ಅಡುಗೆ ಅನಿಲಕ್ಕೂ ಇನ್ನು ಒಟಿಪಿ
Team Udayavani, Oct 16, 2020, 11:32 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್ ಮನೆ ಬಾಗಿಲಿಗೆ ಸರಬರಾಜಾಗುವ ಸಂದರ್ಭ ಒಟಿಪಿ (ಒನ್ ಟೈಂ ಪಾಸ್ವರ್ಡ್) ನೀಡಬೇಕಾದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ನ. 1ರಿಂದ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಈ ಹೊಸ ಬದಲಾವಣೆ ಜಾರಿಗೆ ಬರಲಿದೆ. ಸಿಲಿಂಡರ್ ಹಸ್ತಾಂತರವಾಗಬೇಕಾದರೆ ಒಟಿಪಿ ನೀಡುವುದು ಕಡ್ಡಾಯ. ಅಡುಗೆ ಅನಿಲ ಕಳ್ಳತನ ತಪ್ಪಿಸುವ ಮತ್ತು ಸರಿಯಾದ ಗ್ರಾಹಕನನ್ನು ಗುರುತಿಸುವ ಉದ್ದೇಶದಿಂದ ತೈಲ ಕಂಪೆನಿಗಳು “ಪೂರೈಕೆ ದೃಢೀಕರಣ ಕೋಡ್’ (ಡಿಎಸಿ) ಎಂಬ ಹೊಸ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿವೆ. ಇದು ಮೊದಲಿಗೆ 100 ಸ್ಮಾರ್ಟ್ ಸಿಟಿಗಳಲ್ಲಿ ಅನುಷ್ಠಾನಗೊಳ್ಳುತ್ತದೆ.
ಏನು ಮಾಡಬೇಕು?
ಸಿಲಿಂಡರ್ಗೆ ಬುಕಿಂಗ್ ಬಳಿಕ ಗ್ರಾಹಕನ ನೋಂದಾಯಿತ ಮೊಬೈಲ್ಗೆ ಒಟಿಪಿ ರವಾನಿಸಲಾಗುತ್ತದೆ. ಸಿಲಿಂಡರ್ ತರುವ ವ್ಯಕ್ತಿಗೆ ಈ ಒಟಿಪಿ ಸಂಖ್ಯೆ ನೀಡಬೇಕು. ವಾಣಿಜ್ಯ ಸಿಲಿಂಡರ್ಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು