ವಿಮಾನ ಪೈಲಟ್ಗಳಿಗೆ ವರ್ಷದ ನೋಟಿಸ್ ಅವಧಿ!
Team Udayavani, Aug 17, 2017, 8:40 AM IST
ಹೊಸದಿಲ್ಲಿ: ನೌಕರಿ ಬಿಡಬೇಕೆಂದರೆ, ಮುಂಚಿತವಾಗಿ 1 ತಿಂಗಳು, 2 ತಿಂಗಳು ನೋಟಿಸ್ ಅವಧಿ ನೀಡಬೇಕೆನ್ನುವುದು ಸಾಮಾನ್ಯ. ಆದರೆ, ನಾಗರಿಕ ವಿಮಾನಯಾನ ನಿರ್ದೇಶನಾಲಯದ ನೂತನ ಆದೇಶ ಪ್ರಕಾರ, ಪೈಲಟ್ಗಳು ರಾಜೀನಾಮೆ ನೀಡಿದ ಬಳಿಕ 1ವರ್ಷ ನೋಟಿಸ್ ಅವಧಿಯನ್ನು ಪೂರೈಸಬೇಕು. ಇದರಿಂದ ಇನ್ನು ಪೈಲಟ್ಗಳು ಕೆಲಸ ಬಿಡುವುದೇ ಕಷ್ಟವಾಗಲಿದೆ.
ಈ ವರೆಗೆ ಹಿರಿಯ ಪೈಲಟ್ಗಳಿಗೆ ನೋಟಿಸ್ ಅವಧಿ 6 ತಿಂಗಳು ಎಂದಿದ್ದು, ಹೊಸದಾಗಿ 1 ವರ್ಷಕ್ಕೇರಿಸಿ ಆದೇಶಿಸಲಾಗಿದೆ. ಸಹ ಪೈಲಟ್ಗಳಿಗೆ 6 ತಿಂಗಳು ನೋಟಿಸ್ ಅವಧಿ ಎಂದು ನಿಗದಿ ಪಡಿಸಲಾಗಿದೆ. ತಕ್ಷಣದಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ ಒಂದು ವೇಳೆ ನೂತನ ನಿಯಮಾವಳಿ ಜಾರಿಗೆ ಮುನ್ನ ವೈಮಾನಿಕ ಕಂಪೆನಿಗಳು ನಿರಪೇಕ್ಷಣಾ ಪತ್ರ ನೀಡಿದಲ್ಲಿ, ನೋಟಿಸ್ ಅವಧಿಯಲ್ಲಿ ಕಡಿತ ಉಂಟಾಗಲಿದೆ.
ವಿವಿಧ ದೇಶೀಯ ವಿಮಾನ ಯಾನ ಕಂಪೆನಿಗಳ ಬೇಡಿಕೆ ಮೇರೆಗೆ ವಿಮಾನಯಾನ ನಿರ್ದೇಶನಾಲಯ ಹೊಸ ನಿಯಮ ಜಾರಿಗೆ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…