ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ರೂವಾರಿ ಸ್ವಪ್ನಾ ಸುರೇಶ್ಗೆ ರಾಜಕೀಯ ಪ್ರಭಾವ ಇಲ್ಲ: NIA
Team Udayavani, Feb 4, 2021, 9:40 PM IST
ತಿರುವನಂತಪುರ: ಕೇರಳದ ಕುಪ್ರಸಿದ್ಧ ಚಿನ್ನ ಸಾಗಣೆ ಪ್ರಕರಣದ ರೂವಾರಿ ಸ್ವಪ್ನಾ ಸುರೇಶ್ಗೆ ಪ್ರಭಾವಶಾಲಿ ರಾಜಕೀಯ ಸಂಪರ್ಕ ಇಲ್ಲ.
ಹೀಗೆಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಿಶೇಷ ಕೋರ್ಟ್ಗೆ ಸಲ್ಲಿಕೆ ಮಾಡಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಇದರ ಜತೆಗೆ ಸಸ್ಪೆಂಡ್ ಆಗಿರುವ ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಹೆಸರೂ ಇಲ್ಲ. ತನಿಖಾ ಸಂಸ್ಥೆಯಿಂದ ವಿಚಾರಣೆಗೆ ಒಳಗಾಗಿದ್ದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಹೆಸರೂ ಪ್ರಸ್ತಾಪವಾಗಿಲ್ಲ.
ಮುಖ್ಯಮಂತ್ರಿಗಳ ಕಚೇರಿಯೇ ಚಿನ್ನ ಸಾಗಣೆಯಲ್ಲಿ ಭಾಗಿಯಾಗಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿತ್ತು. ಎನ್ಐಎ ನೀಡಿದ ಮಾಹಿತಿ ಪ್ರಕಾರ ಪ್ರಕರಣದ ತನಿಖೆ ಇನ್ನೂ ಪೂರ್ತಿಯಾಗಿಲ್ಲ. ಹೀಗಾಗಿ, ಪೂರಕ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಎಂದು ತಿಳಿಸಿದೆ.
ಇದನ್ನೂ ಓದಿ:ಶೇ.21 ಮಂದಿಗೆ ಸೋಂಕು ಬಂದು ಹೋಗಿರುವ ಸಾಧ್ಯತೆ : ಐಸಿಎಂಆರ್ ಸೀರೋ ಸರ್ವೆಯಲ್ಲಿ ಉಲ್ಲೇಖ