ಜಮ್ಮು: ಸ್ಟೋಟಕ್ಕೆ ಸೈನಿಕ ಹುತಾತ್ಮ

Team Udayavani, Nov 17, 2019, 7:15 PM IST

ಜಮ್ಮು ಕಾಶ್ಮೀರ: ಪಲ್ಲನ್ವಾಲ್ಲಾದ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸೈನಿಕ ಪ್ರಾಣತ್ಯಾಗ ಮಾಡಿದ್ದಾನೆ.

ಸ್ಫೋಟದಲ್ಲಿ 2 ಮಂದಿ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ಹಿನ್ನೆಲೆಯನ್ನು ಅರಿಯುವ ಪ್ರಯತ್ನಗಳು ನಡೆದಿದ್ದು, ಪ್ರದೇಶವನ್ನು ಸೈನಿಕರು ಸುತ್ತುವರಿದಿದ್ದಾರೆ. ಸ್ಪೋಟಕ್ಕೆ ಇಐಡಿ ಸ್ಫೋಟಕವನ್ನು ಬಳಸಿರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಹುತಾತ್ಮ ಸೈನಿಕನನ್ನು ಉತ್ತರ ಪ್ರದೇಶದ ಬೌದೌರಿಯಾ ಗ್ರಾಮದ ಹವಾಲ್ದಾರ್‌ ಸಂತೋಷ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ