ಯುವತಿ ಖಾತೆಗೆ ಕನ್ನ: 1.87 ಲಕ್ಷ ರೂ. ವಂಚನೆ
Team Udayavani, Nov 18, 2021, 10:00 PM IST
ಪುಣೆ: ಆಮಿಷಕ್ಕೆ ಒಳಗಾದ ಯುವತಿ ಆನ್ಲೈನ್ ಶಾಪಿಂಗ್ನ ಸೂಚನೆಗಳನ್ನು ನಿರ್ಲಕ್ಷಿಸಿದ ಕಾರಣ ಸೈಬರ್ ಕಳ್ಳರು ಆಕೆಯ ಖಾತೆಯಿಂದ 1.87 ಲಕ್ಷ ರೂ. ಗಳ ವಹಿವಾಟು ನಡೆಸಿ ವಂಚಿಸಿದ ಘಟನೆ ಸಂಭವಿಸಿದೆ. ಎನ್ಐಬಿಎಂ ಪರಿಸರದ 23 ವರ್ಷದ ಯುವತಿ ಕೊಂಡ್ವಾ ಪೊಲೀಸರಿಗೆ ದೂರು ನೀಡಿದ್ದಾರೆ.
3 ತಿಂಗಳ ಹಿಂದೆ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಶೂ ಆರ್ಡರ್ ಮಾಡಿದ್ದರು. ಆದರೆ ಆಕೆಗೆ ದೃಢೀಕರಣ ಕೋಡ್ ಬರಲಿಲ್ಲ. ಇದರಿಂದ ಯುವತಿ ಗೂಗಲ್ನಲ್ಲಿ ಸರ್ಚ್ ಮಾಡಿ ವೆಬ್ಸೈಟ್ ಮೂಲಕ ಕಸ್ಟಮರ್ ಕೇರ್ ಸಂಖ್ಯೆ ಪಡೆದುಕೊಂಡಿದ್ದಾಳೆ.
ದುರದೃಷ್ಟವಶಾತ್ ಇದು ಸೈಬರ್ ಕಳ್ಳರು ಗೂಗಲ್ನಲ್ಲಿ ನೀಡಿದ ನಕಲಿ ಸಂಖ್ಯೆಯಾಗಿತ್ತು. ಹಾಗಾಗಿ ಆ ನಂಬರ್ ಗೆ ಕರೆ ಮಾಡಿ ಸಂಪರ್ಕಿಸಿದಾಗ ಆಕೆಗೆ ಒಟಿಪಿ ಹಂಚಿಕೊಳ್ಳಲು ಕೇಳಲಾಯಿತು. ಅದರಂತೆ ಆಕೆ ಒಟಿಪಿಯನ್ನು ಹಂಚಿಕೊಂಡಿದ್ದು, ಇದನ್ನು ಬಳಸಿಕೊಂಡು ಆಕೆಯ ಖಾತೆಯಿಂದ ವಿವಿಧ ವಹಿವಾಟು ನಡೆಸಿ ಸುಮಾರು 1,81,062 ರೂ. ವಂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ