಣ ಶೇ.96ರಷ್ಟಿದೆ.

ಇದೇ ಅವಧಿಯಲ್ಲಿ ನೆಫ್ಟ್ ಮತ್ತು ಯುಪಿಐ (ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ತಲಾ 252 ಕೋಟಿ ರೂ. ಮತ್ತು 874 ಕೋಟಿ ರೂ.ಗಳ ಹಣದ ವ್ಯವಹಾರ ಮಾಡಿದೆ. ಈ ಮೂಲಕ ವಾರ್ಷಿಕ ಬೆಳವಣಿಗೆ ದರ ಶೇ.20ರಷ್ಟು ಮತ್ತು ಶೇ.263ರಷ್ಟಾಗಿದೆ.

ಸದ್ಯ ನೆಫ್ಟ್ ಅವಧಿಯನ್ನು ಬೆಳಗ್ಗೆ 8ರಿಂದ ಸಂಜೆ 7 ಗಂಟೆವರೆಗೆ ಇಡಲಾಗಿದೆ. ಜತೆಗೆ 2019 ಡಿಸೆಂಬರ್‌ನಿಂದ ದಿನದ 24 ತಾಸೂ ನೆಫ್ಟ್ ಮೂಲಕ ಹಣದ ವರ್ಗಾವಣೆಗೆ ಅವಕಾಶ ನೀಡುವುದಾಗಿ ಆರ್‌ಬಿಐ ಹೇಳಿತ್ತು.

ಸದ್ಯ ನೆಫ್ಟ್ ಮತ್ತು ಆರ್‌ಟಿಜಿಎಸ್‌ನಿಂದ ಹಣ ವರ್ಗಾವಣೆ ಮಾಡಿದ್ದಕ್ಕೆ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ. ಇದು ಬ್ಯಾಂಕ್‌ನ ವೆಬ್‌ ಮೂಲಕ ಆಗಿದ್ದರೆ, ಬ್ರ್ಯಾಂಚ್‌ ಮೂಲಕ ಮಾಡಿದ ವ್ಯವಹಾರಕ್ಕೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುತ್ತಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪುತ್ತೂರು: ಕುರಿಯ ಗ್ರಾಮದ ಅಜಲಾಡಿ ಹೊಸಮಾರಿನಲ್ಲಿ ಇಬ್ಬರನ್ನು ಕೊಂದು ವೃದ್ಧೆ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಘಟನೆ ಬೆಳಕಿಗೆ ಬಂದ 10 ಗಂಟೆಯೊಳಗೆ...

  • ಮಂಗಳೂರು: ಫ್ಯಾಶನ್‌ ಎಬಿಸಿಡಿ ಮತ್ತು ಸ್ಪಾಟ್‌ ಲೈಟ್‌ ಇಂಟರ್‌ನ್ಯಾಶನಲ್‌ ಫಿಲ್ಮ್ ವತಿಯಿಂದ ನ. 12ರಿಂದ 16ರ ವರೆಗೆ ಥೈಲೆಂಡ್‌ನ‌ಲ್ಲಿ ಜರಗಿದ ಸೌಂದರ್ಯ ಸ್ಪರ್ಧೆಯಲ್ಲಿ...

  • ಕೇಂದ್ರ ಲೋಕಸೇವಾ ಆಯೋಗದಲ್ಲಿ ಎಕ್ಸಾಮಿನರ್‌, ಸ್ಪೆಷಲಿಸ್ಟ್, ಸೀನಿಯರ್‌ ಲೆಕ್ಚರರ್‌. ಸಹಿತ153 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.  ಕಾನೂನು ಪದವಿ, ಸ್ನಾತಕೋತ್ತರ...

  • ನವದೆಹಲಿ: ತಮ್ಮ ವಿದೇಶ ಪ್ರವಾಸದ ಮಾಹಿತಿ ಮರೆಮಾಚಿದ್ದ ತೆಲಂಗಾಣ ಶಾಸಕ ರಮೇಶ್‌ ಚೆನ್ನಮನೇನಿ ಅವರ ಪೌರತ್ವವನ್ನು ಬುಧವಾರ ಗೃಹ ಸಚಿವಾಲಯ ರದ್ದುಪಡಿಸಿದೆ. 12 ತಿಂಗಳ...

  • ಪುತಿಯನ್‌ (ಚೀನ): ಭಾರತದ ಮನು ಭಾಕರ್‌ ಮತ್ತು ರಹಿ ಸನೊìಬತ್‌ ಅವರು ವಿಶ್ವಕಪ್‌ ಶೂಟಿಂಗ್‌ ಫೈನಲ್ಸ್‌ನ ವನಿತೆಯರ 25 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಫೈನಲ್‌...