ಪಾಕ್‌, ಚೀನ ಅಣು ಬಾಂಬ್‌ ಸಂಖ್ಯೆ ಹೆಚ್ಚಳ; ಯಥಾಸ್ಥಿತಿ ಕಾಯ್ದುಕೊಂಡ ಭಾರತ

Team Udayavani, Jun 17, 2019, 4:06 PM IST

ಸ್ಟಾಕ್‌ಹೋಮ್‌ : ಪಾಕಿಸ್ಥಾನ ಮತ್ತು ಚೀನ ಕಳೆದೊಂದು ವರ್ಷದಲ್ಲಿ ತಮ್ಮ ಅಣ್ವಸ್ತ್ರಗಳನ್ನು ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಆದರೆ ಭಾರತ ಮಾತ್ರ ತನ್ನ ಅಣ್ವಸ್ತ್ರಗಳ ಸಂಖ್ಯೆಯನ್ನು ಯಥಾವತ್‌ ಉಳಿಸಿಕೊಂಡಿದೆ.

ಸ್ಟಾಕ್‌ಹೋಮ್‌ ಇಂಟರ್‌ನ್ಯಾಶನನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ (ಸಿಪ್ರಿ) ಇಂದು ಸೋಮವಾರ ಬಿಡುಗಡೆ ಮಾಡಿರುವ 2019ರ ಇಯರ್‌ ಬುಕ್‌ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ.

ಪಾಕಿಸ್ಥಾನದ ಬಳಿ ಈಗ 150 ರಿಂದ 160 ಅಣ್ವಸ್ತ್ರಗಳಿವೆ. ಚೀನದ ಬಳಿ 290 ಅಣ್ವಸ್ತ್ರಗಳಿವೆ. ಭಾರತದ ಬಳಿ 130 ರಿಂದ 140 ಅಣು ಬಾಂಬ್‌ ಗಳಿವೆ ಎಂದು ಇಯರ್‌ ಬುಕ್‌ ತಿಳಿಸಿದೆ.

2019ರ ಆರಂಭದಲ್ಲಿ ಚೀನದ ಬಳಿ 280 ಅಣು ಬಾಂಬ್‌ ಗಳಿದ್ದವು. ಅದೀಗ 290ಕ್ಕೇರಿದೆ. ಇದೇ ರೀತಿ ಪಾಕಿಸ್ಥಾನದ ಬಳಿ ಇದ್ದ 140 ರಿಂದ 150ರ ಆಣು ಬಾಂಬ್‌ ಸಂಖ್ಯೆ ಈಗ 150 ರಿಂದ 160 ಕ್ಕೇರಿದೆ.

ಇಸ್ರೇಲ್‌ ಬಳಿ 80ರಿಂದ 90ರಷ್ಟು ಅಣು ಬಾಂಬ್‌ ಗಳು ಇವೆ; ಉತ್ತರ ಕೊರಿಯ ತನ್ನ ಬಳಿ ಇದ್ದ 20 ಅಣು ಬಾಂಬ್‌ ಗಳನ್ನು ಇದೀಗ 30ಕ್ಕೆ ಏರಿಸಿಕೊಂಡಿದೆ.

2018ರ ಆರಂಭದಲ್ಲಿ ಭಾರತದ ಬಳಿ 130 ರಿಂದ 140 ಅಣು ಬಾಂಬ್‌ಗಳಿದ್ದವು. ಈಗಲೂ ಭಾರತದ ಬಳಿ ಅಷ್ಟೇ ಅಣು ಬಾಂಬ್‌ಗಳಿವೆ.

ಒಟ್ಟಾರೆಯಾಗಿ ಅಮೆರಿಕ, ರಶ್ಯ, ಪಾಕಿಸ್ಥಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯ ಬಳಿ ಇರುವ ಒಟ್ಟು ಅಣು ಬಾಂಬ್‌ ಗಳ ಸಂಖ್ಯೆ ಅಂದಾಜು 13,865. ಇದು 2018ರ ಆರಂಭದಲ್ಲಿದ ಸಂಖ್ಯೆಗಿಂತ 600 ಕಡಿಮೆ ಎಂದು ಸಿಪ್ರಿ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...