ಇದು ಇಲ್ಲಿ ಮಾತ್ರ ಸಾಧ್ಯ!: ಬಿಬಿಸಿ ನಿರೂಪಕನನ್ನು ಬೆರಗುಗೊಳಿಸಿದ ಶ್ವಾನದ ಬೈಕ್ ರೈಡಿಂಗ್

Team Udayavani, Dec 9, 2019, 6:54 PM IST

ಮುಂಬಯಿ: ಭಾರತ ನಿಜವಾಗಿಯೂ ವೈವಿಧ್ಯಮಯ ದೇಶ. ಇಲ್ಲಿ ದಿನಂಪ್ರತಿ ಪ್ರಪಂಚದ ಯಾವುದೇ ಕಡೆಯಲ್ಲಿ ನಡೆಯದ ಹಲವಾರು ವಿಸ್ಮಯಗಳು ವಿಶೇಷ ಘಟನೆಗಳು, ವಿಚಿತ್ರ ಸಂಗತಿಗಳು ನಡೆಯುತ್ತಲೇ ಇರುತ್ತವೆ.

ಹೀಗೆ ಮುಂಬಯಿಯ ರಸ್ತೆಯೊಂದರಲ್ಲಿ ಸೆರೆಸಿಕ್ಕ ವಿಚಿತ್ರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮತ್ತು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೊಟೋಗಳಲ್ಲೇ ಇದು ಹಾಸ್ಯಭರಿತ ಫೊಟೋ ಎಂದು ಹೇಳಿದರೆ ತಪ್ಪಾಗಲಾರದು.

ಬಿಬಿಸಿ ಚಾನೆಲ್ ನಿರೂಪಕ ಟಾಮ್ ಬ್ರೂಕ್ ಅವರು ತಮ್ಮ ಮುಂಬರುವ ‘ಟಾಕಿಂಗ್ ಮೂವೀಸ್’ ಎಂಬ ವಿಶೇಷ ಸರಣಿಯ ಶೂಟಿಂಗ್ ಅನ್ನು ಮುಂಬಯಿ ರಸ್ತೆಗಳಲ್ಲಿ ಆಟೋ ಒಂದರಲ್ಲಿ ಕುಳಿತು ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಹಿನ್ನಲೆಯಲ್ಲಿ ಸಾಗಿ ಹೋಗುವ ಸ್ಕೂಟರ್ ನ ಹಿಂಬದಿ ಕುಳಿತ (ನಿಂತ) ನಾಯಿಯೇ ಇದೀಗ ನೆಟ್ಟಿಗರ ಗಮನವನ್ನು ತನ್ನೆಡೆಗೆ ಸೆಳೆದಿರುವುದು.


ತನ್ನ ಮಾಲಕನ ಬೆನ್ನಿನ ಮೇಲೆ ತನ್ನೆರಡು ಮುಂಗಾಲುಗಳನ್ನು ಇರಿಸಿ ಹಿಂಗಾಲುಗಳನ್ನು ಸೀಟುಗಳ ಮೇಲೆ ಇಟ್ಟುಕೊಂಡು ಬ್ಯಾಲೆನ್ಸ್ ನಲ್ಲಿ ನಿಂತಿರುವ ಈ ಬಿಳಿ ನಾಯಿ ತನ್ನೊಡೆಯನ ಸ್ಕೂಟರಿನಲ್ಲಿ ಜಾಲಿ ರೈಡಿಂಗ್ ಹೊರಟಿದೆ.

ಇದೀಗ ಈ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಟಿಂ ಕಿಂಬರ್ ಈ ವಿಡಿಯೋಗೆ ‘ದಿಸ್ ಇಸ್ ದಿ ಮೋಸ್ಟ್ ಇಂಡಿಯನ್ ಫೊಟೋ ಬಾಂಬ್’ ಎಂಬ ಟೈಟಲ್ ನೀಡಿದ್ದಾರೆ. 16 ನಿಮಿಷಗಳ ಅವಧಿಯ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ.

ಈ ವಿಡಿಯೋ ಅಪ್ಲೋಡ್ ಆದಾಗಿನಿಂದ ಇಂದಿನವರೆಗೆ 98,000 ಬಾರಿ ವೀಕ್ಷಿಸಲ್ಪಟ್ಟಿದೆ ಮತ್ತು ಸಾವಿರಕ್ಕೂ ಹೆಚ್ಚು ಶೇರ್ ಗಳನ್ನು ಕಂಡಿದೆ. ಮಾತ್ರವಲ್ಲದೇ ಈ ವಿಡಿಯೋ ನೋಡಿದ ನೆಟ್ಟಿಗರು ಇದಕ್ಕೆ ಫನ್ನಿ ಕಮೆಂಟ್ಸ್ ಗಳನ್ನೂ ಸಹ ಮಾಡುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ