ಬಿಹಾರ: ಗೋಡೆ ಮೇಲೆ ಉಗುಳಿದ ವಿದ್ಯಾರ್ಥಿಯಿಂದಲೇ ಗೋಡೆ ಶುಚಿಗೊಳಿಸಿದ ಅಧಿಕಾರಿ

Team Udayavani, Mar 20, 2021, 3:48 PM IST

Official beats student for spitting on wall in Bihar’s Purnia

ನವದೆಹಲಿ: ಗೋಡೆಯ ಮೇಲೆ ಉಗುಳಿದ ಹಿನ್ನೆಲೆಯಲ್ಲಿ ಬ್ಲಾಕ್ ಅಭಿವೃದ್ಧಿ ಅಧಿಕಾರಿಯೊಬ್ಬರು 22 ವಯಸ್ಸಿನ ವಿದ್ಯಾರ್ಥಿಗೆ ಕೋಲಿನಿಂದ ಹೊಡೆದು ಆ ವಿದ್ಯಾರ್ಥಿಯ ಕೈಯಿಂದಲೇ ಗೋಡೆಯನ್ನು ತೊಳೆದು ಶುಚಿಗೊಳಿಸಿದ ಘಟನೆ ನಡೆದಿದೆ.

ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಯುವಕನು ತಾನು ಉಗುಳಿ ಅಶುದ್ಧಗೊಳಿಸಿದ ಗೋಡೆಯನ್ನು ಶುಚಿಗೊಳಿಸುತ್ತಿರುವುದನ್ನು ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ಭಾರಿ ವೈರಲ್ ಆಗಿದೆ.

ಈ ಕುರಿತಾಗಿ ಮಾತನಾಡಿರುವ ವಿದ್ಯಾರ್ಥಿ, ನಾನು ಮಾಡಿರುವುದು ತಪ್ಪು…. ಈ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ ಹಾಗೂ ಕ್ಷಮೆಯನ್ನು ಯಾಚಿಸುತ್ತಿದ್ದೇನೆ ಎಂದಿದ್ದು, ನಾನು ಗೋಡೆಯ ಮೇಲೆ ಉಗುಳಿದ ಸಮಯದಲ್ಲಿ ಅಧಿಕಾರಿಗಳು ನನ್ನನ್ನು ಅವರ ಕಚೇರಿಗೆ ಕರೆದಿದ್ದು, ಬಳಿಕ ಬಿದಿರಿನ ಕೋಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.

ಅಲ್ಲದೆ ಅಧಿಕಾರಿಯು ನನ್ನಿಂದ ಗೋಡೆಯನ್ನು ತೊಳೆಸಿರುವ  ವಿಡಿಯೋ ಮಾಡಿದ್ದು, ಅದನ್ನು  ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದರಿಂದ ನನ್ನ ಗೆಳೆಯರು ಮತ್ತು ಸಂಬಂಧಿಗಳು ಈ ವಿಚಾರದ ಕುರಿತಾಗಿ ನನ್ನ ಬಳಿ ಪದೇ ಪದೇ ಪ್ರಶ್ನಿಸುತ್ತಿದ್ದು, ನಾನು ಅವಮಾನಕ್ಕೆ ಒಳಗಾಗಿದ್ದೇನೆ ಎಂದಿದ್ದಾನೆ.

ಇದನ್ನೂ ಓದಿ:70 ವರ್ಷಗಳಲ್ಲಿ ಎಲ್ಲರಿಗೂ ಅವಕಾಶ ನೀಡಿದ್ದೀರಿ ಈಗ ನಮಗೆ 5 ವರ್ಷ ಅಧಿಕಾರ ಕೊಡಿ; ಪ್ರಧಾನಿ

ಈ ವಿಚಾರದ ಬಗ್ಗೆ  ಮಾಹಿತಿ ಹಂಚಿಕೊಂಡಿರುವ ಅಧಿಕಾರಿ ಸತ್ಯೇಂದ್ರ ಸಿಂಗ್ ನಾನು ತಂಬಾಕನ್ನು ತಿಂದು ಗೋಡೆಯ ಮೇಲೆ ಉಗುಳಿರುವ ವ್ಯಕ್ತಿಯನ್ನು ಹಿಡಿದಿದ್ದು, ಆತನಲ್ಲಿಯೇ ಗೋಡೆಯನ್ನು ಶುಚಿಗೊಳಿಸಿದ್ದೇನೆ. ಕೋವಿಡ್ ಸೋಂಕಿನ ಹೆಚ್ಚಳದ ಹಿನ್ನೆಲೆಯಲ್ಲಿ ಸಮಾಜಕ್ಕೆ ಶುಚಿತ್ವದ ಸಂದೇಶವನ್ನು ಸಾರುವ ಉದ್ದೇಶದಿಂದ ನಾನು ಹೀಗೆ ಮಾಡಿದ್ದೇನೆ ಎಂದಿದ್ದಾರೆ.

ನಾನು ಆ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿಲ್ಲ ಮತ್ತು ಯಾವುದೇ ವಿಡಿಯೋವನ್ನು ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿಲ್ಲ. ಘಟನೆ ನಡೆಯುವ ಸಮಯದಲ್ಲಿ ನಮ್ಮ ಸುತ್ತ ಮುತ್ತಲೂ ಹಲವಾರು ಜನರಿದ್ದು, ಅವರಲ್ಲಿ ಯಾರಾದರೂ ವಿಡಿಯೋ ಮಾಡಿರಬಹುದು ಎಂದು ತಿಳಿಸಿದ್ದಾರೆ. ಈ ನಡುವೆ ವಿದ್ಯಾರ್ಥಿ ಜಿಲ್ಲಾ ಅಧಿಕಾರಿಗಳ ಬಳಿ ಘಟನೆಯ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಮ್ಯಾರಥಾನ್‌ ಮ್ಯಾಚ್‌; ಮೆಡ್ವೆಡೇವ್‌ ಮೇಲುಗೈ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.