ಹತ್ರಾಸ್ ಲೈಂಗಿಕ ಕಿರುಕುಳ ಕೇಸ್: ಮಗಳ ಎದುರಲ್ಲೇ ತಂದೆಯನ್ನು ಹತ್ಯೆಗೈದ ಆರೋಪಿ
ಸೋಮವಾರ ಸಂಜೆ ಗೌರವ್ ಪತ್ನಿ ಮತ್ತು ಚಿಕ್ಕಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು.
Team Udayavani, Mar 2, 2021, 12:10 PM IST
ಹತ್ರಾಸ್(ಉತ್ತರಪ್ರದೇಶ):2018ರಲ್ಲಿ ನಡೆದ ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ಸಂತ್ರಸ್ತ ಯುವತಿಯ ಎದುರಲ್ಲೇ ತಂದೆಯನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಸೋಮವಾರ(ಮಾರ್ಚ್ 01, 2021) ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!
ಏನಿದು ಪ್ರಕರಣ:
ಪ್ರಕರಣದ ಕುರಿತು ಮಾಹಿತಿ ನೀಡಿರುವ ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್, ಮೃತ ವ್ಯಕ್ತಿಯನ್ನು ಅಮರೀಶ್ ಶರ್ಮಾ ಎಂದು ಗುರುತಿಸಲಾಗಿದೆ. ಅಮರೀಶ್ ಶರ್ಮಾ 2018ರ ಜುಲೈನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಪ್ರಮುಖ ಆರೋಪಿ ಗೌರವ್ ಶರ್ಮಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಾದ ನಂತರ ಪೊಲೀಸರು ಗೌರವ್ ಶರ್ಮಾನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಘಟನೆ ನಡೆದು ಒಂದು ತಿಂಗಳ ನಂತರ ಗೌರವ್ ಜಾಮೀನು ಪಡೆದು ಹೊರಬಂದಿರುವುದಾಗಿ ವಿವರಿಸಿದ್ದಾರೆ.
ಗೌರವ್ ಜಾಮೀನು ಪಡೆದು ಬಿಡುಗಡೆಯಾದ ನಂತರ ಎರಡು ಕುಟುಂಬಗಳ ನಡುವೆ ದ್ವೇಷ ಹೆಚ್ಚಾಗಿತ್ತು. ಅಲ್ಲದೇ ಎರಡು ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಲೇ ಇತ್ತು. ಸೋಮವಾರ(ಮಾ.01) ಸಂಜೆ ಪ್ರಕರಣದ ಪ್ರಮುಖ ಆರೋಪಿ ಗೌರವ್ ಶರ್ಮಾ ಮತ್ತು ಇತರ ಆರೋಪಿಗಳು ಸಂತ್ರಸ್ತ ಯುವತಿಯ ತಂದೆ ಅಮರೀಶ್ ಶರ್ಮಾ ಅವರನ್ನು ಗುಂಡಿಟ್ಟು ಹತ್ಯೆಗೈದಿರುವುದಾಗಿ ಜೈಸ್ವಾಲ್ ತಿಳಿಸಿದ್ದಾರೆ.
ಸೋಮವಾರ ಸಂಜೆ ಗೌರವ್ ಪತ್ನಿ ಮತ್ತು ಚಿಕ್ಕಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ಅಮರೀಶ್ ಶರ್ಮಾ ಮತ್ತು ಮಗಳು ಕೂಡಾ ದೇವಸ್ಥಾನದ ವಠಾರದಲ್ಲಿ ಕುಳಿತಿದ್ದರು. ಗೌರವ್ ಪತ್ನಿ ತನ್ನ ಪತಿ ವಿರುದ್ಧ ದೂರು ನೀಡಿದ್ದ ವಿಚಾರ ಪ್ರಸ್ತಾಪಿಸಿದ್ದು, ಈ ಸಂದರ್ಭದಲ್ಲಿ ವಾಗ್ವಾದ ತಾರಕಕ್ಕೇರಿತ್ತು. ನಂತರ ಗೌರವ್ ಕೂಡಾ ಸ್ಥಳಕ್ಕೆ ಆಗಮಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಗೌರವ್ ಅಮರೀಶ್ ಮೇಲೆ ಏಳು ಸುತ್ತು ಗುಂಡು ಹಾರಿಸಿ ಕೊಲೆಗೈದಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುತ್ತೆ ವಿಶೇಷ ಪ್ರಸಾದ!
ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ
ದೆಹಲಿಯಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ: ಕೇಜ್ರಿವಾಲ್ ಗೆ ಸಿಎಐಟಿ
ಮುಂಬೈಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರದ ಗ್ರೀನ್ ಸಿಗ್ನಲ್
MUST WATCH
ಹೊಸ ಸೇರ್ಪಡೆ
ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್. ಪಿ. ಶೆಣೈ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
“ಸಮಾಜದ ಜನರ ಅಭ್ಯುದಯ ಅಸೋಸಿಯೇಶನ್ನ ಧ್ಯೇಯ’