ಪೌರತ್ವ: ಜಾರಿ ನಿರಾಕರಿಸುವ ಹಾಗಿಲ್ಲ:ಕಪಿಲ್ ಸಿಬಲ್
Team Udayavani, Jan 18, 2020, 11:47 PM IST
ಕಲ್ಲಿಕೋಟೆ: ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್‌ನಲ್ಲಿ ಈಗಾಗಲೇ ಅಂಗೀಕಾರ ಪಡೆದಿರುವ ಕಾರಣ, ರಾಜ್ಯ ಸರಕಾರಗಳಿಗೆ ಅದನ್ನು ಅನುಷ್ಠಾನ ಮಾಡದೇ ಇರಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕ, ವಕೀಲ ಕಪಿಲ್ ಸಿಬಲ್ ಅವರೇ ಹೇಳಿದ್ದಾರೆ. ಅಲ್ಲದೆ, ಅದನ್ನು ಜಾರಿ ಮಾಡದೇ ಇರುವುದು ಅಸಾಂವಿಧಾ ನಿಕವಾಗುತ್ತದೆ ಎಂದೂ ನುಡಿದಿ ದ್ದಾರೆ. ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಸಿಬಲ್, “ನೀವು ಕಾಯ್ದೆಯನ್ನು ವಿರೋಧಿಸಬಹುದು. ಅದರ ವಿರುದ್ಧ ವಿಧಾನಸಭೆಗಳಲ್ಲಿ ನಿರ್ಣಯ ಕೈಗೊಳ್ಳ ಬಹುದು. ಆದರೆ ಜಾರಿ ಮಾಡಲ್ಲ ಎನ್ನುವುದು ಸಂವಿಧಾನಬಾಹಿರ’ ಎಂದಿದ್ದಾರೆ.
ದಿಲ್ಲಿಯಲ್ಲಿ ಎನ್‌ಎಸ್‌ಎ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ, ದಿಲ್ಲಿ ಯಲ್ಲಿ 3 ತಿಂಗಳುಗಳ ಕಾಲ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ಆದೇಶ ಹೊರಡಿಸಿದ್ದಾರೆ. ಅದರಂತೆ, ಯಾವುದೇ ವ್ಯಕ್ತಿ ರಾ. ಭದ್ರತೆಗೆ ಅಪಾಯ ಎಂಬ ಅನುಮಾನ ಮೂಡಿದಲ್ಲಿ ಆತನನ್ನು ಬಂಧಿಸುವ ಅಧಿಕಾರ ಪೊಲೀಸರಿಗೆ ಇರಲಿದೆ.