ಕಾಬೂಲ್ ಗುರುದ್ವಾರ ದಾಳಿಕೋರ ಕಾಸರಗೋಡಿನ ಅಬು ಖಾಲಿದ್?
Team Udayavani, Mar 28, 2020, 1:34 AM IST
ಹೊಸದಿಲ್ಲಿ: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿರುವ ಗುರುದ್ವಾರದ ಮೇಲೆ ಮೇಲೆ ಮಾ. 25ರಂದು ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ್ದ ಮೂವರು ಐಸಿಸ್ ಉಗ್ರರಲ್ಲಿ ಒಬ್ಬ ಕೇರಳದ ಕಾಸರಗೋಡು ಜಿಲ್ಲೆಗೆ ಸೇರಿದವನಾಗಿದ್ದಾನೆ. ‘ಇಂಡಿಯಾ ಟುಡೇ’ ವರದಿ ಪ್ರಕಾರ ಸಂಘಟನೆಯೇ ಆತನ ಫೋಟೋ ಪ್ರಕಟಿಸಿದೆ. ಆತನ ಹೆಸರನ್ನು ಅಬು ಖಾಲಿದ್ ಅಲ್-ಹಿಂದ್ ಎಂದು ಉಲ್ಲೇಖಿಸಲಾಗಿದೆ.
ಐಸಿಸ್ ಪ್ರಕಟಿಸಿರುವ ಫೋಟೋವನ್ನು ನೋಡಿ ಪೊಲೀಸರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಆತನ ನಿಜವಾದ ಹೆಸರು ಮೊಹಮ್ಮದ್ ಮುಹ್ಸಿನ್ (21), ಈತ ಕೇರಳದ ಕಾಸರಗೋಡಿನವನು ಎಂದು ತಿಳಿಸಿದ್ದಾರೆ.
ತ್ರಿಕ್ಕರಿಪುರದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಮುಹ್ಸಿನ್, ಐಸಿಸ್ ಸೇರಿಕೊಂಡಿದ್ದ. ಕಳೆದ ವರ್ಷ ಜೂನ್ 18ರಂದು ಅಫ್ಘಾನಿಸ್ತಾನದ ದ ಐಸಿಸ್ ನೆಲೆಗಳ ಮೇಲೆ ನಡೆಸಲಾಗಿದ್ದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ