ಬಿಹಾರದಲ್ಲಿ 17,685 ಮಂದಿಗೆ ಒಬ್ಬ ವೈದ್ಯ: ಆರೋಗ್ಯ ಸಚಿವ
Team Udayavani, Mar 24, 2018, 11:58 AM IST
ಪಟ್ನಾ : ಬಿಹಾರದಲ್ಲಿ 17,685 ಮಂದಿಗೆ ಒಬ್ಬ ವೈದ್ಯ ಇದ್ದಾರೆ ಎಂದು ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ವೈದ್ಯರು ಮತ್ತು ಜನರ ಅನುಪಾತ 1: 17,685 ಇದೆ; ರಾಷ್ಟ್ರಮಟ್ಟದಲ್ಲಿ ಇದು 1: 11,097ಇದೆ ಎಂದು ಸಚಿವ ಪಾಂಡೆ ಅವರು ಆರ್ಜೆಡಿಯ ಆಖ್ತರೂಲ್ ಇಸ್ಲಾಮ್ ಶಹೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಪ್ರಕೃತ 6,830 ವೈದ್ಯರು ಸೇವಾ ನಿರತರಾಗಿದ್ದಾರೆ; ಈ ಸಂಖ್ಯೆಯಲ್ಲಿ ಮೆಡಿಕಲ್ ಕಾಲೇಜುಗಳಲ್ಲಿರುವ ವೈದ್ಯರೂ ಸೇರಿದ್ದಾರೆ ಎಂದು ಸಚಿವ ಪಾಂಡೆ ತಿಳಿಸಿದರು.