ಮುಂಬೈಗೆ ಓಲೆಕ್ಟ್ರಾದಿಂದ 2100 ಎಲೆಕ್ಟ್ರಿಕ್ ಬಸ್‌ಗಳ ಸರಬರಾಜು
ಎಲೆಕ್ಟ್ರಿಕ್ ಬಸ್ ಕ್ಷೇತ್ರದ ಅತಿ ದೊಡ್ಡ ಆದೇಶ: 3675 ಕೋಟಿ ರೂ. ಮೊತ್ತದ ಒಪ್ಪಂದ
Team Udayavani, May 23, 2022, 8:45 PM IST
ಮುಂಬಯಿ: ದೇಶದ ಎಲೆಕ್ಟ್ರಿಕ್ ಬಸ್‌ಗಳ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿ ಹೊರಹೊಮ್ಮಿರುವ ಓಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್‌ಗೆ ಬೃಹತ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಇಲಾಖೆ (ಬೆಸ್ಟ್) 2100 ಎಲೆಕ್ಟ್ರಿಕ್ ಬಸ್‌ಗಳ ಸರಬರಾಜಿಗೆ ಆದೇಶ ನೀಡಿದೆ.
ಈ ಮೊದಲು ಈ ಬೃಹತ್ ಪ್ರಮಾಣದ ಎಲೆಕ್ಟ್ರಿಕ್ ಬಸ್‌ಗಳ ಸರಬರಾಜು ಟೆಂಡರ್‌ನಲ್ಲಿ ಎಲ್-1 ಆಗಿ ಹೊರ ಹೊಮ್ಮಿದ್ದ ಓಲೆಕ್ಟ್ರಾಗೆ ಬೆಸ್ಟ್ ಆದೇಶ ನೀಡಿದ್ದು, ಒಟ್ಟಾರೆ 3675 ಕೋಟಿ ರೂಪಾಯಿಗಳ ಈ ಸರಬರಾಜು ಆದೇಶ ದೇಶದ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದ ಅತಿ ದೊಡ್ಡ ವಹಿವಾಟಾಗಿದೆ.
ಮುಂದಿನ 12 ತಿಂಗಳುಗಳಲ್ಲಿ ಓಲೆಕ್ಟ್ರಾ ಈ ಬಸ್‌ಗಳನ್ನು ತಯಾರಿಸಿ ಬೆಸ್ಟ್ ಸಂಸ್ಥೆಗೆ ನೀಡಲಿದ್ದು, ಒಟ್ಟು ವೆಚ್ಚದ ಒಪ್ಪಂದದ ಆಧಾರದಲ್ಲಿ 12 ವರ್ಷಗಳ ಕಾಲ ಓಲೆಕ್ಟ್ರಾ ಗ್ರೀನ್‌ಟೆಕ್ ಸೋದರ ಸಂಸ್ಥೆ ಈವೆ ಟ್ರಾನ್ಸ್ ನಿರ್ವಹಿಸಲಿದೆ. ಓಲೆಕ್ಟ್ರಾ ಮತ್ತು ಈವೇ ನಡುವಿನ ಈ ವಹಿವಾಟನ್ನು ʼಸಂಬಂಧಿತ ಸಂಸ್ಥೆ ವಹಿವಾಟುʼ ಎಂದು ಹೇಳಲಾಗಿದ್ದು, ಈ ಆದೇಶದಂತೆ 12 ವರ್ಷಗಳ ನಿರ್ವಹಣೆ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಅಗತ್ಯ ತಾಂತ್ರಿಕ ನಿರ್ವಹಣೆಯನ್ನು ಓಲೆಕ್ಟ್ರಾ ಸಂಸ್ಥೆಯೇ ಮಾಡಲಿದೆ.
ಈ ಬೃಹತ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಓಲೆಕ್ಟ್ರಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿದೇಶಕ ಕೆ.ವಿ. ಪ್ರದೀಪ್, “ಬೃಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಇಲಾಖೆಯ ಈ ಬೃಹತ್ ಎಲೆಕ್ಟ್ರಿಕ್ ಬಸ್‌ಗಳ ಸರಬರಾಜು ಆದೇಶ ದೊರಕಿರುವುದು ಸಂತಸ ತಂದಿದೆ. ದೇಶದ ಆರ್ಥಿಕ ಕೇಂದ್ರವಾಗಿರುವ ಮುಂಬೈಗೆ ಈ ಸೇವೆ ಒದಗಿಸುವ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ, ನಿಗಧಿತ ಅವಧಿಯಲ್ಲಿ ಬಸ್‌ಗಳನ್ನು ಸರಬರಾಜು ಮಾಡಲಾಗುವುದು ಮತ್ತು ಮುಂಬೈ ಜನತೆಗೆ ಉತ್ತಮ ಸಾರಿಗೆ ಸೇವೆ ನೀಡಲು ಓಲೆಕ್ಟ್ರಾ ಬದ್ಧವಾಗಿದೆ” ಎಂದು ಹೇಳಿದ್ದಾರೆ.
ದೇಶದ ಎಲೆಕ್ಟ್ರಿಕ್ ಬಸ್‌ಗಳ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಓಲೆಕ್ಟ್ರಾ ಗ್ರೀನ್‌ಟೆಕ್ ಸಂಸ್ಥೆಯು ಬೆಸ್ಟ್‌ನ ಈ ಕಾರ್ಯಾದೇಶ ಜಾರಿಗೆ 12 ಮೀಟರ್‌ಗಳ ಅತ್ಯಾಧುನಿಕ ಎ.ಸಿ. ಬಸ್‌ಗಳನ್ನು ತಯಾರಿಸಲಿದ್ದು, ಈಗಾಗಲೇ ಬೆಸ್ಟ್ ಸಂಸ್ಥೆಯು ಓಲೆಕ್ಟ್ರಾದ 40 ಬಸ್‌ಗಳನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಓಲೆಕ್ಟ್ರಾ ಮತ್ತು ಈವೇ ಸಂಸ್ಥೆಗಳು ಜಂಟಿಯಾಗಿ ಪುಣೆ, ಹೈದರಾಬಾದ್, ಗೋವಾ, ಡೆಹ್ರಾಡುನ್, ಸೂರತ್, ಅಹ್ಮದಾಬಾದ್, ಸಿಲ್ವಾಸ ಮತ್ತು ನಾಗ್ಪುರಗಳಲ್ಲಿ ಯಶಸ್ವಿ ನಿರ್ವಹಿಸುತ್ತಿದೆ.
ಕಳೆದ 2000 ಇಸವಿಯಲ್ಲಿ ಆರಂಭವಾದ ಓಲೆಕ್ಟ್ರಾ ಗ್ರೀನ್ ಟೆಕ್ ಸಾರ್ವಜನಿಕ ಹೂಡಿಕೆ ಸಂಸ್ಥೆಯಾಗಿದ್ದು, ದೇಶದ ನಿರ್ಮಾಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಎಂ.ಇ.ಐ.ಎಲ್‌ನ ಸಮೂಹ ಸಂಸ್ಥೆಗಳಲ್ಲಿ ಒಂದಾಗಿದೆ. 2015ರಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಸಂಸ್ಥೆಯು ವಿದ್ಯುತ್ ಸರಬರಾಜು ಕ್ಷೇತ್ರದ ಸಿಲಿಕಾನ್ ರಬ್ಬರ್ ಮತ್ತು ಕಾಂಪೋಸಿಟ್ ಇನ್ಸುಲೇಟರ್‌ಗಳ ಬೃಹತ್ ತಯಾರಿಕೆಯಲ್ಲಿ ತೊಡಗಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ
ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು
ಜು. 1ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ: ರಾಜ್ಯದಲ್ಲೂ ಕಟ್ಟುನಿಟ್ಟಿನ ಜಾರಿಗೆ ಕ್ರಮ
ನೀರಲ್ಲೇ ನಿಂತು ಅಹವಾಲು ಆಲಿಕೆ: ಅಸ್ಸಾಂ ಸಿಲ್ಚಾರ್ನಲ್ಲಿ ಸಿಎಂ ಹಿಮಾಂತ ಪರಿಶೀಲನೆ
ರಾಜಸ್ಥಾನದ ಈ ಎರಡು ಸಮುದಾಯದ ಮದುವೆಗೆ ಡಿಜೆ, ಡೆಕೋರೇಷನ್ ಇಲ್ಲ! ಕಾರಣ ಇಷ್ಟೇ
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಕೇಂದ್ರ ಸರ್ಕಾರದಿಂದ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ದಮನ ನೀತಿ: ಸಿದ್ಧರಾಮಯ್ಯ
ನಾವೂರು: ಇನ್ನಷ್ಟು ಅನುದಾನ ಹರಿದು ಬಂದರೆ ಅಭಿವೃದ್ಧಿ ಮಲ್ಲಿಗೆ ಅರಳೀತು
ತಾಯಿಯಾಗುತ್ತಿರುವ ಸಂತಸ ವ್ಯಕ್ತಪಡಿಸಿದ ಬಾಲಿವುಡ್ ನಟಿ ಆಲಿಯಾ ಭಟ್
ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ ಸ್ವಾಮೀಜಿ
ಕಲರ್ಫುಲ್ ಇವೆಂಟ್ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್