ಕ್ರಿಸ್ಮಸ್‌ ಸಂಭ್ರಮಕ್ಕೆ ಒಮಿಕ್ರಾನ್‌ ಅಡ್ಡಿ; ದಿಲ್ಲಿ, ಹರಿಯಾಣಗಳಲ್ಲಿ ಹೊಸ ನಿಯಮ

Team Udayavani, Dec 23, 2021, 6:50 AM IST

ಕ್ರಿಸ್ಮಸ್‌ ಸಂಭ್ರಮಕ್ಕೆ ಒಮಿಕ್ರಾನ್‌ ಅಡ್ಡಿ; ದಿಲ್ಲಿ, ಹರಿಯಾಣಗಳಲ್ಲಿ ಹೊಸ ನಿಯಮ

ಹೊಸದಿಲ್ಲಿ: ದೇಶದಲ್ಲಿ ಒಮಿಕ್ರಾನ್‌ ರೂಪಾಂತರಿ ಕೇಸ್‌ಗಳು ಹೆಚ್ಚಾಗುತ್ತಿರುವು­ದರಿಂದ ಕ್ರಿಸ್ಮಸ್‌, ಹೊಸ ವರ್ಷದ ಸಂಭ್ರಮಾಚರಣೆಗೆ ಅಡ್ಡಿ ಖಚಿತ. ದಿಲ್ಲಿ, ಹರಿಯಾಣ, ಪಂಜಾಬ್‌ನಲ್ಲಿ ಹಲವು ಹೊಸಕಟ್ಟು ಪಾಡುಗಳನ್ನು ಆಯಾ ಸರಕಾರಗಳು ವಿಧಿಸಿವೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರು­ವಾರ ಹೊಸದಿಲ್ಲಿಯಲ್ಲಿ ಹಿರಿಯ ಅಧಿಕಾರಿ­ಗಳ ಜತೆಗೆ ಪರಾಮರ್ಶೆ ನಡೆಸಲಿದ್ದಾರೆ.

ದಿಲ್ಲಿ ವಿಪತ್ತು ನಿರ್ವಹಣ ಪ್ರಾಧಿಕಾರ (ಡಿಡಿಎಂಎ) ಬುಧವಾರ ಆದೇಶ ಹೊರಡಿಸಿ, ಕ್ರಿಸ್ಮಸ್‌, ಹೊಸವರ್ಷದ ಸಂಭ್ರಮಾಚರಣೆಗಳು ಹೊಸ ರೂಪಾಂ­ತರಿಯ ಸೂಪರ್‌ ಸ್ಪ್ರೆಡ್‌ ಆಗುವ ಸ್ಥಳಗಳು ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿ­ಕಾರಿಗಳಿಗೆ ಸೂಚನೆ ನೀಡಿದೆ. ಸಾರ್ವಜನಿ­ಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಹಾಲಿ ಇರುವ ನಿಯಮಗಳನ್ನು ಕಟ್ಟು­ನಿಟ್ಟಾಗಿ ಜಾರಿಗೆ ತರಲು ಆದೇಶಿಸಿದೆ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನಿಯಮ ಪಾಲನೆ ನಿಟ್ಟಿನಲ್ಲಿ ಸೂಕ್ತ ಸಿಬಂದಿಯನ್ನು ನಿಯೋ ಜಿಸುವಂತೆಯೂ ಪ್ರಾಧಿಕಾರ ಆದೇಶಿಸಿದೆ. ಎಲ್ಲ ರೀತಿಯ ರಾಜಕೀಯ, ಕ್ರೀಡಾ ಚಟು ವಟಿಕೆಗಳು, ಮನೋರಂಜನೆ, ಸಾಂಸ್ಕೃತಿಕ ಚಟುವಟಿಕೆಗಳು, ಸಭಾ­ಮಂದಿರ­ಗಳಲ್ಲಿ ಆಯೋಜಿಸಲಾಗಿರುವ ಕಾರ್ಯ­ಕ್ರಮಗಳಿಗೆ ತಡೆ ಹಾಕಲಾಗಿದೆ. ಹೊಸದಿಲ್ಲಿ­ಯಲ್ಲಿ ಹೊಸತಾಗಿ 125 ಕೊರೊನಾ ಸೋಂಕು ದೃಢಪಟ್ಟಿದೆ. ಮುಂದಿನ ತಿಂಗಳಿಂದ ಅನ್ವಯ­ವಾಗುವಂತೆ ಹರಿಯಾಣದಲ್ಲಿ ಮಾಲ್‌­ಗಳಿಗೆ, ಸಭಾಭವನಗಳಿಗೆ, ಹೊಟೇಲ್‌, ಬ್ಯಾಂಕ್‌ ಸೇರಿ­ದಂತೆ ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಹಾಕಿಸಿ­ಕೊಳ್ಳದವರಿಗೆ ಪ್ರವೇಶ ನಿಷೇಧಿಸಲಾಗಿದೆ.

ಇದನ್ನೂ ಓದಿ:ಕುಂದಾಪುರ: ಕ್ರಿಸ್ಮಸ್‌ ಪ್ರಾರ್ಥನೆಗೆ ಶರತ್ತುಬದ್ಧ ಅನುಮತಿ

213 ದಾಟಿದ ಕೇಸ್‌: ಕೇಂದ್ರ ಸರಕಾರ ಬುಧವಾರ ನೀಡಿದ ಮಾಹಿತಿ ಪ್ರಕಾರ ದೇಶದಲ್ಲಿ 213ಕ್ಕಿಂತ ಹೆಚ್ಚಾಗಿದೆ ರೂಪಾಂತರಿ ಕೇಸು. 15 ರಾಜ್ಯಗಳಲ್ಲಿ ಮತ್ತು ಕೇಂದ್ರಾ­ಡಳಿತ ಪ್ರದೇಶದಲ್ಲಿ ಅದು ದೃಢಪಟ್ಟಿದೆ. ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ  6,317 ಹೊಸ ಕೇಸ್‌ ಮತ್ತು 318 ಮಂದಿ ಅಸುನೀಗಿದ್ದಾರೆ.

ಅಖಿಲೇಶ್  ಪತ್ನಿಗೆ ಸೋಂಕು: ಉ.ಪ್ರ. ಮಾಜಿ ಸಿಎಂ ಅಖಿಲೇಶ್ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ ಅವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸ್ವಯಂ ಕ್ವಾರಂಟೈನ್‌ ಆಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಅಲೀಗಢದಲ್ಲಿ ಗುರುವಾರ ರ್‍ಯಾಲಿ ನಡೆಯಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.

ಲಸಿಕೆ ಸರ್ಟಿಫಿಕೆಟ್‌ ಇಲ್ಲದಿದ್ದರೆ ಸಂಬಳ ಇಲ್ಲ
“ಎರಡು ಡೋಸ್‌ ಲಸಿಕೆ ಹಾಕಿದರೆ ಮಾತ್ರ ಸಂಬಳ’ ಹೀಗೆಂದು ಪಂಜಾಬ್‌ ಸರಕಾರ ತನ್ನ ಉದ್ಯೋಗಿಗಳಿಗೆ ಖಡಕ್‌ ಆದೇಶ ನೀಡಿದೆ. ಒಂದು ಡೋಸ್‌ ಅಥವಾ ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿ­ರುವ ಬಗ್ಗೆ ಇರುವ ಪ್ರಮಾಣ ಪತ್ರವನ್ನು ರಾಜ್ಯ ಸರಕಾರದ ಉದ್ಯೋಗಕ್ಕೆ ಸಂಬಂ ಧಿಸಿದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಹೀಗಾದರೆ ಮಾತ್ರ ಸರಕಾರಿ ಉದ್ಯೋಗಿಗಳಿಗೆ ಸಂಬಳ ಪಾವತಿಯಾ­ ಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇಸ್ರೇಲ್‌ನಲ್ಲಿ 4ನೇ ಡೋಸ್‌ ಲಸಿಕೆಗೆ ಆದೇಶ
ಅರವತ್ತು ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ಲಸಿಕೆಯ ನಾಲ್ಕನೇ ಡೋಸ್‌ ನೀಡಲು ಇಸ್ರೇಲ್‌ ನಿರ್ಧರಿಸಿದೆ. ಹೆಚ್ಚಾಗುತ್ತಿರುವ ಒಮಿಕ್ರಾನ್‌ ರೂಪಾಂತರಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ನಾಲ್ಕನೇ ಡೋಸ್‌ ನೀಡಲು ನಿರ್ಧರಿಸಿದ ಜಗತ್ತಿನ ಮೊದಲ ರಾಷ್ಟ್ರವೂ ಇಸ್ರೇಲ್‌ ಆಗಿದೆ. ಇಸ್ರೇಲ್‌ನಲ್ಲಿ 340ಕ್ಕೂ ಹೆಚ್ಚು ಕೇಸ್‌ಗಳು ದೃಢಪಟ್ಟಿವೆ. ಇದರ ಜತೆಗೆ 60 ವರ್ಷದ ವ್ಯಕ್ತಿ ಬೀರ್ಶೆಬಾ ಎಂಬ ನಗರದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿರುವಂತೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಅದಕ್ಕೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಟಾಪ್ ನ್ಯೂಸ್

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.