ಇಲ್ಲಿ ಕೆಜಿ ಈರುಳ್ಳಿಗೆ ಕೇವಲ 35 ರೂ.!

ಸಹಕಾರ ಮಾರುಕಟ್ಟೆ ಮಂಡಳಿಯಿಂದ ಮಾರಾಟ

Team Udayavani, Nov 30, 2019, 8:20 PM IST

ಪಾಟ್ನಾ: ಈರುಳ್ಳಿ ದರ ಕೆಜಿಗೆ ಕೇವಲ 35 ರೂ. ಅಷ್ಟೆ…
ಅರೆ, ಇದೇನು ಈರುಳ್ಳಿ ದರ ಶತಕ ದಾಟಿದ್ದು, ಎಲ್ಲೂ ಕೂಡ ಬೆಲೆ ಕಡಿಮೆಯಾಗಿರುವ ಸುದ್ದಿ ಇಲ್ಲ. ಇದು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು.

ಹೌದು, ಇದು ನಿಜ. ಬಿಹಾರದಲ್ಲಿ ರಾಜ್ಯ ಸಹಕಾರ ಮಾರುಕಟ್ಟೆ ಮಂಡಳಿಯು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಈರುಳ್ಳಿ ನೀಡುವ ಉದ್ದೇಶದಿಂದ ಸಬ್ಸಿಡಿ ದರದಲ್ಲಿ 35 ರೂ.ಗೆ ಮಾರಾಟ ಮಾಡುತ್ತಿದೆ. ಇದಕ್ಕಾಗಿ ಪಾಟ್ನಾದ ಸುಮಾರು 25ಕ್ಕೂ ಅಧಿಕ ಪ್ರದೇಶದಲ್ಲಿ ಮೊಬೈಲ್‌ ವಾಹನದ ಮೂಲಕ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕಾಲೊನಿಗೂ ಈ ವಾಹನ ಬರುತ್ತದೆ. ಒಬ್ಬರು ಗರಿಷ್ಠ ಎರಡು ಕೆಜಿ ಮಾತ್ರ ಖರೀದಿಸಬಹುದು.

ಹೆಲ್ಮೆಟ್‌ ಧರಿಸಿ ಮಾರಾಟ:
ಈ ಮೊಬೈಲ್‌ ವಾಹನ ಬರುತ್ತಿದ್ದಂತೆ ಗ್ರಾಹಕರು ಮುತ್ತಿಕೊಳ್ಳುತ್ತಿದ್ದು, ಸುಮಾರು ದೂರದವರೆಗೂ ಕ್ಯೂನಲ್ಲಿ ನಿಂತಿರುತ್ತಾರೆ. ಬೇಗ ಈರುಳ್ಳಿ ಸಿಗದಿದ್ದರೆ ಜನರು ರೊಚ್ಚಿಗೇಳುವ ಸಾಧ್ಯತೆ ಇರುವುದರಿಂದ ವಾಹನದ ಸಿಬ್ಬಂದಿ, ಮಾರಾಟಗಾರರು ಹೆಲ್ಮೆಟ್‌ ಧರಿಸಿಕೊಂಡೇ ಈರುಳ್ಳಿ ಮಾರುತ್ತಾರೆ. ಅರಹಾ ಪ್ರದೇಶದಲ್ಲಿ ಜನರ ದೊಂಬಿ ಉಂಟಾಗಿ ಕಲ್ಲು ತೂರಿದ್ದರಿಂದ ಹಲವರು ಗಾಯಗೊಂಡಿದ್ದರು. ನಮಗೆ ಪೊಲೀಸ್‌ ಭದ್ರತೆ ನೀಡಿಲ್ಲ. ಹೀಗಾಗಿ ನಾವೇ ಸ್ವಯಂ ರಕ್ಷಣೆಗೆ ಹೆಲ್ಮೆಟ್‌ ಧರಿಸಿಕೊಂಡು ಈರುಳ್ಳಿ ಮಾರುತ್ತಿದ್ದೇವೆ ಎಂದು ಸಹಕಾರದ ಸಂಘದ ಸಿಬ್ಬಂದಿ ತಿಳಿಸಿದ್ದಾರೆ.

ಪ್ರತಿ ಕಾಲೊನಿಗೂ ಈ ಮೊಬೈಲ್‌ ವಾಹನ ಬರುತ್ತದೆ. ಜನರಿಗೆ ಅಗತ್ಯವಿರುವಷ್ಟು ಈರುಳ್ಳಿ ಪೂರೈಸಲಾಗುವುದು. ಗಲಾಟೆ, ದಾಂಧಲೆಗೆ ಅವಕಾಶ ಕೊಡಬೇಡಿ ಎಂದು ಸಂಘದ ನೌಕರರು ಮನವಿ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ