ಹಳೇ ಮೊಬೈಲ್‌ಗಳಿಗೆ ಸಂಕಷ್ಟ
Team Udayavani, Feb 22, 2019, 12:30 AM IST
ಹೊಸದಿಲಿ: ಸ್ಥಳೀಯ ಭೌಗೋಳಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನೀಡುವ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ತಂತ್ರಜ್ಞಾನದ ಸೇವೆಗಳು ಏ. 6ರಂದು ಅಥವಾ ಆನಂತರ ವ್ಯತ್ಯಯವಾಗುವ ಸಾಧ್ಯತೆಗಳಿವೆ. 2010ಕ್ಕೂ ಹಿಂದೆ ತಯಾರಾದ ಮೊಬೈಲ್ ಸೆಟ್‌ಗಳಲ್ಲಿ ಮಾತ್ರ ಇಂಥ ಸಮಸ್ಯೆ ಕಾಣಿಸಿಕೊಳ್ಳಲಿದೆ.
ಏಕೆ ಹೀಗೆ?: ಜಿಪಿಎಸ್ ವ್ಯವಸ್ಥೆಯು, ಬೈನರಿ ಸಂಖ್ಯೆ ಆಧಾರಿತ ಕ್ಲಾಕಿಂಗ್ ವ್ಯವಸ್ಥೆಯಾಗಿದ್ದು, 1999ರ ಆ. 21ರಂದು ಇದನ್ನು ಶುರು ಮಾಡಲಾಗಿತ್ತು. ಇದರ ಗಣನೆಯ ಅವಧಿಯು ಅಂದಿನ ಕಾಲಕ್ಕೆ 1,024 ವಾರಗಳಿಗೆ ನಿಗದಿಯಾಗಿ ದ್ದರಿಂದ ಏ. 6ರಂದು ಈ ಕ್ಲಾಕ್ ತಾನೇ ತಾನಾಗಿ ರೀ-ಸೆಟ್ ಆಗಲಿದೆ.
ಹೀಗೆ, ರೀ-ಸೆಟ್ ಆಗಲಿರುವ ಕ್ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಫ್ಟ್ ವೇರ್ ಅಪ್‌ಡೇಟ್‌ಗಳು ಹೊಸ ಮೊಬೈಲುಗಳಲ್ಲಿ ಇವೆ. ಆದರೆ, ಹಳೆಯ ಮೊಬೈಲುಗಳಲ್ಲಿ ಅದು ಇರುವುದಿಲ್ಲ. ಹಾಗಾಗಿ, ಆ ಫೋನುಗಳಲ್ಲಿ ಜಿಪಿಎಸ್ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದು. ಆದರೆ, ಹಳೆಯ ಫೋನುಗಳ ತಯಾರಿಕಾ ಸಂಸ್ಥೆಗಳು ಆ ಫೋನುಗಳಿಗೆ ಸಾಫ್ಟ್ವೇರ್ ಪ್ಯಾಚ್ ಕಳಿಸಿದ್ದರೆ ಮಾತ್ರ ಆ ಮೊಬೈಲ್‌ಗಳು ಹೊಸ ಜಿಪಿಎಸ್ ಕ್ಲಾಕಿಂಗ್‌ಗೆ ಹೊಂದಿಕೊಳ್ಳಬಹುದು.
ಹೊಸ ಜಿಪಿಎಸ್ ಕ್ಲಾಕಿಂಗ್ ವ್ಯವಸ್ಥೆಗೆ ಅನುಗುಣವಾದ ಸಾಫ್ಟ್ವೇರ್ ಬೇಕೇಬೇಕು
ಆ ಸಾಫ್ಟ್ವೇರ್ ವ್ಯವಸ್ಥೆ ಹಳೆಯ ಫೋನುಗಳಲ್ಲಿ ಅಲಭ್ಯ
2010ರ ಫೋನುಗಳು ಹೊಸ ಜಿಪಿಎಸ್ ಕ್ಲಾಕಿಂಗ್‌ಗೆ ಒಗ್ಗುವುದು ಅನುಮಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜ್ಞಾನವಾಪಿ ಮಸೀದಿ ವಿಡಿಯೋ ಚಿತ್ರೀಕರಣದ ವರದಿ ವಾರಾಣಸಿ ಕೋರ್ಟ್ ಗೆ ಸಲ್ಲಿಕೆ
ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟ್ರಕ್; ಮೂವರು ಸಾವು, 11 ಮಂದಿಗೆ ಗಾಯ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ