20 ಉಗ್ರ ಶಿಬಿರಗಳು ಸಕ್ರಿಯ
20 ಲಾಂಚ್ಪ್ಯಾಡ್ಗಳಲ್ಲಿದ್ದಾರೆ ತಲಾ 50 ಉಗ್ರರು
Team Udayavani, Oct 9, 2019, 4:41 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದೊಳಕ್ಕೆ ಉಗ್ರರನ್ನು ನುಸುಳಿಸಲು ಪಣತೊಟ್ಟಿರುವ ಪಾಕಿಸ್ಥಾನವು ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ಥಾನವು ಕನಿಷ್ಠ 20 ಉಗ್ರ ಶಿಬಿರಗಳನ್ನು ಹಾಗೂ 20 ಲಾಂಚ್ ಪ್ಯಾಡ್ಗಳನ್ನು ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಮಾಹಿತಿ ಆಧರಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ತರಬೇತಿ ಶಿಬಿರಗಳು ಮತ್ತು ಲಾಂಚ್ ಪ್ಯಾಡ್ಗಳಲ್ಲಿ ಕನಿಷ್ಠಪಕ್ಷ ತಲಾ 50 ಉಗ್ರರಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ಆದ ಬಳಿಕ ಈ ಶಿಬಿರಗಳನ್ನು ದಿಢೀರನೆ ಮುಚ್ಚಲಾಗಿತ್ತು. ಈಗ ಮತ್ತೆ ಇವನ್ನು ಸಕ್ರಿಯ ಗೊಳಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲೆಂದು ಉಗ್ರರನ್ನು ನುಸುಳಿಸುವ ಉದ್ದೇಶದಿಂದ ಇವುಗಳಿಗೆ ಮತ್ತೆ ಜೀವ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತೆ ಡ್ರೋನ್ ಪ್ರತ್ಯಕ್ಷ
ಪಂಜಾಬ್ನ ಹುಸೈನ್ವಾಲಾ ಪ್ರದೇಶದಲ್ಲಿ ಪಾಕಿಸ್ಥಾನದ ಕಡೆಯಿಂದ ಎರಡು ಡ್ರೋನ್ಗಳು ಗಡಿ ದಾಟಿ ಬಂದಿದ್ದು ಮಂಗಳವಾರ ಕಂಡುಬಂದಿದೆ. ರಾಜ್ಯದ ಗಡಿ ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತರುತ್ತಿದ್ದ ಡ್ರೋನ್ಗಳನ್ನು ಬಿಎಸ್ಎಫ್ ಪತ್ತೆಹಚ್ಚಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಗಡಿ ದಾಟಿ ಬಂದಿದೆ ಎನ್ನಲಾದ ಡ್ರೋನ್ಗಾಗಿ ಶೋಧ ಕಾರ್ಯ ಬಿರುಸುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ